ಭಾರತದ ಕೊಡುಗೈ ದಾನಿ ಯಾರು? 8 ಲಕ್ಷ ಕೋಟಿ ವಿತರಿಸಿದ ಉದ್ಯಮಿ ಅಂಬಾನಿ ಅದಾನಿ ಅಲ್ಲ!

First Published Sep 27, 2024, 6:32 PM IST

ಭಾರತದ ಹಲವು ಶ್ರೀಮಂತ ಉದ್ಯಮಿಗಳು ಸಾಮಾಜಿಕ ಕಾರ್ಯಗಳ ಮೂಲಕ ಕೋಟಿ ಕೋಟಿ ರೂಪಾಯಿ ದಾನದ ರೂಪದಲ್ಲಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈ ಪೈಕಿ ಓರ್ವ ಉದ್ಯಮಿ ಬರೋಬ್ಬರಿ 8 ಲಕ್ಷ ಕೋಟಿ ರೂ ದಾನ ಮಾಡಿದ್ದಾರೆ. ಆದರೆ ಈ ಉದ್ಯಮಿ ಅಂಬಾನಿ ಅದಾನಿ ಅಲ್ಲ.

ವಿಶ್ವದ ಶ್ರೀಮಂತ ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಕೆಲ ಉದ್ಯಮಿಗಳು ಭಾರತದಲ್ಲಿದ್ದಾರೆ. ಈ ಉದ್ಯಮಿಗಳು ಸಾಮಾಜಿಕ ಕಾರ್ಯ, ವಿಪತ್ತು ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ಕೋಟಿ ಕೋಟಿ ರೂಪಾಯಿ ದೇಣಿಗೆಯಾಗಿ, ದಾನವಾಗಿ ನೀಡಿದ್ದಾರೆ.

ಆದರೆ ಭಾರತದಲ್ಲಿ ಅತೀ ಹೆಚ್ಚು ದಾನ ನೀಡಿದ ಉದ್ಯಮಿ ಮುಕೇಶ್ ಅಂಬಾನಿ, ಗೌತಮ್ ಅದಾನಿ. ರತನ್ ಟಾಟಾ ಸೇರಿದಂತೆ ಶ್ರೀಮಂತರ ಪಟ್ಟಿಯಲ್ಲಿರುವ ಉದ್ಯಮಿಗಳಲ್ಲ. ಈ ಉದ್ಯಮಿ ಭಾರತದಲ್ಲಿ ದಾನ ಮಾಡಿದ ಮೊತ್ತ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿ. ಇದು ಊಹೆಗೂ ನಿಲಕದ ದೇಣಿಗೆ ಮೊತ್ತ.

Latest Videos


ಈ ಕೊಡುಗೆ ದಾನಿ ಹೆಸರು ಜೆಮ್‌ಶೆಡ್‌ಜಿ ಟಾಟಾ. ಭಾರತದ ಉಕ್ಕಿನ ಮನುಷ್ಯ ಎಂದೇ ಗುರುತಿಸಿಕೊಂಡಿರುವ ಜೆಮ್‌ಶೆಡ್‌ಜಿ ಟಾಟಾ ದೇಣಿಗೆ ಹಾಗೂ ದಾನದ ರೂಪದಲ್ಲಿ ನೀಡಿದ ಒಟ್ಟು ಮೊತ್ತ 8,29,734 ಕೋಟಿ ರೂಪಾಯಿ. ಹಲುವು ಸಾಮಾಜಿಕ ಕಾರ್ಯಗಳ ಮೂಲಕ ಜೆಮ್‌ಶೆಡ್‌ಜಿ ಟಾಟಾ ಈ ಮೊತ್ತವನ್ನು ಸಮಾಜಕ್ಕೆ ನೀಡಿದ್ದಾರೆ.

2021ರಲ್ಲಿ ಪ್ರಕಟಗೊಂಡ ಹುರನ್ ಇಂಡಿಯಾ ವರದಿಯಲ್ಲಿ ಭಾರತದ ಕೊಡುಗೆೈ ದಾನಿ ಯಾರು ಅನ್ನೋದು ಬಹಿರಂಗಪಡಿಸಿದೆ. ದತ್ತಿ ದೇಣಿಗೆ ರೂಪದಲ್ಲಿ ಹಣ ನೀಡಿದ್ದಾರೆ. ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು, ಆಸ್ಪತ್ರೆ, ಮಕ್ಕಳ ಶಿಕ್ಷಣ, ದೇಶದ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜೆಮ್‌ಶೆಡ್‌ಜಿ ಟಾಟಾ ದಾರಾಳವಾಗಿ ದೇಣಿಗೆ ನೀಡಿದ್ದಾರೆ.

1868ರಲ್ಲಿ ಜೆಮ್‌ಶೆಡ್‌ಜಿ ಟಾಟಾ ಆರಂಭಿಸಿದ ಟಾಟಾ ಗ್ರೂಪ್ ಸಂಸ್ಥೆ ಇದೀಗ 24 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಕಂಪನಿ. 30ಕ್ಕೂ ಹೆಚ್ಚು ಕಂಪನಿ. 10ಕ್ಕೂ ಹೆಚ್ಚು ಕೈಗಾರಿಕೋದ್ಯಮ, ಹಲವು ದೇಶಗಳಲ್ಲಿ ಟಾಟಾ ಗ್ರೂಪ್ ಕಾರ್ಯನಿರ್ವಹಿಸುತ್ತಿದೆ. ಟಾಟಾ ಗ್ರೂಪ್ ಆದಾಯದ ಜೊತೆಗೆ ಸಾಮಾಜಿಕ ಬದ್ಧತೆ, ಕಾಳಜಿಯಲ್ಲೂ ಮುಂಚೂಣಿಯಲ್ಲಿದೆ.

ಜೆಮ್‌ಶೆಡ್‌ಜಿ ಟಾಟಾ ಹಾಕಿಕೊಟ್ಟ ಮಾರ್ಗದಲ್ಲಿ ಇದೀಗ ರತನ್ ಟಾಟಾ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.  ಕೋವಿಡ್ ಸಂದರ್ಭದಲ್ಲಿ ಟಾಟಾ ಗ್ರೂಪ್ 1,500 ಕೋಟಿಗೂ ಅಧಿಕ ರೂಪಾಯಿಯನ್ನು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿತ್ತು. 

ಜೆಮ್‌ಶೆಡ್‌ಜಿ ಟಾಟಾ ಬಳಿಕ ಅತೀ ಹೆಚ್ಚು ಮೊತ್ತವನ್ನು ದತ್ತಿ ದೇಣಿಗೆ ರೂಪದಲ್ಲಿ ನೀಡಿದ್ದು ವಿಪ್ರೋ ಸಂಸ್ಥೆಯ ಅಜೀಮ್ ಪ್ರೇಮ್‌ಜಿ. ಅಜೀಮ್ ಪ್ರೇಮ್‌ಜಿ 1,76,000 ಕೋಟಿ ರೂಪಾಯಿ ನೀಡಿದೆ. ವಿಪ್ರೋ ಫೌಂಡೇಶನ್ ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯದಲ್ಲಿ ತೊಡಗಿದೆ.

click me!