ಬೆಲೆ ಇಳಿಕೆಯಾಗಿರೋ ಇಂದು ನಿಮ್ಮ ಬಂಗಾರದ ಗೊಂಬೆಗೆ ಕೊಡಿಸಿ ಚಿನ್ನ; ಇಲ್ಲಿದೆ ಇವತ್ತಿನ ದರ

Published : Apr 07, 2025, 07:30 AM ISTUpdated : Apr 07, 2025, 07:50 AM IST

ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 83,090 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನದ ಬೆಲೆ 90,650 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದ್ದು, 1 ಕೆಜಿಗೆ 93,900 ರೂಪಾಯಿ ಆಗಿದೆ.

PREV
17
ಬೆಲೆ ಇಳಿಕೆಯಾಗಿರೋ ಇಂದು ನಿಮ್ಮ ಬಂಗಾರದ ಗೊಂಬೆಗೆ ಕೊಡಿಸಿ ಚಿನ್ನ; ಇಲ್ಲಿದೆ ಇವತ್ತಿನ ದರ

ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಹಾಗಾಗಿ ನಿಮ್ಮ ಮನದರಸಿ ಅಥವಾ ಮಕ್ಕಳಿಗೆ ಇಂದು ಚಿನ್ನ ಕೊಡಿಸಬಹುದು. ಸಂಬಳದಲ್ಲಿ ಹಣ ಉಳಿದಿದ್ದರೆ ಇಂದು ಚಿನ್ನ ಖರೀದಿಸಿಟ್ಟುಕೊಳ್ಳಿ. ಇದು ಕೆಲವೇ ದಿನದಲ್ಲಿ ಡಬಲ್ ಆಗುವ ಸಾಧ್ಯತೆಗಳಿರುತ್ತವೆ. ಚಿನ್ನ ಖರೀದಿಸೋದು ಲಾಭದಾಯಕ ಹೂಡಿಕೆಯಾಗಿದೆ. 

27

ಇಂದು ಬೆಂಗಳೂರು ಸೇರಿದಂತೆ ಯಾವೆಲ್ಲಾ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. 22 ಮತ್ತು 24 ಕ್ಯಾರಟ್ ಬೆಲೆಗಳಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದನ್ನು ನೋಡೋಣ ಬನ್ನಿ.

37

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ 

1 ಗ್ರಾಂ: 8,309 ರೂಪಾಯಿ
8 ಗ್ರಾಂ: 66,472 ರೂಪಾಯಿ
10 ಗ್ರಾಂ: 83,090 ರೂಪಾಯಿ
100 ಗ್ರಾಂ: 8,30,900 ರೂಪಾಯಿ

47

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ 

1 ಗ್ರಾಂ: 9,065 ರೂಪಾಯಿ
8 ಗ್ರಾಂ: 72,520 ರೂಪಾಯಿ
10 ಗ್ರಾಂ: 90,650 ರೂಪಾಯಿ
100 ಗ್ರಾಂ: 9,06,500 ರೂಪಾಯಿ

57

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಹೀಗಿದೆ. ಚೆನ್ನೈ: 83,090 ರೂಪಾಯಿ, ಮುಂಬೈ: 83,090 ರೂಪಾಯಿ, ದೆಹಲಿ: 83,240 ರೂಪಾಯಿ, ಕೋಲ್ಕತ್ತಾ: 83,090 ರೂಪಾಯಿ, ಬೆಂಗಳೂರು: 83,090 ರೂಪಾಯಿ, ಹೈದರಾಬಾದ್: 83,090 ರೂಪಾಯಿ, ಕೇರಳ: 83,090 ರೂಪಾಯಿ, ಪುಣೆ: 83,090 ರೂಪಾಯಿ

67
ದೇಶದಲ್ಲಿಂದು ಬೆಳ್ಳಿ ಬೆಲೆ

ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. 
10 ಗ್ರಾಂ: 939  ರೂಪಾಯಿ
100 ಗ್ರಾಂ: 9,390 ರೂಪಾಯಿ
1000 ಗ್ರಾಂ: 93,900 ರೂಪಾಯಿ

77

ಎಷ್ಟು ದರ ಇಳಿಕೆ?

ಇಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿಗಳಷ್ಟು ಇಳಿಕೆಯಾಗಿದೆ. ಹಾಗೆ 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಸಲು ಇಂದು ಒಳ್ಳೆಯ ದಿನವಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ದರ ಇಳಿಕೆಯಾಗಿದೆ.

Read more Photos on
click me!

Recommended Stories