Largest companies In the World: ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಜಗತ್ತಿನ ಟಾಪ್‌-10 ಕಂಪನಿಗಳಿವು!

Published : Aug 25, 2023, 07:39 PM ISTUpdated : Aug 25, 2023, 08:09 PM IST

ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಕಂಪನಿಗಳಿವೆ. ಆದರೆ, ಮಾರುಕಟ್ಟೆ ಮೌಲ್ಯದಲ್ಲಿ ಜಗತ್ತಿನ ಅಗ್ರ 10 ಕಂಪನಿಗಳು ಯಾವುದು ಎನ್ನುವ ಕುತೂಹಲ ನಿಮಗೆ ಯಾವಾಗಲಾದರೂ ಬಂದಿದ್ಯಾ? ಹಾಗಿದ್ದಲ್ಲಿ ಇಲ್ಲಿದೆ ನೋಡಿ ಜಗತ್ತಿನ ಅಗ್ರ 10 ಬೃಹತ್‌ ಕಂಪನಿಗಳು

PREV
110
Largest companies In the World: ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಜಗತ್ತಿನ ಟಾಪ್‌-10 ಕಂಪನಿಗಳಿವು!

Eli Lilly: ಅಮೆರಿಕದ ಫಾರ್ಮಾಸ್ಯುಟಿಕಲ್‌ ದಿಗ್ಗಜ ಕಂಪನಿ. ಇಂಡಿಯಾನಾದ ಇಂಡಿಯಾಪೊಲಿಸ್‌ನಲ್ಲಿ ಇದರ ಪ್ರಧಾನ ಕಚೇರಿ ಇದ್ದು, ಕಂಪನಿಯ ಮಾರುಕಟ್ಟೆ ಮೌಲ್ಯ 43 ಲಕ್ಷ ಕೋಟಿ ರೂಪಾಯಿ. ವಿಶ್ವದ 10ನೇ ಅಗ್ರ ಕಂಪನಿ ಎನಿಸಿದೆ.

210

Tesla: ಅಮೆರಿಕದ ಮಲ್ಟಿನ್ಯಾಷನಲ್‌ ಆಟೋಮೇಟಿವ್‌ ಮತ್ತು ಕ್ಲೀನ್‌ ಎನರ್ಜಿ ಕಂಪನಿ. ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಪ್ರಧಾನ ಕಚೇರಿ ಇದ್ದು, ಇದರ ಮಾರುಕಟ್ಟೆ ಮೌಲ್ಯ 62 ಲಕ್ಷ ಕೋಟಿ ರೂಪಾಯಿ. ವಿಶ್ವದ ಅಗ್ರ 10 ಕಂಪನಿಗಳ ಲಿಸ್ಟ್‌ನಲ್ಲಿ 9ನೇ ಸ್ಥಾನದಲ್ಲಿದೆ.

310

Meta: ಫೇಸ್‌ಬುಕ್‌ ಹೆಸರಿನಲ್ಲಿ ಆರಂಭವಾಗಿದ್ದ ಮೆಟಾ ಕಂಪನಿ ಟೆಕ್ನಾಲಜಿ ದೈತ್ಯ. ಸೋಶಿಯಲ್‌ ಮೀಡಿಯಾ ದೈತ್ಯವಾದರೂ, ಬೇರೆ ಬೇರೆ ವಿಭಾಗಗಳಲ್ಲಿ ಕಂಪನಿ ವಿಸ್ತರಿಸುತ್ತಿದೆ. ಇದರ ಮಾರುಕಟ್ಟೆ ಮೌಲ್ಯ 62.57 ಲಕ್ಷ ಕೋಟಿ ರೂಪಾಯಿ.

410

Berkshire: ಅಮೆರಿಕದ ಮಲ್ಟಿನ್ಯಾಷನಲ್‌ ಹೂಡಿಕೆ ಕಂಪನಿ. ವಾರೆನ್‌ ಬಫೆಟ್‌ ಮಾಲೀಕತ್ವದ ಈ ಕಂಪನಿಯ ಪ್ರಧಾನ ಕಚೇರಿ ನೆಬ್ರಸ್ಕಾದ ಒಮಾಹಾದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 64 ಲಕ್ಷ ಕೋಟಿ ರೂಪಾಯಿ

510

NVIDIA: ಅಮೆರಿಕದ ಮಲ್ಟಿನ್ಯಾಷನಲ್‌ ಟೆಕ್ನಾಲಜಿ ಕಂಪನಿ ಎನ್ವಿಡಿಯಾ ಕ್ಯಾಲಿಫೋರ್ನಿಯಾದ ಸ್ಯಾಂಟಾ ಕ್ಲಾರಾದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರ ಮಾರುಕಟ್ಟೆ ಮೌಲ್ಯ  96 ಲಕ್ಷ ಕೋಟಿ ರೂಪಾಯಿ

610

Amazon: ಜೆಫ್ ಬೆಜೋಸ್‌ ಮಾಲೀಕತ್ವದ ಅಮೆಜಾನ್‌, ಈ ಕಾಮರ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌, ಎಐ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 115 ಲಕ್ಷ ಕೋಟಿ ರೂಪಾಯಿ

710

Alphabet: ಟೆಕ್‌ ದೈತ್ಯ ಗೂಗಲ್‌ನ ಮಾತೃ ಸಂಸ್ಥೆ. ಗೂಗಲ್‌ಅನ್ನೇ ಪರಿಷ್ಕರಿಸಿ ಆಲ್ಫಾಬೆಟ್‌ ಕಂಪನಿಯನ್ನಾಗಿ ಮಾಡಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 138 ಲಕ್ಷ ಕೋಟಿ ರೂಪಾಯಿ

810

Saudi Aramco: ಸೌದಿ ಅರೇಬಿಯನ್‌ ಆಯಿಲ್‌ ಗ್ರೂಪ್‌. ಸೌದಿ ಸರ್ಕಾರದ ಮಾಲೀಕತ್ವದಲ್ಲಿರುವ ಆಯಿಲ್ ಆಂಡ್‌ ನ್ಯಾಚುರಲ್‌ ಗ್ಯಾಸ್‌ ಕಂಪನಿ. ಇದರ ಪ್ರಧಾನ ಕಚೇರಿ ದಹರನ್‌ನಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 184 ಲಕ್ಷ ಕೋಟಿ ರೂಪಾಯಿ.

ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

910

Microsoft: ಅಮೆರಿಕದ ಮತ್ತೊಂದು ಮಲ್ಟಿನ್ಯಾಷನಲ್‌ ಟೆಕ್ನಾಲಜಿ ಕಂಪನಿ. ವಾಷಿಂಗ್ಟನ್‌ನ ರೆಡ್ಮಂಡ್‌ನಲ್ಲಿ ಇದರ ಪ್ರಧಾನ ಕಚೇರಿ ಇದೆ. ಇದರ ಮಾರುಕಟ್ಟೆ ಮೌಲ್ಯ 200 ಲಕ್ಷ ಕೋಟಿ. ವಿಶ್ವದ 2ನೇ ಅತ್ಯಂತ ಮೌಲ್ಯಯುತ ಕಂಪನಿ.

Chandrayaan 3: ಮೋದಿ ಸರ್ಕಾರದ 9 ವರ್ಷ, ಬಾಹ್ಯಾಕಾಶದಲ್ಲಿ ಇಸ್ರೋ ಹರ್ಷ

1010

Apple: ಕಂಪ್ಯೂಟರ್‌, ಮೊಬೈಲ್‌ ಸೇರಿದಂತೆ ವಿವಿಧ ಟೆಕ್ನಾಲಜಿ ಉತ್ಪನ್ನಗಳ ದೈತ್ಯ ಆಪಲ್‌ ಕಂಪನಿ ವಿಶ್ವದ ಅತ್ಯಂತ ಶ್ರೀಮಂತ ಕಂಪನಿ. ಕುಪರ್ಟಿನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಂಪನಿಯ ಮಾರುಕಟ್ಟೆ ಮೌಲ್ಯ 234 ಲಕ್ಷ ಕೋಟಿ ರೂಪಾಯಿ.

Chandrayaan-3: ಬಾಹ್ಯಾಕಾಶದ ಕತ್ತಲಲೋಕದ ಬಗ್ಗೆ ನೀವು ಮಿಸ್‌ ಮಾಡದೇ ನೋಡಬೇಕಾದ ಸಿನಿಮಾಗಳು!

Read more Photos on
click me!

Recommended Stories