ಇಶಾ ಅಂಬಾನಿ ಮನೆ ಬರೋಬ್ಬರಿ 508 ಕೋಟಿ ರೂಗೆ ಮಾರಾಟ, ಖರೀದಿಸಿದ ನಟಿ ಯಾರು?
ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ತಮ್ಮ ಐಷಾರಾಮಿ ಮನೆಯನ್ನು ಮಾರಾಟ ಮಾಡಿದ್ದಾರೆ. ಬರೋಬ್ಬರಿ 508 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಿದ್ದಾರೆ. ದುಬಾರಿ ಮೊತ್ತ ನೀಡಿ ಈ ಮನೆಯನ್ನು ನಟಿಯೊಬ್ಬರು ಖರೀದಿಸಿದ್ದಾರೆ.
ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ತಮ್ಮ ಐಷಾರಾಮಿ ಮನೆಯನ್ನು ಮಾರಾಟ ಮಾಡಿದ್ದಾರೆ. ಬರೋಬ್ಬರಿ 508 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಿದ್ದಾರೆ. ದುಬಾರಿ ಮೊತ್ತ ನೀಡಿ ಈ ಮನೆಯನ್ನು ನಟಿಯೊಬ್ಬರು ಖರೀದಿಸಿದ್ದಾರೆ.
ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಹಲವು ಉದ್ಯಮ ಸಾಮ್ರಾಜ್ಯ ಒಡತಿ. ಫ್ಯಾಶನ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇನ್ನು ಇಶಾ ಅಂಬಾನಿ ಹಲವು ಆಸ್ತಿ, ಮನೆಗಳನ್ನು ಹೊಂದಿದ್ದಾರೆ. ಎಲ್ಲಾ ಮನೆಗಳು ಕೋಟಿ ಕೋಟಿ ಬೆಳಬಾಳುತ್ತಿದೆ. ಈ ಪೈಕಿ ಒಂದು ಮನೆಯನ್ನು ಇಶಾ ಅಂಬಾನಿ ಇತ್ತೀಚೆಗೆ ಮಾರಾಟ ಮಾಡಿದ್ದಾರೆ. ವಿಶೇಷ ಅಂದರೆ ಈ ಮನೆ ಬರೋಬ್ಬರಿ 508 ಕೋಟಿ ರೂಪಾಯಿಗೆ ಮಾರಾಟವಾಗಿದೆ. .
ಇಶಾ ಅಂಬಾನಿ ಹಲವು ಆಸ್ತಿ ಹಾಗೂ ಮನೆಗಳಲ್ಲಿ ಅತ್ಯಂತ ಪ್ರಮುಖ ಮನೆ ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿದ್ದ ಬೆವರ್ಲಿ ಹಿಲ್ಸ್. ಇದು ಅತ್ಯಂತ ಐಷಾರಾಮಿ ಮನೆ. ಈ ಮನೆಯನ್ನು ಇಶಾ ಅಂಬಾನಿ ಮಾರಾಟ ಮಾಡಿದ್ದಾರೆ. ಇಶಾ ಅಂಬಾನಿ ತಮ್ಮ ಮನೆಯನ್ನ ಹಾಲಿವುಡ್ ನಟಿ ಮತ್ತು ಗಾಯಕಿ ಜೆನಿಫರ್ ಲೋಪೆಜ್‌ಗೆ ಮಾರಾಟ ಮಾಡಿದ್ದರೆ. ಜೆನಿಫರ್ ಈ ಮನೆಯನ್ನ ಬರೋಬ್ಬರಿ 508 ಕೋಟಿಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಈ ಮನೆ ಒಳಗಡೆ ಅರಮನೆ ರೀತಿ ಇದೆ. ಇದರಲ್ಲಿ 12 ಬೆಡ್‌ರೂಮ್ ಮತ್ತು 24 ಬಾತ್‌ರೂಮ್ ಇವೆ. ಇದು 38000 ಚದರ ಅಡಿಯಲ್ಲಿ ಹರಡಿಕೊಂಡಿದೆ. ಅತೀ ವಿಶಾಲವಾದ ಈ ಮನೆ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಈ ಮನೆ ಬರೋಬ್ಬರಿ 508 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಜೆನಿಫರ್ ಲೋಪೆಜ್ ಮನೆ ಕೊಂಡುಕೊಂಡಾಗಿನಿಂದ ಇದು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅವರ ಮನೆಯಲ್ಲಿ ದೊಡ್ಡ ಡೈನಿಂಗ್ ಹಾಲ್ ಇದೆ. ಅದನ್ನ ತುಂಬಾ ಚೆನ್ನಾಗಿ ಡೆಕೋರೇಟ್ ಮಾಡಿದ್ದಾರೆ. ಈ ಮನೆಯನ್ನು ಇಶಾ ಅಂಬಾನಿ 2023ರಲ್ಲಿ ಮಾರಾಟ ಮಾಡಿದ್ದಾರೆ. ಇದೀಗ ಜೆನಿಫರ್ ಈ ಮನೆಯಲ್ಲಿ ವಾಸವಾಗಿದ್ದಾರೆ.
ಜೆನಿಫರ್ ಲೋಪೆಜ್ ಅವರ ಮನೆಯಲ್ಲಿ ಇಂಡೋರ್ ಪಿಕ್‌ಲ್‌ಬಾಲ್ ಕೋರ್ಟ್, ಜಿಮ್, ಸಲೂನ್, ಸ್ಪಾ, 155 ಅಡಿ ಸ್ವಿಮ್ಮಿಂಗ್ ಪೂಲ್ ಮತ್ತು ಬೇರೆ ಸೌಲಭ್ಯಗಳು ಇವೆ. ಈ ಮನೆ ಖರೀದಿಸಿದ ಬಳಿಕ ಜೆನಿಫರ್ ಲೊಪೆಝ್ ಯಾವುದೇ ರೀತಿ ಬದಲಾವಣೆ ಮಾಡಿಲ್ಲ. ಇಷ್ಟೇ ಅಲ್ಲ ಹೆಚ್ಚಿನ ವಸ್ತುಗಳನ್ನು ಖರೀದಿಸಿಲ್ಲ.
ಜೆನಿಫರ್ ಲೋಪೆಜ್ ಅವರ ಮನೆಯ ಹೊರಗಿನ ಜಾಗ ನೋಡೋಕೆ ತುಂಬಾ ಕ್ಲಾಸಿ ಆಗಿದೆ. ಹೊರಗಡೆ ಒಂದು ದೊಡ್ಡ ಗಾರ್ಡನ್ ಕೂಡ ಇದೆ, ಅದನ್ನ ಲೈಟಿಂಗ್ಸ್ ಇಂದ ಅಲಂಕರಿಸಲಾಗಿದೆ. ಮನೆಯ ಸುತ್ತಲೂ ಜಾಗವಿದೆ. ಜೊತೆಗೆ ಗಾರ್ಡನ್ ಇದೆ. ಅತೀ ದೊಡ್ಡ ಮನೆ ನಿರ್ವಹಣೆಗೆ ಕನಿಷ್ಛ 25ಕ್ಕೂ ಹೆಚ್ಚು ಸಿಬ್ಬಂಧಿಗಳ ಅಗತ್ಯವಿದೆ.
ಜೆನಿಫರ್ ಲೋಪೆಜ್ ಅವರ ಮನೆಯ ಹೊರಗಡೆ ದೊಡ್ಡ ಸ್ವಿಮ್ಮಿಂಗ್ ಪೂಲ್ ಕೂಡ ಇದೆ. ಅಲ್ಲಿ ಕೂತ್ಕೊಳ್ಳೋಕೆ ಮತ್ತು ಊಟ ಮಾಡೋಕೆ ಜಾಗ ಕೂಡ ಇದೆ. ಇನ್ನು ಮನೆ ಒಳಗಡೆ ದೊಡ್ಡದಾದ ಡೈನಿಂಗ್ ಹಾಲ್ ಇದೆ. ಜೊತೆಗೆ ಸಭೆ ನಡೆಸಲು ಸಭಾಂಗಣ, ಸಿನಿಮಾ ವೀಕ್ಷಿಸಲು ಹೊಮ್ ಥೀಯೆಟರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಇದರಲ್ಲಿದೆ.
ಜೆನಿಫರ್ ಲೋಪೆಜ್ ಅವರ ಮನೆಯ ಗ್ಯಾರೇಜ್ ಎಷ್ಟು ದೊಡ್ಡದಿದೆ ಅಂದ್ರೆ 12 ಕಾರುಗಳನ್ನ ನಿಲ್ಲಿಸಬಹುದು. ಸಪರೇಟ್ ಪಾರ್ಕಿಂಗ್ ವ್ಯವಸ್ಥೆ ಇದೆ. ಇನ್ನು ವಿಸಿಟರ್ಸ್ ಪಾರ್ಕಿಂಗ್ ಬೇರೆ ಇದೆ. ಈ ಮನೆಯಲ್ಲಿ ಅತೀ ದೊಡ್ಡ ಕಾರ್ಯಕ್ರಮ ಆಯೋಜಿಸಲು ಎಲ್ಲಾ ವ್ಯವಸ್ಥೆ ಇದೆ.