ಕೇವಲ 300 ರೂ. ಬಂಡವಾಳದಿಂದ 200 ಕೋಟಿ ರೂ. ಗಳಿಸಿದ ಶ್ರೇಷ್ಠ ಮಹಿಳಾ ಉದ್ಯಮಿ!

First Published | Jan 7, 2024, 9:08 PM IST

ದೇಶದಲ್ಲಿ ಸ್ಟಾರ್ಟ್‌ಅಪ್‌ ಥೀಮ್‌ ಮುನ್ನೆಲೆಗೆ ಬಂದ ನಂತರ ಹಲವು ಉದ್ಯಮಿಗಳು ತಮ್ಮ ಜೀವನವನ್ನಿ ದೊಡ್ಡ ಮಟ್ಟದಲ್ಲಿ ಕಟ್ಟಿಕೊಂಡಿದ್ದಾರೆ. ಸಣ್ಣದಾಗಿ ಕಂಪನಿ ಆರಂಭಿಸಿ ಈಗ ಕೋಟ್ಯಂರ ರೂ. ಆದಾಯ ಗಳಿಸುವ ಉದ್ಯಮಿಗಳಾಗಿದ್ದಾರೆ.  ಕೇವಲ 300 ರೂ. ಬಂಡವಾಳದಿಂದ ಆರಂಭಿಸಿದ ಕಂಪನಿ ಈಗ 200 ಕೋಟಿ ರೂ. ಲಾಭ ಗಳಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ.

ನಾವು ಉದ್ಯೋಗವಿಲ್ಲ, ಬಂಡವಾಳವಿಲ್ಲ ಎಂದು ನಮಗೆ ಸಿಕ್ಕಿರುವ ಎಲ್ಲ ಅವಕಾಶಗಳನ್ನು ಒದ್ದು ಕೈಕಟ್ಟಿ ಕೂರುವ ಬದಲು ಅನೇಕ ಕಷ್ಟಗಳನ್ನು ಅನುಭವಿಸಿ ಅತ್ಯಲ್ಪ ಹಣದಲ್ಲಿ ಬೃಹತ್ ಉದ್ಯಮವನ್ನು ಕಟ್ಟಿದ ಸಾಧಕಿ ನಮ್ಮ ಈ ಚಿನು ಕಲಾ ಆಗಿದ್ದಾರೆ.
 

ಚಿಕ್ಕವರಿದ್ದಾಗ ತಾಯಿಯನ್ನು ಕಳೆದುಕೊಂಡು ತಂದೆ ಎರಡನೇ ಮದುವೆಯಾದ ನಂತರ ಇವರನ್ನು 15 ವರ್ಷಕ್ಕೆ ಮನೆಯಿಂದ ಹೊರಗೆ ತಳ್ಳಿದ್ದರು. ಮನೆಯಿಂದ 300 ರೂ. ಇಟ್ಟುಕೊಂಡು ಹೊರಬಂದ ಚಿನುಕಲಾ ಜೀವನ ಕಟ್ಟಿಕೊಳ್ಳಲು ಬಹಳ ಶ್ರಮಿಸಿದ್ದು, ಪ್ರಸ್ತುತ 200 ಕೋಟಿ ರೂ. ಮೌಲ್ಯದ ಉದ್ಯಮದ ಒಡತಿಯಾಗಿದ್ದಾಳೆ.

Latest Videos


ಇನ್ನು ಮನೆಯಿಂದ ಹೊರದೂಡಲ್ಪಟ್ಟಾಗ ರೈಲಿನಲ್ಲಿ ಟಿಕೆಟ್‌ ತೆಗೆದುಕೊಳ್ಳದೇ ಮುಂಬೈ ನಗರಕ್ಕೆ ಬಂದು ಇಳಿದ ಈಕೆ, ತಮ್ಮ 15ನೇ ವಯಸ್ಸಿನಲ್ಲಿಯೇ ಸೇಲ್ಸ್‌ ಗರ್ಲ್‌ ಆಗಿ ಕೆಲಸವನ್ನು ಆರಂಭಿಸುತ್ತಾರೆ.
 

ತಾನು ಮನೆಯಿಂದ ಹೊರಗೆ ಬಂದು ಕಷ್ಟದಲ್ಲಿದ್ದೇನೆ ಎಂಬ ಕೀಳಿರಿಮೆ ಬಿಟ್ಟು 15ನೇ ವಯಸ್ಸಿಗೆ ಕೆಲವು ಕಂಪನಿಗಳ ವಸ್ತುಗಳನ್ನು ಇಟ್ಟುಕೊಂಡು ಮನೆ ಮನೆ ಬಾಗಿಲಿಗೆ ಹೋಗಿ ಮಾರಾಟವನ್ನು ಶುರು ಮಾಡುತ್ತಾಳೆ.
 

ಸೇಲ್ಸ್‌ ಗರ್ಲ್‌ ಆಗಿ ಕೆಲಸ ಮಾಡಿದ ನಂತರ 3-4 ವರ್ಷಗಳವರೆಗೆ ಕಾಲ್‌ಸೆಂಟರ್ ಮತ್ತು ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಾರೆ. ನಂತರ, 2003ರಲ್ಲಿ ಒಂದು ಬ್ಯೂಟಿ ಪಾರ್ಲರ್ ಆರಂಭಿಸಿದರು.
 

ಇಷ್ಟಕ್ಕೆ ತಮ್ಮ ಆದಾಯ ಸಾಕಾಗುತ್ತಿಲ್ಲ, ಇನ್ನೂ ಹೆಚ್ಚಿನದ್ದೇನಾದರೂ ಸಾಧಿಸಬೇಕೆಂದು ತುಡಿಯುತ್ತಿದ್ದ ಚಿನುಕಲಾ ಮನಸ್ಸು, 2009ರಲ್ಲಿ ಹೆಣ್ಣು ಮಕ್ಕಳ ತಲೆ ಕೂದಲಿಗೆ ಅಲಂಕಾರಕ್ಕೆ ಬಳಸುವ ಜ್ಯುವೆಲ್ಲರಿ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಆರಂಭಿಸಿದರು.

ಇದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾದ್ದರಿಂದ ತಡಮಾಡದೇ 2014ರಲ್ಲಿ ರೂಬನ್ಸ್ ಆಕ್ಸೆಸರೀಸ್ ಎಂಬ ಸ್ಟಾರ್ಟ್‌ ಅಪ್‌ ಅನ್ನು ಆರಂಭಿಸಿದರು. 
 

ತನ್ನ ದುಡಿಮೆಯಿಂದ ಸಂಗ್ರಹ ಮಾಡಿದ್ದ 3 ಲಕ್ಷ ರೂ. ಬಂಡವಾಳವನ್ನು ಬಳಸಿಕೊಂಡು ಬೆಂಗಳೂರಿನ ಫೊನಿಕ್ಸ್‌ ಮಾಲ್‌ನಲ್ಲಿ ರೂಬನ್ಸ್ ಆಕ್ಸೆಸರೀಸ್‌ನ ಮೊದಲ ಶಾಪಿಂಗ್‌ ಮಳಿಗೆಯನ್ನು ಆರಂಭಿಸಿದರು. ಆದರೆ, 2019ರ ಜುಲೈ 4ರಂದು ಇವರ ರೂಬನ್ಸ್ ಆಕ್ಸೆಸರೀಸ್ ಕಚೇರಿ ಅಗ್ನಿ ಅವಘಡದಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗುತ್ತದೆ.

ಇಷ್ಟಾದರೂ ತನ್ನ ಛಲವನ್ನು ಬಿಡದ ಚಿನುಕಲಾ ತಮ್ಮ ಸಂಸ್ಥೆಯನ್ನು ಹಾಗೂ ಕಚೇರಿಯನ್ನು ಪುನಃಸ್ಥಾಪಿಸಿ ರೂಬನ್ಸ್ ಆಕ್ಸೆಸರೀಸ್ ಜ್ಯುವೆಲ್ಲರಿಗಳನ್ನು ಮಾರಾಟ ಮಾಡುವುದಲ್ಲಿ ಯಶಸ್ವಿಯಾದರು.

ಪ್ರಸ್ತುತ ಚಿನುಕಲಾ ಅವರ ರೂಬನ್ಸ್ ಆಕ್ಸೆಸರೀಸ್ ಜಾಗತಿಕ ಮಟ್ಟದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ ವಹಿವಾಟು ಹೊಂದಿದೆ. ಜೊತೆಗೆ, ಮಿಂತ್ರಾದಲ್ಲಿ ಅತಿಹೆಚ್ಚು ಮಾರಾಟವಾಗುವ ಬ್ರ್ಯಾಂಡ್‌ ಆಗಿದೆ. ಈ ಮೂಲಕ ರೂಬನ್ಸ್ ಆಕ್ಸೆಸರೀಸ್ ಇಂದು 200 ಕೋಟಿ ರೂ.ವರೆಗೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

click me!