Interesting Facts: ₹1 ನಾಣ್ಯ ತಯಾರಿಸಲು ₹1.11 ವೆಚ್ಚ! ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ ಸರ್ಕಾರ?

Published : Feb 06, 2026, 02:48 PM IST

Interesting Facts: ನೀವು ದಿನಬಳಕೆಯಲ್ಲಿ ಉಪಯೋಗಿಸುತ್ತಿರುವ, ನಿಮ್ಮ ಖರ್ಚು ವೆಚ್ಚಗಳಿಗೆ ಬೇಕಾಗಿರುವ ನಾಣ್ಯಗಳು ಮತ್ತು ನೋಟುಗಳನ್ನು ಪ್ರಿಂಟ್ ಮಾಡಲು ಸರ್ಕಾರ ಎಷ್ಟು ಖರ್ಚು ಮಾಡುತ್ತೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಇಲ್ಲಿದೆ ನೋಡಿ ವಿವರ.

PREV
16
1 ರೂಪಾಯಿ ನಾಣ್ಯದ ತಯಾರಿ

ಇತ್ತೀಚಿನ ದಿನಗಳಲ್ಲಿ ಎಲ್ಲಾದಕ್ಕೂ ಜನರು ಡಿಜಿಟರ್ ಪೇಮೆಂಟ್ ಅವಲಂಭಿಸಿದ್ದರೂ ಸಹ, ಬಸ್, ಆಟೋ, ದಿನಸಿ ಅಂಗಡಿಗಳಲ್ಲಿ ನೋಟು ನಾಣ್ಯಗಳ ವ್ಯವಾಹಾರ ನಡೆಯುತ್ತೆ. ಅದರಲ್ಲೂ 1 ರೂಪಾಯಿ ನಾಣ್ಯ ಚಲಾವಣೆ ಹೆಚ್ಚಾಗಿರೋದೆ ಈ ಸ್ಥಳಗಳಲ್ಲಿ. 1 ರೂಪಾಯಿ ನಾಣ್ಯ ಕೇವಲ ಅಂತ ನಿಮಗೆ ಅನಿಸಬಹುದು, ಆದರೆ ಈ 1 ರೂಪಾಯಿ ನಾಣ್ಯ ತಯಾರಿಸಲು ಸರ್ಕಾರ ಮಾಡುವ ಖರ್ಚಿನ ಬಗ್ಗೆ ತಿಳಿದ್ರೆ ಖಂಡಿತಾಗಿಯೂ ನಿಮಗೆ ಅಚ್ಚರಿ ಎನಿಸಬಹುದು.

26
ನಾಣ್ಯ, ನೋಟು ತಯಾರಿಸಲು ಆಗುವ ವೆಚ್ಚ ಎಷ್ಟು?

2018 ರ ಆರ್‌ಟಿಐ ಪ್ರಶ್ನೆಯ ಪ್ರಕಾರ, ಭಾರತದಲ್ಲಿ 1 ರೂಪಾಯಿ ನಾಣ್ಯವನ್ನು ಟಂಕಿಸಲು ಅದರ ಮುಖಬೆಲೆಗಿಂತ ಸುಮಾರು ₹1.11 ವೆಚ್ಚವಾಗುತ್ತದೆ, ಅಂದರೆ ಸರ್ಕಾರವು ಉತ್ಪಾದಿಸುವ ಪ್ರತಿ ನಾಣ್ಯದ ಮೇಲೆ ಹಣವನ್ನು ಕಳೆದುಕೊಳ್ಳುತ್ತದೆ. ಈ ಡೇಟಾ 2018 ರದ್ದು, ಈಗ ಹಣದುಬ್ಬರ ಮತ್ತಷ್ಟು ಹೆಚ್ಚಾಗಿರುವುದರಿಂದ, ನಾಣ್ಯ ತಯಾರಿಸುವ ಬೆಲೆ ಕೂಡ ಹೆಚ್ಚಾಗಿರಬಹುದು. ಈ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

36
ಯಾವ ನೋಟು ಪ್ರಿಂಟ್ ಮಾಡಲು ಎಷ್ಟು ಖರ್ಚು?
  • 10 ರೂಪಾಯಿ ನೋಟು : 96 ಪೈಸೆ
  • 50 ರೂಪಾಯಿ ನೋಟು : 1ರೂಪಾಯಿ 11 ಪೈಸೆ
  • 100 ರೂಪಾಯಿ ನೋಟು : 1ರೂಪಾಯಿ 77 ಪೈಸೆ
  • 500 ರೂಪಾಯಿ ನೋಟು : 2 ರೂಪಾಯಿ 29 ಪೈಸೆ
46
ನಾಣ್ಯ ತಯಾರಿಸಲು ಎಷ್ಟು ವೆಚ್ಚ?
  • 1 ರೂಪಾಯಿ ನಾಣ್ಯ : 1 ರೂಪಾಯಿ 11 ಪೈಸೆ (ನಷ್ಟ)
  • 5 ರೂಪಾಯಿ ನಾಣ್ಯ : 3 ರೂಪಾಯಿ 69 ಪೈಸೆ
  • 10 ರೂಪಾಯಿ ನಾಣ್ಯ : 5 ರೂಪಾಯಿ 54 ಪೈಸೆ
56
1 ರೂಪಾಯಿ ನಾಣ್ಯದಿಂದ ನಷ್ಟ ಆದ್ರೂ ಖರ್ಚು ಮಾಡೋದ್ಯಾಕೆ?

1 ರೂಪಾಯಿ ನಾಣ್ಯ ತಯಾರಿಸಲು ಸರ್ಕಾರ 1 ರೂಪಾಯಿ 11 ಪೈಸೆ ಖರ್ಚು ಮಾಡುತ್ತಿದೆ, ಅಂದ್ರೆ ಅದು ನಷ್ಟ, ಅದರ ಬದಲು ಪೇಪರ್ ಪ್ರಿಂಟ್ ಯಾಕೆ ಮಾಡಬಾರದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡದೇ ಇರದು. ಅದಕ್ಕೆ ಉತ್ತರ ಬಾಳಿಕೆ. ಇಂದು ತಯಾರಿಸಲಾಗುವ ನಾಣ್ಯಗಳನ್ನು ಇನ್ನು 100 ವರ್ಷ ಬೇಕಾದ್ರೂ ಬಳಕೆ ಮಾಡಬಹುದು. ಆದರೆ ನೋಟು ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗುತ್ತದೆ.

66
ಸ್ಟೇನ್‌ಲೆಸ್ ಸ್ಟೀಲ್ ಬಳಸಿ ನಾಣ್ಯ ತಯಾರಿ

ಇನ್ನು ನಾಣ್ಯಗಳನ್ನು ತಯಾರಿಸಲು ಸ್ಟೇನ್‌ಲೆಸ್ ಸ್ಟೀಲ್ ಬಳಸಲಾಗುತ್ತದೆ, ಇದರ ವ್ಯಾಸ 21.93 ಮಿಲಿಮೀಟರ್, ದಪ್ಪ 1.45 ಮಿಲಿಮೀಟರ್ ಮತ್ತು ತೂಕ 3.76 ಗ್ರಾಂ ಇದೆ. ಇದನ್ನು ತಯಾರಿಸಲು ವಿಶೇಷ ತಂತ್ರಜ್ಞಾನ ಅಗತ್ಯ ಕೂಡ ಇದೆ. ಇವುಗಳನ್ನು ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಭಾರತೀಯ ಸರ್ಕಾರಿ ಟಂಕಸಾಲೆ (ಐಜಿಎಂ) ಟಂಕಿಸಲಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories