ಸುಧಾ ಮೂರ್ತಿ - ನೀತಾ ಅಂಬಾನಿವರೆಗೆ ಈ ಯಶಸ್ವಿ ಬ್ಯುಸಿನೆನ್‌ ಮಹಿಳೆಯರು ಓದಿದೆಷ್ಟು?

First Published | Aug 4, 2023, 5:55 PM IST

ವಿಶ್ವದ ಬ್ಯುಸಿನೆಸ್‌ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರು ಯಶಸ್ವಿಯಾಗಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ನೀತಾ ಅಂಬಾನಿಯಿಂದ ಹಿಡಿದು ಸುಧಾ ಮೂರ್ತಿ ಮತ್ತು ಕಿರಣ್ ಮಂಜುಂದರ್ ಶಾ ವರೆಗೆ ಹಲವು ಮಹಿಳೆಯರು
ಈ ಪಟ್ಟಿಯಲ್ಲಿ ಇದ್ದಾರೆ. ಈ ಯಶಸ್ವಿ ಮಹಿಳೆಯರ ಶೈಕ್ಷಣಿಕ ಅರ್ಹತೆ ಏನು ಗೊತ್ತಾ?
 

ಸುಧಾ ಮೂರ್ತಿ:
ಸುಧಾ ಮೂರ್ತಿಯವರು BVB ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ (ಈಗ KLE ಟೆಕ್ನಾಲಜಿಕಲ್ ಯೂನಿವರ್ಸಿಟಿ) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನೀತಾ ಅಂಬಾನಿ
ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕಿ ನೀತಾ ಅಂಬಾನಿ ಅವರು ನಾರ್ಸಿ ಮಂಜೀ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ.

Tap to resize

ಇಂದಿರಾ ನೂಯಿ:
ಇಂದಿರಾ ನೂಯಿ 1970 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದರು ಮತ್ತು 1976 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಲ್ಕತ್ತಾದಿಂದ ಸ್ನಾತಕೋತ್ತರ ಕಾರ್ಯಕ್ರಮದ ಡಿಪ್ಲೋಮಾ ಪೂರ್ಣಗೊಳಿಸಿದರು. 1978 ರಲ್ಲಿ ಯೇಲ್ ಸ್ಕೂಲ್ ಆಫ್‌ ಮ್ಯಾನೇಜ್ಮೆಂಟ್‌ನಲ್ಲಿ  ಅವರು ಪಬ್ಲಿಕ್‌ ಆಂಡ್‌ ಪ್ರೈವೇಟ್‌ ಮ್ಯಾನೇಜ್ಮೆಂಟ್ ಪದವಿ ಪಡೆದರು.

ಕಿರಣ್ ಮಂಜುಂದರ್ ಶಾ:
ಕಿರಣ್ ಮಂಜುಂದರ್ ಶಾ ಅವರು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲ್‌ಗೆ ಸೇರಿದರು. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ರೋಶ್ನಿ ನಾಡಾರ್ :
ರೋಶ್ನಿ ನಾಡಾರ್ ಅವರು ಭಾರತದಲ್ಲಿ  ಶಾಲಾ ಶಿಕ್ಷಣ ಪೂರ್ಣಗೊಳಿಸಿದ ನಂತರ. ಅವರು ಈಸ್ಟರ್ನ್‌  ವಿಶ್ವವಿದ್ಯಾಲಯಕ್ಕೆ ಸೇರಿದರು, ಅಲ್ಲಿ ಅವರು ರೇಡಿಯೋ / ಟಿವಿ / ಚಲನಚಿತ್ರದ ಮೇಲೆ ಕೇಂದ್ರೀಕರಿಸಿ ಸಂವಹನದಲ್ಲಿ ಅಧ್ಯಯನ ಮಾಡಿದರು. ಅವರು  ಕೆಲ್ಲಾಗ್ಸ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಪದವಿ ಪಡೆದರು.

ರೇಷ್ಮಾ ಕೇವಲರಮಣಿ:
ರೇಷ್ಮಾ ಕೇವಲರಮಣಿ ಅವರು ಬೋಸ್ಟನ್ ವಿಶ್ವವಿದ್ಯಾನಿಲಯದಿಂದ ಲಿಬರಲ್ ಆರ್ಟ್ಸ್/ಮೆಡಿಕಲ್ ಸೈನ್ಸ್ ಕುರಿತು ಏಳು ವರ್ಷಗಳ ಸುದೀರ್ಘ ಕೋರ್ಸ್ ಅನ್ನು ಪೂರ್ಣಗೊಳಿಸಿದರು ಮತ್ತು ಮ್ಯಾಂಚೆಸ್ಟರ್ ಜನರಲ್ ಆಸ್ಪತ್ರೆಯಲ್ಲಿ ಫೆಲೋಶಿಪ್ ನಂತರ ಅವರು 2015 ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಜನರಲ್‌ ಮ್ಯಾನೇಜ್ಮೆಂಟ್  ಪದವಿ ಪಡೆದರು.

ಸ್ಮಿತಾ ಕೃಷ್ಣ ಗೋದ್ರೆಜ್:
ಸ್ಮಿತಾ ಕೃಷ್ಣ ಗೋದ್ರೆಜ್ ಮುಂಬೈನ ಜೆಬಿ ಪೆಟಿಟ್ ಶಾಲೆಯ ನಂತರ ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಬಿಎ ವ್ಯಾಸಂಗ ಮಾಡಿದ್ದಾರೆ.

Latest Videos

click me!