100 ರೂ. ಬಾಡಿಗೆ ರೂಮಲ್ಲಿ ಮಳಿಗೆ ಆರಂಭಿಸಿದ ವ್ಯಕ್ತಿ ಈಗ ಬೃಹತ್ ಆಭರಣ ಸಾಮ್ರಾಜ್ಯದ ಒಡೆಯ!

Published : Aug 24, 2023, 12:49 PM ISTUpdated : Aug 24, 2023, 01:01 PM IST

ಯಶಸ್ಸು ಅನ್ನೋದು ಯಾರ ಸೊತ್ತು ಕೂಡಾ ಅಲ್ಲ. ಕೆಲವರು ಹುಟ್ಟಿನಿಂದಲೇ ಆಗರ್ಭ ಶ್ರೀಮಂತರಾದರೆ, ಇನ್ನು ಕೆಲವರು ಶೂನ್ಯದಿಂದ ಆರಂಭಿಸಿ ಕೋಟಿ ಕೋಟಿ ಸಾಮ್ರಾಜ್ಯ ಕಟ್ಟಿದವರು, ಈ ವ್ಯಕ್ತಿ ಕೂಡಾ ಅಂಥವರಲ್ಲಿ ಒಬ್ಬರು.

PREV
17
100 ರೂ. ಬಾಡಿಗೆ ರೂಮಲ್ಲಿ ಮಳಿಗೆ ಆರಂಭಿಸಿದ ವ್ಯಕ್ತಿ ಈಗ ಬೃಹತ್ ಆಭರಣ ಸಾಮ್ರಾಜ್ಯದ ಒಡೆಯ!

ಚಿನ್ನದ ಸಾಲದ ಬಗ್ಗೆ ಸಲಹೆ ನೀಡಲು ಪ್ರಾರಂಭಿಸಿದ ವ್ಯಕ್ತಿ, ಬೃಹತ್‌ ಆಭರಣ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಇದು ದಕ್ಷಿಣ ಭಾರತದ ಅತ್ಯಂತ ಯಶಸ್ವೀ ಉದ್ಯಮಿ ಜಿ.ರಾಜೇಂದ್ರನ್ ಅವರ ಸ್ಫೂರ್ತಿದಾಯಕ ಕಥೆ. 80 ವರ್ಷದ ರಾಜೇಂದ್ರನ್ ಇಂದು ಕೋಟ್ಯಾಧಿಪತಿಯಾಗಿದ್ದು, ಬರೋಬ್ಬರಿ 15700 ಕೋಟಿ ರೂ. ಸೊತ್ತಿನ ಒಡೆಯರು.

27

ರಾಜೇಂದ್ರನ್ ಇಂದು ಕೋಟ್ಯಾಧಿಪತಿಯಾಗಿದ್ದು, ಚಿನ್ನ ಮತ್ತು ಆಭರಣಗಳಿಂದ ಶಿಕ್ಷಣ ಸಂಸ್ಥೆಗಳು ಮತ್ತು ಹೋಟೆಲ್‌ಗಳವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಅವರ ನಿವ್ವಳ ಮೌಲ್ಯವು ಸುಮಾರು 15700 ಕೋಟಿ ($1.9 ಬಿಲಿಯನ್) ಎಂದು ಅಂದಾಜಿಸಲಾಗಿದೆ.

37

ಜಿ.ರಾಜೇಂದ್ರನ್ ಅವರು ಜಿಆರ್‌ಟಿ ಜ್ಯುವೆಲರ್ಸ್‌ನಿಂದ ತಮ್ಮ ಬೃಹತ್ ಸಂಪತ್ತನ್ನು ಗಳಿಸಿದ್ದಾರೆ. ರಾಜೇಂದ್ರನ್ ತಮ್ಮ ವೃತ್ತಿಜೀವನವನ್ನು ಚೆನ್ನೈ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕ್‌ಗೆ (ಹಿಂದೆ ಮದ್ರಾಸ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎಂದು ಕರೆಯಲಾಗುತ್ತಿತ್ತು) ಚಿನ್ನದ ಸಾಲದ ಕುರಿತು ಸಲಹೆ ನೀಡುತ್ತಾ ಆರಂಭಿಸಿದರು.

47

ವಿನಮ್ರ ಚಿನ್ನದ ಮೌಲ್ಯಮಾಪಕರಾಗಿ ವರ್ಷಗಳ ನಂತರ, ರಾಜೇಂದ್ರನ್ ವ್ಯಾಪಾರ ಆರಂಭಿಸಿಲು ನಿರ್ಧರಿಸಿದರು. ತಮ್ಮ ಉಳಿತಾಯದ ಮೂಲಕ ಸಣ್ಣ ಚಿನ್ನದ ಚಿಲ್ಲರೆ ಅಂಗಡಿಯನ್ನು ತೆರೆದರು.

57

ಅವರು 1964ರಲ್ಲಿ 100 ರೂ ಬಾಡಿಗೆಯಲ್ಲಿ 500 ಚದರ ಅಡಿ ಮಳಿಗೆಯೊಂದಿಗೆ ಜಿಆರ್ ತಂಗಮಾಳಿಗೈ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ವರ್ಷಗಳ ಪರಿಶ್ರಮದ ನಂತರ 1979ರಲ್ಲಿ ಜಿಆರ್‌ಟಿ ದೊಡ್ಡ ಮಳಿಗೆಯನ್ನು ತೆರೆಯಿತು. ನಂತರದ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಜಿಆರ್‌ಟಿ ಜ್ಯುವೆಲ್ಲರಿಯ ನಾನಾ ಬ್ರ್ಯಾಂಚ್‌ಗಳು ಓಪನ್ ಆದವು. 

67

ಪ್ರಮುಖ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾದ ಜಿಆರ್‌ಟಿ ಜ್ಯುವೆಲರ್ಸ್‌ನಲ್ಲಿ ವಜ್ರ, ಚಿನ್ನ, ಪ್ಲಾಟಿನಂ ಮತ್ತು ಬೆಳ್ಳಿಯ ಆಭರಣಗಳೂ ಸೇರಿವೆ. ಹೀಗಾಗಿ ಇದಕ್ಕೆ ಅತ್ಯಧಿಕ ಸಂಖ್ಯೆಯ ನಂಬಿಕಸ್ಥ ಗ್ರಾಹಕರೂ ಸೇರಿದ್ದಾರೆ.

77

ಸುಮಾರು 60 ವರ್ಷಗಳಷ್ಟು ಹಳೆಯದಾದ ಕಂಪನಿಯನ್ನು ಇಂದು ರಾಜೇಂದ್ರನ್ ಅವರ ಪುತ್ರರಾದ ಜಿ.ಆರ್ ಅನಂತ ಪದ್ಮನಾಭನ್ ಮತ್ತು ಆರ್‌ಟಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ( (ಎಂಡಿ) ಜಿಆರ್ ರಾಧಾಕೃಷ್ಣನ್ ನಡೆಸುತ್ತಿದ್ದಾರೆ. ರಾಜೇಂದ್ರನ್ ಅವರು ಚೆನ್ನೈ ಸಮೀಪದ ಜಿಆರ್‌ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ರಾಜೇಂದ್ರನ್ ತಮ್ಮ ವ್ಯಾಪಾರವನ್ನು ಹೊಟೇಲ್‌, ರೆಸಾರ್ಟ್‌ಗಳಿಗೆ ವಿಸ್ತರಿಸಿದರು ಮತ್ತು 14 ನಗರಗಳಲ್ಲಿ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳನ್ನು ನಿರ್ವಹಿಸುತ್ತಾರೆ.

Read more Photos on
click me!

Recommended Stories