ಗೋವಾದ ಈ ಐಷಾರಾಮಿ ಬಂಗಲೆಯಲ್ಲಿದ್ರು ಮಲ್ಯ, ಹರಾಜಿನಲ್ಲಿ ಖರೀದಿಸುವವರಿಲ್ಲ!

First Published | Aug 30, 2020, 3:38 PM IST

ವಿದೇಶಕ್ಕೆ ಪರಾರಿಯಾಗಿರುವ ಮದ್ಯ ಉದ್ಯಮಿ ಹಾಗೂ ಸದ್ಯ ಮುಚ್ಚಲಾಗಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಾಲೀಕರಾಗಿದ್ದ ವಿಜಯ್ ಮಲ್ಯ ಸದ್ಯ ಲಂಡನ್‌fನಲ್ಲಿ ಜೀವನ ಸಾಗಿಸುತ್ತಿದ್ದಾರೆ ಒಂಭತ್ತು ಸಾವಿರ ಕೋಟಿ ಸಾಲ ಚುಕ್ತಾ ಮಾಡಲಾಗದೆ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿದೆ. ಹರಾಜಿನ್ಲಿ ಮಲ್ಯರ ಎಲ್ಲಾ ಆಸ್ತಿ ಮಾರಾಟವಾಗಿದ್ದರೂ ಗೋವಾದಲ್ಲಿ ನಿರ್ಮಿಸಲಾಗಿರುವ ಅವರ ವಿಲ್ಲಾವನ್ನು ಖರೀದಿಸಲು ಯಾರೂ ಮುಂದಾಗಿಲ್ಲ. ಈ ವಿಲ್ಲಾ ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಈ ವಿಲ್ಲಾದಲ್ಲಿ ವಿಶ್ವದ ಎಲ್ಲಾ ಸೌಲಭ್ಯಗಳಿದ್ದವು. ಆದರೆ ಬ್ಯಾಂಕ್ ಇದನ್ನು ಮುಟ್ಟುಗೋಲು ಮಾಡಿ ಹರಾಜು ಹಾಕಲು ಮುಂದಾದಾಗ ಮಾತ್ರ ಖರೀದಿಸಲು ಯಾರೂ ಬರಲಿಲ್ಲ. ನಾಲ್ಕು ಬಾರಿ ಹರಾಜು ಹಾಕಿದ ಬಳಿಕ ಈ ಬಂಗಲೆ ಕೇವಲ 73 ಕೋಟಿಗೆ ಸೇಲಾಯ್ತು. ಬಾಲಿವುಡ್ ನಟ ಹಾಗೂ ಉದ್ಯಮಿ ಸಚಿನ್ ಜೋಶಿ ವಿಜಯ್ ಮಲ್ಯರ ಈ ವಿಲ್ಲಾವನ್ನು ಖರೀದಿಸಿದ್ದಾರೆ. ಇಲ್ಲಿದೆ ನೋಡಿ ಮಲ್ಯರ ಆ ಐಷಾರಾಮಿ ಬಂಗಲೆಯ ಒಳನೋಟ
 

ವಿಜಯ್ ಮಲ್ಯ ಲಂಡನ್‌ಗೆ ಪರಾರಿಯಾಗುವ ಮುನ್ನ ತಮ್ಮ ಐಷಾರಾಮಿ ಜೀವನಶೈಲಿ, ಹೈ ಪ್ರೊಫೈಲ್ ಪಾರ್ಟಿಗಳು ಹಾಗೂ ಬಿಂದಾಸ್ ಲೈಫ್‌ನಿಂದಲೇ ಹೆಸರುವಾಸಿಯಾಗಿದ್ದರು.
ವಿಶ್ವಾದ್ಯಂತ ಅವರ ಅನೇಕ ಐಷಾರಾಮಿ ಮನೆ ಹಾಗೂ ಬಂಗಲೆಗಳಿವೆ. ಇವುಗಳಲ್ಲಿ ಕೆಲವು ಭಾರತದಲ್ಲಿದ್ದರೆ, ಇನ್ನು ಕೆಲವು ವಿದೇಶಗಳಲ್ಲಿವೆ.
Tap to resize

ಸಾಲದಲ್ಲಿ ಮುಳುಗಿದ್ದರೂ ಮಲ್ಯರ ಐಷಾರಾಮಿ ಜೀವನಕ್ಕೆ ಮಾತ್ರ ಯಾವುದೇ ಅಡೆ ತಡೆ ಇರಲಿಲ್ಲ. ಅನೇಕ ಸರ್ಕಾರಿ ಬ್ಯಾಂಕ್‌ಗಳಿಂದ 9,000 ಕೋಟಿ ಸಾಲ ಪಡೆದ ಮಲ್ಯ ಲಂಡನ್‌ಗೆ ಪರಾರಿಯಾಗಿದ್ದರು. ಇದಾದಬಳಿಕ ಬ್ಯಾಂಕ್ ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಿತು. ಇವುಗಳಲ್ಲಿ ಓವಾದ ಅವರ ಬಂಗಲೆಯೂ ಒಂದು.
ಗೋವಾದಲ್ಲಿದ್ದ ಮಲ್ಯರ ಐಷಾರಾಮಿ ಬಂಗಲೆ ಹೆಸರು 'ಕಿಂಗ್ಫಿಶರ್ ವಿಲ್ಲಾ' ಎಂದಿಡಲಾಗಿತ್ತು. ಮೂರು ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದ ಈ ಬಂಗಲೆ ಗೀವಾದ ಕಾಂಡೋಲಮ್ ಬೀಚ್‌ ಬಳಿ ಇದೆ.
ಈ ವಿಲ್ಲಾ ಮಲ್ಯರ ಅತ್ಯಂತ ಪ್ರಿಯವಾದ ಸ್ಥಳವಾಗಿತ್ತು. ಇಲ್ಲೇ ಅವರು ಸಾಮಾನ್ಯವಾಗಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಇಲ್ಲಿ ಮಲ್ಯರವರು ಬಿಂಸಾದಾಗಿ ಇರುತ್ತಿದ್ದರು.
ಗೋವಾದ ಈ ವಿಲ್ಲಾದಲ್ಲಿ ಒಂದು ಸಮಯದಲ್ಲಿ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯಂತಹ ದಿಗ್ಗಜ ಕ್ರಿಕೆಟಿಗರು ಪಾರ್ಟಿ ಮಾಡಿದ್ದರು. ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯ್ ಮಲ್ಯರ ಒಡೆತನದ ತಂಡವಾಗಿತ್ತು.
ಈ ವಿಲ್ಲಾವನ್ನು ಖುದ್ದು ವಿಜಯ್ ಮಲ್ಯರೇ ಗೋವಾ ಶೈಲಿಯಲ್ಲಿ ಡಿಸೈನ್ ಮಾಡಿಸಿದ್ದರು. ಇದರಲ್ಲಿ ಮೂರು ಗ್ರ್ಯಾಂಡ್ ಸೈಜ್ ಐಷಾರಾಮಿ ಬೆಡ್‌ ರೂಂ, ಒಂದು ದೊಡ್ಡ ಲಿವಿಂಗ್ ರೂಂ ಹಾಗೂ ದೊಡ್ಡದೊಂದು ಗಾರ್ಡನ್ ಕೂಡಾ ಇತ್ತು.
ಮಲ್ಯ ಪರಾರಿಯಾಗಿದ್ದಾರೆಂದು ಘೋಷಿಸಿದ ಬಳಿಕ, ಆಸ್ತಿಯನ್ನೆಲ್ಲಾ ಸೀಜ್ ಮಾಡಲಾಯ್ತು.
ಬ್ಯಾಂಕ್ ಎಲ್ಲಾ ಸ್ಥಳಗಳನ್ನೂ ಹರಾಜು ಹಾಕಿತು. ಆದರೆ ಕಿಂಗ್‌ಫಿಶರ್ ವಿಲ್ಲಾ ಖರೀದಿಸಲು ಗ್ರಾಹಕರೇ ಸಿಗುತ್ತಿರಲಿಲ್ಲ. ನಾಲ್ಕು ಬಾರಿ ಹರಾಜು ನಡೆಸಿದ ಬಳಿಕ 2017ರಲ್ಲಿ ಕೇವಲ 73 ಕೋಟಿಗೆ ಇದು ಮಾರಾಟವಾಯ್ತು.

Latest Videos

click me!