ಆರ್‌ಸಿಬಿ ಅಭಿಮಾನಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್, ಸಂಭ್ರಮಕ್ಕೆ ಇನ್ನೇನು ಬೇಕು
ಐಪಿಎಲ್ 2025 ಟೂರ್ನಿಯಲ್ಲಿ ಆರ್‌ಸಿಬಿ ಅಬ್ಬರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಜೊತೆ ರಿಲಯನ್ಸ್ ಜಿಯೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಐಪಿಎಲ್ 2025 ಟೂರ್ನಿಯಲ್ಲಿ ಆರ್‌ಸಿಬಿ ಅಬ್ಬರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಜೊತೆ ರಿಲಯನ್ಸ್ ಜಿಯೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಮುಂಬೈಇಂಡಿಯನ್ಸ್ ಅಲ್ಲ, ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇದೀಗ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಬ್ರಾಡ್‌ಬ್ಯಾಂಡ್ ರೀತಿಯ ತಡೆರಹಿತ 5ಜಿ ಸೇವೆಯನ್ನು ಬಳಸಬಹುದು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಯೋ 2,000ಕ್ಕೂ ಹೆಚ್ಚು ಸೆಲ್ ನಿಯೋಜಿಸಿದೆ. ಇದು ಮೊಬೈಲ್ ಬ್ರಾಡ್‌ಬ್ಯಾಂಡ್ ಅನುಭವವನ್ನು ಹೆಚ್ಚಿಸಿದೆ.
ಜಿಯೋ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಭಿಮಾನಿಗಳಿಗೆ ಯಾವುದೇ ಅಡೆ ತಡೆ ಇಲ್ಲದೆ 5ಜಿ ಸೇವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಗುವಂತೆ ಮಾಡಿದೆ. ಹೆಚ್ಚಿನ ಜನ ಸೇರುವ ಬಳಿಕ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಅನ್ನೋ ಆರೋಪಕ್ಕೆ ಜಿಯೋ ಉತ್ತರ ನೀಡಿದೆ. ಜಿಯೋದ ಸುಧಾರಿತ 5ಜಿ ಸ್ಟ್ಯಾಂಡಲೋನ್ (ಎಸ್‌ಎ) ಆರ್ಕಿಟೆಕ್ಚರ್, ನೆಟ್‌ವರ್ಕ್ ಸ್ಲೈಸಿಂಗ್ ಸಾಮರ್ಥ್ಯ ಹಾಗೂ 5ಜಿ ಕ್ಯಾರಿಯರ್ ಮೂಲಕ ಈ ಸಾಧನೆ ಮಾಡಿದೆ. ಕ್ರಿಕೆಟ್ ಪಂದ್ಯದ ವೇಳೆ ಡೇಟಾ ಬೇಡಿಕೆ ಹೆಚ್ಚು. ಹೀಗಾಗಿ ಹೀಗಾಗಿ ಜಿಯೋ ತಡೆರಹಿತ 5ಜಿ ಸೇವೆ ಹೊಸ ತಂತ್ರಜ್ಞಾನದ ಮೂಲಕ ನೀಡುತ್ತಿದೆ.
ಹೆಚ್ಚಿನ ಜನರು ಒಂದೆಡೆ ಸೇರಿದ್ದರೂ, ಅಪಾರ ಸಂಖ್ಯೆಯಲ್ಲಿ ಜನರು ಒಂದೇ ಟವರ್ ಅಥವಾ ಫ್ರೀಕ್ವೆನ್ಸಿ ಮೂಲಕ ನೆಟ್‌ವರ್ಕ್ ಬಳಸಿದರೂ ಡೇಟಾ ವೇಗದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಇದು ಅತೀವೇಗದ ಡೇಟಾ ಸೌಲಭ್ಯ ನೀಡಲಿದೆ. ಇದರಿಂದಾಗಿ ಅಭಿಮಾನಿಗಳು ತಮ್ಮ ಲೈವ್ ಅನುಭವಗಳನ್ನು ಅಡೆತಡೆಯಿಲ್ಲದೆ ಹಂಚಿಕೊಳ್ಳಲು ನೆರವಾಗುತ್ತದೆ.
ಉತ್ತರ ಪ್ರದೇಶದ ಮಹಾಕುಂಭದಲ್ಲಿ ರಿಲಯನ್ಸ್ ಜಿಯೋ ಇದೇ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ನೀಡಿತ್ತು. ಮಹಾಕುಂಬಕ್ಕೆ ಪ್ರತಿ ದಿನ ಕೋಟಿ ಕೋಟಿ ಭಕ್ತರು ಆಗಮಿಸುತ್ತಿದ್ದರು. ಈ ವೇಳೆ ನೆಟ್‌ವರ್ಕ್ ಸಮಸ್ಯೆಯಾಗದಂತೆ ಜಿಯೋ ನೋಡಿಕೊಂಡಿದೆ. ಇದೇ ಮಾದರಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ತಂತ್ರಜ್ಞಾನ ಬಳಸಿ ಅಭಿಮಾನಿಗಳಿಗೆ ಡೇಟಾ ನೀಡಲಾಗುತ್ತಿದೆ.
ಓಕ್ಲಾ ವರದಿ ಪ್ರಕಾರ, ಜಿಯೋ ಸರಾಸರಿ ಡೌನ್‌ಲೋಡ್ ವೇಗ 201.87 ಎಂಬಿಪಿಎಸ್ (Mbps) ಅನ್ನು ಸಾಧಿಸಿದ್ದು, ಇದು ಏರ್‌ಟೆಲ್‌ನ 165.23 ಎಂಬಿಪಿಎಸ್ (Mbps) ವೇಗಕ್ಕಿಂತ ಗಮನಾರ್ಹವಾಗಿ ಮೀರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಇದ್ದ ಹೊರತಾಗಿಯೂ ಹೆಚ್ಚಿನ ಟ್ರಾಫಿಕ್ ಇರುವ ಪರಿಸರದಲ್ಲಿ ತನ್ನ ನೆಟ್‌ವರ್ಕ್ ನಾಯಕತ್ವವನ್ನು ಪ್ರದರ್ಶಿಸಿದೆ. ಐಸಿಸಿ ಕ್ರಿಕೆಟ್ ಫೈನಲ್ ಸಮಯದಲ್ಲಿ ನೆಟ್‌ವರ್ಕ್‌ನ ಸಾಮರ್ಥ್ಯ ಮತ್ತು ಪಾರಮ್ಯವನ್ನು ಮತ್ತಷ್ಟು ಪ್ರದರ್ಶಿಸಲಾಯಿತು. ಆ ವೇಳೆ ಜಿಯೋ ಒಂದೇ ದಿನದಲ್ಲಿ ದಾಖಲೆಯ 50 ಕೋಟಿ ಜಿಬಿ ಡೇಟಾ ಟ್ರಾಫಿಕ್ ಅನ್ನು ಪ್ರೊಸೆಸ್ ಮಾಡಿತು. ಇದು ಈ ಹಿಂದೆಂದೂ ಕಂಡಿರದ ಡೇಟಾ ಪರಿಮಾಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೋರಿಸಿತು.