ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ, ಜಿಯೋ ಸ್ಥಿರ ವೈರ್ಲೆಸ್ ಆಕ್ಸೆಸ್ (ಎಫ್‌ಡಬ್ಲ್ಯೂಎ) ನಲ್ಲಿ ತನ್ನ ನಾಯಕತ್ವವನ್ನು ಬಲಪಡಿಸುತ್ತಿದೆ. ಜಿಯೋ ಏರ್‌ಫೈಬರ್ ಸೇವೆಯು ಸ್ಪಷ್ಟ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ರಾಜ್ಯದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ ಜುಲೈನಲ್ಲಿ 3,51,817 ಕ್ಕೆ ಏರಿದೆ. ಇದು 2025 ರ ಜೂನ್‌ನಲ್ಲಿ 3,39,981 ರಷ್ಟಿತ್ತು. ಭಾರ್ತಿ ಏರ್ಟೆಲ್ 1,74,477 ಎಫ್‌ಡಬ್ಲ್ಯೂಎ ಚಂದಾದಾರರನ್ನು ಹೊಂದಿದೆ.