ಕರ್ನಾಟಕದಲ್ಲಿ ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಈ ಮಾರ್ಕೆಟಿಂಗ್ ಬಗ್ಗೆನೇ ಊರೆಲ್ಲಾ ಮಾತುಕತೆ

Published : Jan 24, 2026, 12:43 PM IST

ಸಣ್ಣ ವ್ಯಾಪಾರಗಳಿಗೆ ದುಬಾರಿ ಸೆಲೆಬ್ರಿಟಿ ಜಾಹೀರಾತುಗಳ ಬದಲಿಗೆ, ಹೈಪರ್‌ಲೋಕಲ್ ಬ್ರ್ಯಾಂಡ್ ಜಾಹೀರಾತು ಒಂದು ಉತ್ತಮ ಪರಿಹಾರವಾಗಿದೆ. ಈ ಮಾದರಿಯು ಸ್ಥಳೀಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ನಂಬಿಕಸ್ಥ ಪ್ರಚಾರ ಮಾಡಲು ಸಹಾಯ ಮಾಡುತ್ತದೆ.

PREV
15
ಬ್ರ್ಯಾಂಡ್ ಜಾಹೀರಾತು

ಇವತ್ತು ಬ್ರ್ಯಾಂಡ್ ಜಾಹೀರಾತು ಅಂದ್ರೆ ನಟರು, ಕ್ರಿಕೆಟಿಗರು, ರಾಷ್ಟ್ರಮಟ್ಟದ ಸೆಲೆಬ್ರಿಟಿಗಳು ನೆನಪಿಗೆ ಬರ್ತಾರೆ. ಆದ್ರೆ ಅವ್ರನ್ನಿಟ್ಟು ಜಾಹೀರಾತು ಮಾಡೋಕೆ ತುಂಬಾ ಖರ್ಚಾಗುತ್ತೆ. ಈ ಖರ್ಚನ್ನು ಸಣ್ಣ ಅಂಗಡಿ, ಕಂಪನಿಗಳು ಭರಿಸೋಕಾಗಲ್ಲ. ಇಲ್ಲೇ ಹೈಪರ್‌ಲೋಕಲ್ ಬ್ರ್ಯಾಂಡ್ ಜಾಹೀರಾತು ಮಾಡೆಲ್ ಮುಖ್ಯವಾಗುತ್ತದೆ. ಒಂದು ನಿರ್ದಿಷ್ಟ ಏರಿಯಾದ ಜನರ ಮೇಲೆ ಪ್ರಭಾವ ಬೀರುವ ಸ್ಥಳೀಯ ಇನ್ಫ್ಲುಯೆನ್ಸರ್‌ಗಳ ಮೂಲಕ ಆ ಪ್ರದೇಶದ ಬ್ಯುಸಿನೆಸ್‌ಗಳನ್ನು ಪ್ರಚಾರ ಮಾಡುವುದೇ ಇದರ ಮೂಲ ಐಡಿಯಾ.

25
ಸ್ಥಳೀಯ ಇನ್ಫ್ಲುಯೆನ್ಸರ್ ಜಾಹೀರಾತು

ಪ್ರತಿ ಏರಿಯಾದಲ್ಲೂ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆದ ವ್ಯಕ್ತಿಗಳಿರುತ್ತಾರೆ. ಅವರನ್ನು ಆ ಏರಿಯಾದ ಜನ ನಮಗೆ ಗೊತ್ತಿದ್ದವರ ಹಾಗೆ ನೋಡ್ತಾರೆ. ಅದಕ್ಕೇ ದೊಡ್ಡ ಸೆಲೆಬ್ರಿಟಿಗಳ ಜಾಹೀರಾತಿಗಿಂತ, ಸ್ಥಳೀಯ ವ್ಯಕ್ತಿಯ ಶಿಫಾರಸು ಹೆಚ್ಚು ನಂಬಿಕೆ ಕೊಡುತ್ತೆ. ದಿನಾ ಮುಖ ನೋಡೋದು, ಹತ್ತಿರದ ಭಾಷೆ, ಸ್ಥಳೀಯ ಮಾತುಕತೆ ಎಲ್ಲ ಸೇರಿ ಈ ಜಾಹೀರಾತಿಗೆ ದೊಡ್ಡ ಪವರ್ ಆಗುತ್ತೆ.

35
ನಿಮ್ಮ ವ್ಯಾಪಾರಕ್ಕೆ ಇದು ಸೇತುವೆ

ಹಲವು ಏರಿಯಾಗಳಲ್ಲಿರುವ ಸ್ಥಳೀಯ ಪ್ರಭಾವಿ ವ್ಯಕ್ತಿಗಳನ್ನು ಸಂಪರ್ಕಿಸಿ, ಅವರ ವಿವರ, ಫಾಲೋವರ್ಸ್ ಸಂಖ್ಯೆ, ಅವರ ಸ್ಟೈಲ್, ಅಭಿಮಾನಿಗಳ ರೀತಿ ಇತ್ಯಾದಿ ಮಾಹಿತಿ ಕಲೆಹಾಕಬೇಕು. ಇದನ್ನೊಂದು ನೆಟ್‌ವರ್ಕ್ ಅಥವಾ ಲಿಸ್ಟ್ ಮಾಡಿದರೆ, ವ್ಯಾಪಾರಿಗಳಿಗೆ ಒಂದೇ ಕಡೆ ಹಲವು ಆಯ್ಕೆಗಳು ಸಿಗುತ್ತವೆ. ಇದರಿಂದ ನಿಮಗೊಂದು ನಂಬಿಕಸ್ಥ ಸ್ಥಳೀಯ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್ ಸಿಗುತ್ತದೆ. ಈ ಮೂಲಕ ನಿಮ್ಮ ವ್ಯಾಪಾರದ ಬಗ್ಗೆ ಪ್ರಮೋಷನ್ ಮಾಡಬಹುದಾಗಿದೆ. ಈ ಒಂದು ತಂತ್ರಗಾರಿಕೆ ನಿಮ್ಮ ವ್ಯಾಪಾರ ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ.

45
ಕಡಿಮೆ ಖರ್ಚಿನ ಮಾರ್ಕೆಟಿಂಗ್

ಇದಕ್ಕೆ ದೊಡ್ಡ ಆಫೀಸ್ ಬೇಕಿಲ್ಲ. ಹೆಚ್ಚು ಬಂಡವಾಳ ಬೇಡ. ಒಂದು ಮೊಬೈಲ್ ಫೋನ್ ಇದ್ದರೆ ಸಾಕು ಶುರು ಮಾಡಬಹುದು. ಮೊದಲು ಇನ್ಫ್ಲುಯೆನ್ಸರ್‌ಗಳ ಜೊತೆ ಕಾಲ್ ಅಥವಾ ಮೆಸೇಜ್ ಮೂಲಕ ಮಾತಾಡಿ. ನಂತರ ಹತ್ತಿರದ ಅಂಗಡಿ, ಟಿಫನ್ ಸೆಂಟರ್, ಸ್ಟೋರ್, ಜಿಮ್, ಕ್ಲಿನಿಕ್‌ನಂತಹ ಬ್ಯುಸಿನೆಸ್‌ಗಳ ಬಳಿ ಹೋಗಿ, ಕಡಿಮೆ ಖರ್ಚಿನಲ್ಲಿ ರೀಲ್/ವಿಡಿಯೋ ಜಾಹೀರಾತು ಮಾಡಬಹುದು ಅಂತ ವಿವರಿಸಿ. ಆರಂಭದಲ್ಲಿ ಚಿಕ್ಕದಾಗಿ ಮಾಡಿ, ರಿಸಲ್ಟ್ ಬಂದ ಮೇಲೆ ಅದನ್ನೇ ತೋರಿಸಿ ದೊಡ್ಡ ಕ್ಲೈಂಟ್‌ಗಳನ್ನು ಹಿಡಿಯಬಹುದು.

55
ರೀಲ್ಸ್ ಮಾರ್ಕೆಟಿಂಗ್

ಆದಾಯ ಬರುವ ದಾರಿಯೂ ಎರಡು ಕಡೆಯಿಂದ ಇರುತ್ತೆ. ಇನ್ಫ್ಲುಯೆನ್ಸರ್‌ಗಳಿಂದ ಒಂದು ಕಮಿಷನ್ ತಗೋಬಹುದು. ಹಾಗೆಯೇ ಬ್ಯುಸಿನೆಸ್‌ನವರಿಂದ ಸೇವಾ ಶುಲ್ಕವನ್ನೂ ಪಡೆಯಬಹುದು. ಒಂದೇ ವಿಡಿಯೋಗೆ ಡಬಲ್ ಇನ್‌ಕಮ್ ಸಿಗೋ ಚಾನ್ಸ್ ಇದೆ. ಒಂದೇ ಏರಿಯಾದಲ್ಲಿ ಹೆಚ್ಚು ಬ್ಯುಸಿನೆಸ್‌ಗಳು ಮತ್ತು ಹೆಚ್ಚು ಇನ್ಫ್ಲುಯೆನ್ಸರ್‌ಗಳು ಸೇರಿದರೆ, ಆದಾಯ ಹೆಚ್ಚುತ್ತಲೇ ಹೋಗುತ್ತದೆ. ಸರಿಯಾಗಿ ಪ್ಲಾನ್ ಮಾಡಿದರೆ, ದೀರ್ಘಕಾಲದವರೆಗೆ ಒಂದು ಗಟ್ಟಿಯಾದ ಸ್ಥಳೀಯ ಜಾಹೀರಾತು ನೆಟ್‌ವರ್ಕ್ ಕಟ್ಟಬಹುದು. ಯಾವುದೇ ಬ್ಯುಸಿನೆಸ್ ಶುರು ಮಾಡುವ ಮುನ್ನ ನಿಮ್ಮ ಖರ್ಚು-ವರಮಾನದ ಲೆಕ್ಕಾಚಾರ ಮಾಡಿ, ಅಗತ್ಯವಿದ್ದರೆ ಹಣಕಾಸು ಸಲಹೆ ಪಡೆಯುವುದು ಒಳ್ಳೆಯದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories