ಐಪಿಎಲ್ ಫ್ರಾಂಚೈಸಿಗಳಾದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಸುಮಾರು 31,000 ಕೋಟಿ ರೂ.ಗೆ ಮಾರಾಟವಾಗಿವೆ. 2026ರ ಐಪಿಎಲ್ ಸೀಸನ್ ನಂತರ ಹೊಸ ಮಾಲೀಕತ್ವ ಜಾರಿಗೆ ಬರಲಿದ್ದು, ಈ ಒಪ್ಪಂದದಿಂದ ಬಿಸಿಸಿಐಗೆ ಶೇ. 5ರಷ್ಟು ವರ್ಗಾವಣೆ ಶುಲ್ಕದಿಂದಾಗಿ ಭಾರಿ ಲಾಭವಾಗಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎರಡು ಫ್ರಾಂಚೈಸಿಗಳಾದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರಾಟದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರೀ ಮೊತ್ತದ ಆದಾಯ ಗಳಿಸುವ ನಿರೀಕ್ಷೆ ಇದೆ. ಈ ವಾರದ ಆರಂಭದಲ್ಲಿ ಎರಡೂ ತಂಡಗಳನ್ನು ಮಾರಾಟ ಮಾಡಲಾಗಿದ್ದು, ಐಪಿಎಲ್ 2026 ರ ಸೀಸನ್ ಮುಗಿದ ನಂತರ ಮಾಲೀಕತ್ವ ಜಾರಿಗೆ ಬರಲಿದೆ.
26
ತಂಡಗಳನ್ನು ಖರೀದಿಸಿದವರು ಯಾರು?
ರಾಜಸ್ಥಾನ್ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಉದ್ಯಮಿ ಕಲ್ ಸೋಮಾನಿ ಖರೀದಿಸಿದರೆ, ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್, ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಇರುವಂಥ ಒಕ್ಕೂಟ ಖರೀದಿಸಿದೆ.
36
ಒಟ್ಟಾರೆ 31 ಸಾವಿರ ಕೋಟಿ ರೂಪಾಯಿಗೆ 2 ತಂಡ ಮಾರಾಟ
ಆರ್‌ಸಿಬಿಯನ್ನು 1.78 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿದರೆ, ಆರ್‌ಆರ್ ಅನ್ನು 1.63 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲಾಯಿತು. ಎರಡೂ ತಂಡಗಳ ಒಟ್ಟು ಮೌಲ್ಯ 3.4 ಬಿಲಿಯನ್ ಡಾಲರ್ (ಸುಮಾರು 31,000 ಕೋಟಿ ರೂ.) ಆಗಿದೆ. ಎರಡೂ ಒಪ್ಪಂದಗಳಲ್ಲಿ ಶೇ. 5 ರಷ್ಟು ವರ್ಗಾವಣೆ ಶುಲ್ಕದಿಂದಾಗಿ ಬಿಸಿಸಿಐ ಮಾರಾಟದಿಂದ 1,550 ಕೋಟಿ ರೂ.ಗಳಿಂದ 1,583 ಕೋಟಿ ರೂ.ಗಳವರೆಗೆ ಗಳಿಸಲಿದೆ.
ರಾಜಸ್ಥಾನ್ ರಾಯಲ್ಸ್ ಮಾರಾಟದ ನಿಖರವಾದ ಮೊತ್ತವು ಸಂಪೂರ್ಣವಾಗಿ ಬಹಿರಂಗವಾಗಿಲ್ಲ. ಏಕೆಂದರೆ ಪಾರ್ಲ್ ರಾಯಲ್ಸ್ ಮತ್ತು ಬಾರ್ಬಡೋಸ್ ರಾಯಲ್ಸ್ ಕೂಡ ಈ ಒಪ್ಪಂದದಲ್ಲಿ ಸೇರಿರಬಹುದು ಎನ್ನುವ ಮಾತುಗಳಿವೆ. ಆರ್‌ಆರ್ ಈ ಹಿಂದೆ ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬಡಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ಒಡೆತನದಲ್ಲಿತ್ತು. ಮತ್ತೊಂದೆಡೆ, ಒಟ್ಟು ನಾಲ್ಕು ಗುಂಪುಗಳು ಸೇರಿ ಆರ್‌ಸಿಬಿಯಲ್ಲಿ 100 ಪ್ರತಿಶತ ಪಾಲನ್ನು ಪಡೆದುಕೊಂಡಿವೆ.
56
ಶೇ. 5 ರಷ್ಟು ವರ್ಗಾವಣೆ ಷರತ್ತಿನ ಶುಲ್ಕ
ಹತ್ತು ಫ್ರಾಂಚೈಸಿ ಒಪ್ಪಂದಗಳಲ್ಲಿ ಶೇ. 5 ರಷ್ಟು ವರ್ಗಾವಣೆ ಷರತ್ತು ಮಾನ್ಯವಾಗಿದ್ದು, ಪ್ರತಿಯೊಂದು ಮಾಲೀಕತ್ವದ ಒಪ್ಪಂದದಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಆರ್ಥಿಕವಾಗಿ ಲಾಭ ಪಡೆಯುವುದು ಖಚಿತವಾಗಿದೆ.
66
ಶನಿವಾರದಿಂದ ಐಪಿಎಲ್ ಆರಂಭ
ಐಪಿಎಲ್ 2026 ರ ಸೀಸನ್‌ಗೆ ವೇದಿಕೆ ಸಜ್ಜಾಗಿದ್ದು, ಇದು ಶನಿವಾರ (ಮಾರ್ಚ್ 28) ರಂದು ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಮುಂದಿನ ಎರಡು ತಿಂಗಳುಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಮೇ 31 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳು ಇನ್ನೂ ಘೋಷಣೆ ಮಾಡಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.