ಕರ್ನಾಟಕ ಸರ್ಕಾರ ಈಗಾಗಲೇ ಅಕ್ಕ ಕೆಫೆಯಲ್ಲಿ ಯಶಸ್ಸು ಕಂಡಿದೆ. ಇನ್ನಷ್ಟು ಮಹಿಳೆಯರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಅಕ್ಕ ಕೆಫೆಗೆ ನೀವೂ ಸೇರ್ಬೇಕು ಅಂದ್ರೆ ಏನು ಮಾಡ್ಬೇಕು?
ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಶುರು ಮಾಡಿದ ಯೋಜನೆ ಅಕ್ಕ ಕೆಫೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬಜೆಟ್ ನಲ್ಲಿ ಅಕ್ಕ ಕೆಫೆ ಬಗ್ಗೆ ಘೋಷಣೆ ಮಾಡಿದ್ದರು. 2024, ಮಾರ್ಚ್ 8 ರಂದು ಅಕ್ಕ ಕೆಫೆ ಶುರಭಾರಂಭಗೊಂಡಿದೆ. ಅಂದಿನಿಂದ ಇಂದಿನವರೆಗೆ ಅಕ್ಕ ಕೆಫೆಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಸಂಪೂರ್ಣವಾಗಿ ಮಹಿಳಾಮಯ ಈ ಅಕ್ಕ ಕೆಫೆ. ಸ್ವಸಹಾಯ ಗುಂಪುಗಳ ಸದಸ್ಯರು ನಡೆಸುವ ಈ ಅಕ್ಕ ಕೆಫೆಯನ್ನು, ರಾಷ್ಟ್ರೀಯ ಜೀವನೋಪಾಯ ಮಷಿನ್ ಎನ್ ಎಂಎಲ್ ಸರ್ಕಾರದ ಜೊತೆ ಸೇರಿ ಶುರು ಮಾಡಿದೆ.
26
ಅಕ್ಕ ಕೆಫೆ ಉದ್ದೇಶ
ಸ್ವ ಸಹಾಯ ಗುಂಪುಗಳ ಮಹಿಳೆಯರನ್ನು ಕಿರುಬಂಡವಾಳ ಆಧಾರಿತ ಚಟುವಟಿಕೆಗಳಿಗೆ ಸೀಮಿತವಾಗಿರಿಸದೆ ಸೂಕ್ಷ್ಮ ಉದ್ಯಮಿಗಳಾಗಲು ಅನುವು ಮಾಡಿಕೊಡುವುದು ಇದ್ರ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಸರ್ಕಾರ ಸ್ವ ಸಹಾಯ ಗುಂಪಿನ (SHG) ಮಹಿಳೆಯರಿಂದ ಪ್ರತ್ಯೇಕವಾಗಿ ನಡೆಸಲ್ಪಡುವ 2,500 'ಅಕ್ಕಾ ಕೆಫೆ' ಕಾಫಿ ಕಿಯೋಸ್ಕ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ರಾಜ್ಯಾದ್ಯಂತ ಕಿಯೋಸ್ಕ್ಗಳ ತಯಾರಿಕೆ, ಪೂರೈಕೆ, ಸ್ಥಾಪನೆ ಮತ್ತು ಕಾರ್ಯಾರಂಭಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು. ಮೊದಲ ಹಂತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 50 ಆಧುನಿಕ ಕೆಫೆಗಳನ್ನು ಸ್ಥಾಪಿಸಲಾಗುವುದು. ಅರ್ಹ ಮಹಿಳೆಯರು ಮೂಲಸೌಕರ್ಯ ಮತ್ತು ಸೆಟಪ್ಗಾಗಿ 15 ಲಕ್ಷ ರೂಪಾಯಿವರೆಗೆ ಅನುದಾನ ಪಡೆಯಲಿದ್ದಾರೆ.
36
ಯಶಸ್ಸಿನ ಹಾದಿಯಲ್ಲಿ ಅಕ್ಕ ಕೆಫೆ
ಈಗಾಗಲೇ ರಾಜ್ಯದಲ್ಲಿ ಆರು ಅಕ್ಕಾ ಕೆಫೆಗಳು ಕಾರ್ಯನಿರ್ವಹಿಸುತ್ತಿವೆ. ಎರಡು ಬೆಂಗಳೂರಿನಲ್ಲಿ, ಎರಡು ಬೀದರ್ನಲ್ಲಿ ಮತ್ತು ಒಂದು ಕಾರವಾರ ಮತ್ತು ಒಂದು ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಗಾಂಧಿನಗರದಲ್ಲಿ ಮತ್ತು ಇನ್ನೊಂದು ದೇವನಹಳ್ಳಿಯಲ್ಲಿ ಕೆಫೆಗಳು ಕಾರ್ಯನಿರ್ವಹಿಸುತ್ತಿವೆ. ಸ್ವ ಸಹಾಯ ಗುಂಪಿನ ಮಹಿಳೆಯರು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಅಕ್ಕ ಕೆಫೆಯಲ್ಲಿ ಕೆಲ್ಸ ಮಾಡ್ತಿದ್ದಾರೆ.
ಅಕ್ಕ ಕೆಫೆಯಲ್ಲಿ ನಿಮಗೆ ಕಾಫಿ ಲಭ್ಯವಾಗಲಿದೆ. ರಾಜ್ಯದ ವಿವಿಧ ಭಾಗಗಳ ನಿರ್ದಿಷ್ಟವಾದ ಪ್ರಾದೇಶಿಕ ಪಾಕಪದ್ಧತಿ ಸಹ ಇದರಲ್ಲಿರಲಿದೆ. ಇಡ್ಲಿ, ವಡಾ, ಉಪ್ಪಿಟ್ಟು, ಪುಲಾವ್ ಮತ್ತು ಚಹಾದಂತಹ ಉಪಾಹಾರ ಪದಾರ್ಥಗಳನ್ನು ಅಗ್ಗದ ದರದಲ್ಲಿ ನೀಡಲಾಗ್ತಿದೆ.
56
ಒಂದು ಲಕ್ಷ ಮಹಿಳೆಯರಿಗೆ ತರಬೇತಿ
ಕರ್ನಾಟಕದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದೊಂದಿಗೆ ಭಾರತೀಯ ಕಾಫಿ ಮಂಡಳಿಯು, ಒಂದು ಲಕ್ಷ ಸ್ವಸಹಾಯ ಸಂಘ ಮಹಿಳೆಯರಿಗೆ ಅಧಿಕೃತ ಫಿಲ್ಟರ್ ಕಾಫಿ ತಯಾರಿಕೆ, ಕೆಫೆ ಮತ್ತು ಕಿಯೋಸ್ಕ್ ನಿರ್ವಹಣೆ ಮತ್ತು ಉದ್ಯಮಶೀಲತೆ ಮತ್ತು ಸೂಕ್ಷ್ಮ ಉದ್ಯಮ ಅಭಿವೃದ್ಧಿಯಲ್ಲಿ ತರಬೇತಿ ನೀಡಲು ಮುಂದಾಗಿದೆ. ಆರಂಭದಲ್ಲಿ, ಬೆಂಗಳೂರಿನಲ್ಲಿರುವ ಕಾಫಿ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಸುಮಾರು 400 ಮಹಿಳೆಯರಿಗೆ ಮಾಸ್ಟರ್ ತರಬೇತುದಾರರಾಗಿ ತರಬೇತಿ ನೀಡಲಾಗುವುದು. ಈ ತರಬೇತುದಾರರು ನಂತರ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುತ್ತಾರೆ.
66
ಅಕ್ಕ ಕೆಫೆ ಆರಂಭ ಹೇಗೆ?
ಪ್ರತಿಯೊಂದು ಜಿಲ್ಲಾ ಪಂಚಾಯತಿ ಅಕ್ಕ ಕೆಫೆ ಆರಂಭಕ್ಕೆ ಅರ್ಜಿ ಕರೆಯುತ್ತದೆ. ಆಸಕ್ತ ಸ್ವ ಸಹಾಯ ಗುಂಪಿನ ಸದಸ್ಯರು ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ತರಬೇತಿ ಪಡೆದ ನಂತ್ರ ಅಕ್ಕ ಕೆಫೆ ಶುರು ಮಾಡಿ ಸ್ವಾವಲಂಭಿ ಬದುಕು ಶುರು ಮಾಡ್ಬಹುದು. ಈ ವರ್ಷ ಸರ್ಕಾರ ಇದಕ್ಕಾಗಿ 25 ಕೋಟಿ ರೂಪಾಯಿ ಮಂಜೂರಿ ಮಾಡಿದ್ದು, ಮಹಿಳೆಯರು ಯೋಜನೆ ಲಾಭ ಪಡೆಯುವ ಅಗತ್ಯವಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.