5 ಸಾವಿರ ರೂ. ಉದ್ಯಮ ಆರಂಭಿಸಿದ್ರೆ ಭಾರೀ ಲಾಭ, ಸರ್ಕಾರದಿಂದಲೂ ಸಹಾಯ!

First Published | Aug 30, 2020, 1:18 PM IST

ಕೊರೋನಾತಂಕದ ಸಂಕಷ್ಟದ ಸಮಯದಲ್ಲಿ ಜನರಿಗೆ ನಿರುದ್ಯೋಗವೂ ಕಾಡಲಾರಂಭಿಸಿದೆ. ಅನೇಕ ಮಂದಿಯ ಉದ್ಯೋಗ ಕಡಿತವಾಗಿದ್ದರೆ, ಉಳಿದವರ ವೇತನ ಹಾಗೂ ಭತ್ಯೆ ಕಡಿತ ಮಾಡಲಾಗುತ್ತಿದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ಕಡೆ ಆರ್ಥಿಕ ಸಮಸ್ಯೆ ಹುಟ್ಟಿಕೊಂಡಿದೆ. ಹೀಗಿರುವಾಗ ಪ್ರತಿಯೊಬ್ಬರೂ ಹಣ ಸಂಪಾದಿಸುವ ಹಾದಿ ಹುಡುಕುತ್ತಿದ್ದಾರೆ. ಹೀಗಿರುವಾಗ ಕಡಿಮೆ ಹಣ ಹೂಡಿಕೆ ಮಾಡಿ ಹೊಸ ಉದ್ಯಮ ಆರಂಭಿಸಿ ಉತ್ತಮ ಹಣ ಗಳಿಸುವವರು ಅನೇಕರಿದ್ದಾರೆ. ಹೀಗಿರುವಾಗ ಇಂತಹುದ್ದೊಂದು ಉದ್ಯಮದ ಬಗ್ಗೆ ಮಾಹಿತಿ ಇಲ್ಲಿದೆ.

ಕುಲ್ಹಾಡ್ ಮಾಡುವ ಉದ್ಯಮ: ದೇಶದಲ್ಲಿ ಮಮಣ್ಣಿನ ಕುಲ್ಹಾಡ್‌ಗೆ ಭಾರೀ ಬಬೇಡಿಇಕೆ ಇದೆ. ಅನೇಕ ಮಂದಿ ಪ್ಲಾಸ್ಟಿಕ್ ಕಪ್ ಬದಲು ಮಣ್ಣಿನ ಚಿಕ್ಕ ಕಪ್‌ಗಳಲ್ಲಿ ಟೀ, ಲಸ್ಸೀ ಹಾಗೂ ಇನ್ನಿತರ ಪಾನೀಯಗಳನ್ನು ಕುಡಿಯಲು ಇಚ್ಛಿಸುತ್ತಾರೆ. ಆದರೆ ಮಣ್ಣಿನ ಈ ಕುಲ್ಹಾಡ್‌ಗಳ ಅಗತ್ಯ ಎಷ್ಟಿದೆಯೋ ಅಷ್ಟು ಪೂರೈಕೆಯಾಗುತ್ತಿಲ್ಲ. ಹೀಗಿರುವಾಗ ಕಡಿಮೆ ಹಣ ಹೂಡಿಕೆ ಮಾಡಿ ಉತ್ತಮ ಹಣ ಸಂಪಾದಿಸಬಹುದು.
ಸರ್ಕಾರದಿಂದಲೂ ಬೆಂಬಲ: ಪ್ಲಾಸ್ಟಿಕ್ ಕಪ್‌ಗಳು ಪರಿಸರದೊಂದಿಗೆ ಆರೋಗ್ಯಕ್ಕೂ ಮಾರಕ. ಪ್ಲಾಸ್ಟಿಕ್‌ ಕಪ್‌ಗಳಲ್ಲಿ ಟೀ ಕುಡಿಯುವುದರಿಂದ ಅನೇಕ ಬಗೆಯ ಕೆಮಿಕಲ್‌ಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಕ್ಯಾನ್ಸರ್‌ನಂತಹ ರೋಗ ಬಾಧಿಸುತ್ತದೆ. ಹೀಗಾಗಿಸರ್ಕಾರವೂ ಈ ಮಣ್ಣಿನ ಕಪ್‌ ನಿರ್ಮಾಣಕ್ಕೆ ಬೆಂಬಲ ನೀಡಲು ಇಚ್ಛಿಸುತ್ತದೆ.
Tap to resize

ಸರ್ಕಾರದಿಂದ ಸಹಾಯ: ಮೋದಿ ಸರ್ಕಾರ ಕುಲ್ಹಾಡ್ ಉತ್ಪಾದಿಸಲು ಹಾಗೂ ಇದರ ನಿರ್ಮಾಣ ಬೆಂಬಲಿಸಲು ಕುಂಬಾರ ಶಕ್ತೀಕರಣ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಕುಂಬಾರರಿಗೆ ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುವ ಯಂತ್ರ ನೀಡುತ್ತದೆ. ಇದರಿಂದ ಕುಲ್ಹಾಡ್ ಮಾತ್ರವಲ್ಲ, ಮಣ್ಣಿನ ಇತರ ಪಾತ್ರೆಗಳನ್ನೂ ನಿರ್ಮಿಸಬಹುದಾಗಿದೆ. ಇಷ್ಟೇ ಅಲ್ಲದೇ ನಿರ್ಮಿಸಿದ ಮಣ್ಣಿನ ಪಾತ್ರೆಳನ್ನು ಸರ್ಕಾರವೇ ಖರೀದಿಸುತ್ತದೆ.
ಐದು ಸಾವಿರ ರೂ. ನಿಂದ ಆರಂಭಿಸಬಹುದು ಈ ಉದ್ಯಮ: ಕುಲ್ಹಾಡ್ ನಿರ್ಮಾಣ ಉದ್ಯಮದಲ್ಲಿ ಹೆಚ್ಚು ಹಣ ಹೂಡಿಕೆ ಮಾಡಬೇಕೆಂದಿಲ್ಲ. ಕೇವಲ ಐದು ಸಾವಿರ ರೂ. ನಿಂದ ಈ ಉದ್ಯಮ ಆರಂಭಿಸಬಹುದು. ಖಾದಿ ಗ್ರಾಮೋದ್ಯೋಗ ಆಯೋಗದ ಚೇರ್ಮನ್ ಹೇಳುವ ಅನ್ವಯ ಕೇಂದ್ರ ಸರ್ಕಾರ ಈ ಬಾರಿ 25 ಸಾವಿರ ಎಲೆಕ್ಟ್ರಿಕ್ ಯಂತ್ರ ವಿತರಿಸಿದೆ ಎಂದಿದ್ದಾರೆ.
ಇದರಿಂದ ಎಷ್ಟು ಹಣ ಸಂಪಾದಿಸಬಹುದು: ಮಣ್ಣಿನಿಂದ ನಿರ್ಮಿಸುಲಾಗು ಈ ಕುಲ್ಹಾಡ್ ಪರಿಸರ ಸ್ನೇಹಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಟೀ ಕುಲ್ಹಾಡ್‌ಗೆ 50 ರೂ. ನಿಗದಿಯಾಗಿದೆ. ಲಸ್ಸಿ ಕುಲ್ಹಾಡ್‌ಗೆ 150ರೂ. ಇದೆ. ಇನ್ನು ಬೇಡಿಕೆ ಹೆಚ್ಚಿದರೆ ಬೆಲೆಯೂ ಹೆಚ್ಚಾಗುತ್ತದೆ.
ಇದರಿಂದ ಎಷ್ಟು ಹಣ ಸಂಪಾದಿಸಬಹುದು: ಮಣ್ಣಿನಿಂದ ನಿರ್ಮಿಸುಲಾಗು ಈ ಕುಲ್ಹಾಡ್ ಪರಿಸರ ಸ್ನೇಹಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಟೀ ಕುಲ್ಹಾಡ್‌ಗೆ 50 ರೂ. ನಿಗದಿಯಾಗಿದೆ. ಲಸ್ಸಿ ಕುಲ್ಹಾಡ್‌ಗೆ 150ರೂ. ಇದೆ. ಇನ್ನು ಬೇಡಿಕೆ ಹೆಚ್ಚಿದರೆ ಬೆಲೆಯೂ ಹೆಚ್ಚಾಘುತ್ತದೆ.

Latest Videos

click me!