ಈಗಾಗಲೇ ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಮುಂತಾದ ನೆರೆ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗುತ್ತಿವೆ. ಮುಂದಿನ ಹಂತದಲ್ಲಿ ಜಾರ್ಖಂಡ್, ಪಂಜಾಬ್, ಒಡಿಸ್ಸಾ, ಮಣಿಪುರ, ಮೇಘಾಲಯ ಮತ್ತು ಸಿಕ್ಕಿಂ ರಾಜ್ಯಗಳಿಗೂ ನಂದಿನಿ ಪೂರೈಕೆ ಪ್ರಾರಂಭಿಸುವ ಉದ್ದೇಶವನ್ನು ಕೆಎಂಎಫ್ ಹೊಂದಿದೆ. ಅದರ ಜೊತೆಗೆ ವಿದೇಶಿ ಮಾರುಕಟ್ಟೆಯತ್ತಲೂ ನಂದಿನಿಯ ಕಾಲಿಡುವ ಹೆಜ್ಜೆ ಶೀಘ್ರದಲ್ಲೇ ಜಾರಿಯಾಗಲಿದೆ. ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ, ಜರ್ಮನಿ, ಸೌದಿ ಅರೇಬಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಪರಿಚಯಿಸುವ ಪ್ರಯತ್ನ ಪ್ರಗತಿಯಲ್ಲಿದೆ.