ಹೊಸ ವರಸೆ ತೆಗೆದ ಮದ್ಯ ದೊರೆ ವಿಜಯ್ ಮಲ್ಯ, ಏನಂತೀಗ?

First Published | Dec 13, 2020, 3:03 PM IST

ಮದ್ಯದ ದೊರೆ ವಿಜಯ್ ಮಲ್ಯ ಮೇಲಿನ 9,000 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ಉರುಳು ಬಿಗಿಯಾಗುತ್ತಿದೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಮಲ್ಯ, ಕಾನೂನು ಹೋರಾಟ ಮುಂದುವರಿಸಿದ್ದಾರೆ. ಬ್ಯಾಂಕ್ ಸಾಲ ಮರುಪಾವತಿಗೆ ಹಲವು ಕತೆ ಹೇಳಿದ ಮಲ್ಯ, ಇದೀಗ ಕಾನೂನು ಹೋರಾಟದ ನಡುವೆ ಹೊಸ ಕ್ಯಾತೆ ತಗೆದಿದ್ದಾರೆ.

ಭಾರತದಿಂದ ತಲೆಮರೆಸಿಕೊಂಡು ಲಂಡನ್‌ನಲ್ಲಿ ನೆಲೆಸಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ ದಿನದಿಂದ ದಿನಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
9,000 ಕೋಟಿ ರೂಪಾಯಿ ವಂಚನೆ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ವಾಪಸ್ ಕರೆಸಲು ಕೇಂದ್ರ ಸರ್ಕಾರ ನಿರಂತರ ಹೋರಾಟ ಮಾಡುತ್ತಿದೆ. ಅತ್ತ ಮಲ್ಯ ಕೂಡ ಕಾನೂನು ಹೋರಾಟ ಮಾಡುತ್ತಿದ್ದಾರೆ.
Tap to resize

ಭಾರತದಿಂದ ಪಲಾಯನ ಮಾಡಿ ಲಂಡನ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಹಾಯಾಗಿ ಕಾಲಕಳೆಯುತ್ತಿದ್ದ ವಿಜಯ್ ಮಲ್ಯ ಇದೀಗ ತಿಂಗಳ ಖರ್ಚಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಆಹಾರ, ಮನೆ ಖರ್ಚು, ಕಾನೂನು ಹೋರಾಟ, ವಕೀಲರ ಫೀಸ್, ಇತರ ಖರ್ಚುಗಳೆಲ್ಲಾ ಸೇರಿದರೆ ವಿಜಯ್ ಮಲ್ಯಗೆ ಪ್ರತಿ ತಿಂಗಳು ಭಾರತೀಯ ರೂಪಾಯಿಗಳಲ್ಲಿ 22 ಲಕ್ಷ ರೂಪಾಯಿ ಅಗತ್ಯವಿದೆ.
ಭಾರತದಿಂದ ಪರಾಗಿಯಾದ ಬಳಿಕ ಲಂಡನ್‌ನಲ್ಲಿ ವಿಜಯ್ ಮಲ್ಯ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಸತತ 3 ವರ್ಷಗಳಿಂದ ಕಾನೂನು ಹೋರಾಟಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ಲಂಡನ್ ಕಾನೂನು ಹೋರಾಟದಲ್ಲಿ ಮಲ್ಯ ಪರ ವಕೀಲ ಫಿಲಿಪ್ ಮಾರ್ಶಲ್ ವಾದ ಮಂಡಿಸುತ್ತಿದ್ದಾರೆ. ಆದರೆ ಅಕ್ಟೋಬರ್ 2020ರಿಂದ ಫಿಲಿಪ್ ಮಾರ್ಶಲ್ ಅವರಿಗೆ ಮಾಸಿಕ ಫೀಸ್ ನೀಡಿಲ್ಲ.
ಮಲ್ಯ ನಡೆ ವಿರುದ್ಧ ಗರಂ ಆಗಿರುವ ವಕೀಲ ಫಿಲಿಪ್ ಮಾರ್ಶಲ್, ಬಾಕಿ ಹಣ ಪಾವತಿಸದಿದ್ದರೆ ವಾದ ಮಂಡನೆಯಿಂದ ಹಿಂದೆ ಸರಿಯುವುದಾಗಿ ಎಚ್ಚರಿಸಿದ್ದಾರೆ.
ಡಿಸೆಂಬರ್ 18ಕ್ಕೆ ಮಲ್ಯ ಪ್ರಕರಣದ ವಿಚಾರಣೆ ನಡೆಯಲಿದೆ. ಹೀಗಾಗಿ ವಿಜಯ್ ಮಲ್ಯ ಅವರ ಫ್ರಾನ್ಸ್‌ನಲ್ಲಿರುವ ಆಸ್ತಿ ಮಾರಾಟದಿಂದ ಬಂದಿರುವ 14 ಕೋಟಿ ರೂಪಾಯಿ ಹಣ ತನಗೆ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಲಂಡನ್ ಕೋರ್ಟ್ ವಿಜಯ್ ಮಲ್ಯ ಅವರ ಫ್ರಾನ್ಸ್ ಆಸ್ತಿಯನ್ನು ಮಾರಾಟ ಮಾಡಿತ್ತು. ಈ ಮಾರಾಟದ ಮೂಲಕ ಯುಕೆ ಕೋರ್ಟ್ 14 ಕೋಟಿ ರೂಪಾಯಿ ಹಣ ಸಂಗ್ರಹಿಸಿತ್ತು. ಈ ಹಣ ತನಗೆ ಬಿಡುಗಡೆ ಮಾಡಿ, ವಕೀಲರ ಹಣ ಪಾವತಿಗೆ ಸಹಕರಿಸಬೇಕು ಎಂದು ಮಲ್ಯ ಮನವಿ ಮಾಡಿದ್ದರು.
ಮಲ್ಯ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಾಬರ್ಟ್ ಶಾಫರ್ ತಿರಸ್ಕರಿಸಿದ್ದಾರೆ. ಆದರೆ ವಕೀಲರ ಬಾಕಿ ಹಣ ಪಾವತಿಗೆ ಬೇಕಾದ ಹಣ ಬಿಡುಗಡೆ ಮಾಡಲು ಅವಕಾಶ ನೀಡಿದ್ದಾರೆ.

Latest Videos

click me!