ನವದೆಹಲಿ(ಏ. 30) ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ ರಿಯಲನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ. ಸಂಸ್ಥೆಯ ವಾರ್ಷಿಕ ಕ್ರೋಢೀಕೃತ ಒಟ್ಟು ಲಾಭಾಂಶದಲ್ಲಿ 6,348 ಕೋಟಿ ರೂ. ಇಳಿಕೆ ದಾಖಲಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲೇ 4,267 ಕೋಟಿ ರೂ. ಲಾಭ ಕುಸಿತ ಕಂಡಿದೆ. ಶೇಕಡವಾರು ಲೆಕ್ಕದಲ್ಲಿ ಹೇಳಬೇಕು ಎಂದರೆ ಶೇ. 39ರಷ್ಟು ಲಾಭಾಂಶ ಕುಸಿತವಾಗಿದೆ. ಕಳೆದ ವರ್ಷ ಇದೇ ವೇಳೆ 39,588 ಕೋಟಿ ಇದ್ದ ಲಾಭಾಂಶ, ಈ ವರ್ಷ 39,354 ಕೋಟಿ ರೂ.ಗೆ ಕುಸಿತ ಕಂಡಿದೆ. ಸಂಸ್ಥೆಯ ಕ್ರೋಢೀಕೃತ ಆದಾಯ ಕೂಡಾ ಶೇ. 2.50ರಷ್ಟು ಕುಸಿತ ಕಂಡಿದ್ದು, 1.51 ಲಕ್ಷ ಕೋಟಿಗೆ ಬಂದು ನಿಂತಿದೆ. ಕೊರೋನಾ ಸಂಕಷ್ಟದಿಂದ ಸಂಸ್ಥೆ ತನ್ನ ಉದ್ಯೋಗಿಗಳ ವೇತನಕ್ಕೂ ಕತ್ತರಿ ಹಾಕಿತ್ತು. ಕೊರೋನಾ ಅಬ್ಬರದ ನಡುವೆಯೂ ಸಂಸ್ಥೆ ಉತ್ತಮ ಸಾಧನೆ ಮಾಡಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಚ್ಚಾತೈಲದಿಂದ ರಾಸಾಯನಿಕ ತಯಾರಿಕೆ ಉದ್ಯಮವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದಿದ್ಧಾರೆ ರಿಲಯನ್ಸ್ ಜಿಯೋ ಮಾತ್ರ ಸಿಕ್ಕಾಪಟ್ಟೆ ಲಾಭ ಮಾಡಿದೆ. ಕಳೆದ ವರ್ಷ 840 ಕೋಟಿ ಇದ್ದ ಜಿಯೋ ಲಾಭ ಈ ವರ್ಷ 2331ಕೋಟಿಗೆ ಏರಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ 4,245 ಕೋಟಿ ನಷ್ಟ ಅನುಭಸಿದೆ. ಲಾಕ್ ಡೌನ್ ರಿಲಯನ್ಸ್ ಷೇರುಗಳ ಮೇಲೂ ಪರಿಣಾಂ ಬೀರಿತ್ತು. ಫೇಸ್ ಬುಕ್ ಮತ್ತು ರಿಲಯನ್ಸ್ ಇತ್ತೀಚೆಗೆ ಮಾಡಿಕೊಂಡಿದ್ದ ಒಪ್ಪಂದ ದೊಡ್ಡ ಸುದ್ದಿಯಾಗಿತ್ತು. coronavirus covid 19 affect Reliance Q4 results Profit plunges 39 percent. Reliance Jio Infocomm Ltd (Jio), the telecom arm of Reliance Industries posted a net profit of ₹2331 crore in the March quarter, up 72% sequentially, surpassing street estimates. On a year on year basis it grew 177.5%. Its operating revenue increased 6.2% sequentially to ₹14835 crore. On a year on year basis it is up 26.6%. ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು! ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ ರಿಯಲನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ.