ಭೂಮಿ ಅಗೆಯುವಾಗ ಚಿನ್ನ ಸಿಕ್ಕರೆ ಯಾರಿಗೆ ಸೇರುತ್ತದೆ? ಕಾನೂನಿನಲ್ಲಿದೆ ಸ್ಮಾಲ್ ಟ್ವಿಸ್ಟ್!
ಹಳೆ ಮನೆಯಲ್ಲಿ ನಿಧಿ ಸಿಕ್ಕಿದೆ, ಹೊಲದಲ್ಲಿ ಚಿನ್ನ ಸಿಕ್ಕಿದೆ ಎಂದೆಲ್ಲಾ ಕೇಳಿರುತ್ತೇವೆ. ಆದರೆ ಹೀಗೆ ಸಿಕ್ಕ ಚಿನ್ನದ ಮೇಲೆ ಯಾರಿಗೆ ಹಕ್ಕು ಇರುತ್ತದೆ? ಕಾನೂನು ಏನು ಹೇಳುತ್ತದೆ? ಈ ಬಗ್ಗೆ ತಿಳಿಯೋಣ ಬನ್ನಿ.
ಹಳೆ ಮನೆಯಲ್ಲಿ ನಿಧಿ ಸಿಕ್ಕಿದೆ, ಹೊಲದಲ್ಲಿ ಚಿನ್ನ ಸಿಕ್ಕಿದೆ ಎಂದೆಲ್ಲಾ ಕೇಳಿರುತ್ತೇವೆ. ಆದರೆ ಹೀಗೆ ಸಿಕ್ಕ ಚಿನ್ನದ ಮೇಲೆ ಯಾರಿಗೆ ಹಕ್ಕು ಇರುತ್ತದೆ? ಕಾನೂನು ಏನು ಹೇಳುತ್ತದೆ? ಈ ಬಗ್ಗೆ ತಿಳಿಯೋಣ ಬನ್ನಿ.
'ಅವರ ಮನೆಯಲ್ಲಿ ನಿಧಿ ಇದೆಯಂತೆ, ಹಳೆ ಮನೆ ಕೆಡವುವಾಗ ಚಿನ್ನ ಸಿಕ್ಕಿತಂತೆ, ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದರಂತೆ' ಎಂದೆಲ್ಲಾ ಕೇಳಿರುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಥೆಗಳು ಹೆಚ್ಚಾಗಿ ಕೇಳಿಬರುತ್ತವೆ. ಇದರಲ್ಲಿ ನಿಜ ಎಷ್ಟಿದೆಯೋ ಗೊತ್ತಿಲ್ಲ ಆದರೆ ಕೇಳಲು ಚೆನ್ನಾಗಿರುತ್ತದೆ.
ಭೂಮಿಯಲ್ಲಿ ನಿಧಿ ಅಥವಾ ಚಿನ್ನ ಸಿಕ್ಕರೆ ಅದು ಸಿಕ್ಕಿದ ವ್ಯಕ್ತಿಗೆ ಸೇರುವುದಿಲ್ಲ ಎಂದು ನಿಮಗೆ ಗೊತ್ತಾ? ಅದು ನಿಮ್ಮ ಮನೆಯಲ್ಲೇ ಸಿಕ್ಕರೂ ಆ ಚಿನ್ನದ ಮೇಲೆ ನಿಮಗೆ ಯಾವುದೇ ಹಕ್ಕು ಇರುವುದಿಲ್ಲ. ಭಾರತದಲ್ಲಿ ನಿಧಿಗಾಗಿ ಅಗೆಯುವುದು ಕಾನೂನು ಬಾಹಿರ. ಇದಕ್ಕೆ ಸಂಬಂಧಿಸಿದಂತೆ 1960ರಲ್ಲಿ ಒಂದು ಕಾನೂನು ಮಾಡಲಾಗಿದೆ. ಇದರ ಪ್ರಕಾರ ಭಾರತೀಯ ಪುರಾತತ್ವ ಇಲಾಖೆಗೆ ಅಗೆಯುವ ಹಕ್ಕು ಇರುತ್ತದೆ. ಭೂಮಿ ತೋಡುವಾಗ ಚಿನ್ನ ಸಿಕ್ಕರೆ, ಆ ಭೂಮಿಯ ಮಾಲೀಕರು ಯಾರೇ ಆಗಿರಲಿ ಅದು ಸರ್ಕಾರಕ್ಕೆ ಸೇರುತ್ತದೆ.
ಭೂಮಿ ಅಗೆಯುವಾಗ ನಿಧಿ ಅಥವಾ ಚಿನ್ನ ಸಿಕ್ಕರೆ, 1971ರಲ್ಲಿ ರೂಪಿಸಲಾದ ಟ್ರೆಷರ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾನೂನಿನ ಪ್ರಕಾರ ನಿಧಿ ಸಿಕ್ಕಿದ ವ್ಯಕ್ತಿ ಅದರ ಬಗ್ಗೆ ಪೊಲೀಸರಿಗೆ ಅಥವಾ ಅಧಿಕಾರಿಗಳಿಗೆ ತಿಳಿಸಬೇಕು. ನಂತರ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡು ಸರ್ಕಾರಿ ಖಜಾನೆಗೆ ಜಮೆ ಮಾಡುತ್ತಾರೆ. ಒಂದು ವೇಳೆ ಆ ವಸ್ತುವಿಗೆ ಪುರಾತತ್ವ ಮಹತ್ವವಿದ್ದರೆ, ಅದನ್ನು ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಲಾಗುತ್ತದೆ.
ಭೂಮಿಯಲ್ಲಿ ಸಿಕ್ಕ ಚಿನ್ನ ಅಥವಾ ಯಾವುದೇ ವಸ್ತು ತನ್ನದೇ ಎಂದು ಕೋರ್ಟ್‌ನಲ್ಲಿ ಸಾಬೀತುಪಡಿಸಿದರೆ ಆ ವ್ಯಕ್ತಿಗೆ ಚಿನ್ನ ಸಿಗುತ್ತದೆ. ಒಂದು ವೇಳೆ ಅಗೆಯುವಾಗ ಚಿನ್ನ ಸಿಕ್ಕ ವಿಷಯವನ್ನು ಸರ್ಕಾರಿ ಅಧಿಕಾರಿಗಳಿಗೆ ತಿಳಿಸದಿದ್ದರೆ, ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಬಂಧಿಸಬಹುದು. ನಿಮ್ಮ ಮೇಲೆ ಕೇಸ್ ಕೂಡ ದಾಖಲಾಗುತ್ತದೆ. ಇದರ ಪ್ರಕಾರ 6 ತಿಂಗಳ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆಗಳಿರುತ್ತವೆ.