GPay, Paytm ಮತ್ತು ಇತರ UPI ಅಪ್ಲಿಕೇಶನ್‌ ಬಳಸಿಕೊಂಡು ಕ್ರೆಡಿಟ್ ಕಾರ್ಡ್‌ ಮೂಲಕ ಪೇಮೆಂಟ್‌ ಮಾಡಲು ಹೀಗೆ ಮಾಡಿ..

First Published | Jul 15, 2023, 4:27 PM IST

ಪ್ರಸ್ತುತ, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯುಪಿಐ ಬಳಸಿಕೊಂಡು ಪೇಮೆಂಟ್‌ ಮಾಡಲು ರುಪೇ ಕಾರ್ಡ್‌ ಮಾತ್ರ ಅವಕಾಶ ನೀಡುತ್ತದೆ. ಅಲ್ಲದೆ, ಎಲ್ಲಾ ಬ್ಯಾಂಕ್‌ಗಳು ಪ್ರಸ್ತುತ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿಲ್ಲ. ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಎಲ್ಲಾ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.

ದೇಶದಲ್ಲಿ  ಈ ದಿನಗಳಲ್ಲಿ ನಗದು ವಹಿವಾಟಿಗಿಂತ ಯುಪಿಐ ಮೂಲಕ ಪಾವತಿ ಮತ್ತು ವಹಿವಾಟು ಮಾಡುವುದು  ಅತ್ಯಂತ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಸಣ್ಣ ಮಾರಾಟಗಾರರಿಂದ ಹಿಡಿದು ದೊಡ್ಡ ಶೋರೂಮ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸಹ ಈ ಪಾವತಿ ವಿಧಾನವನ್ನು ಸ್ವೀಕರಿಸುತ್ತವೆ.

ಅಂದರೆ, ಯುಪಿಐ ಮೂಲಕ ಬಳಕೆದಾರರು ತಮ್ಮ ಉಳಿತಾಯ ಖಾತೆಗಳಿಂದ ನೇರವಾಗಿ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಆದರೆ, ಗೂಗಲ್‌ ಪೇ, ಪೇಟಿಎಂ, ಇತ್ಯಾದಿ ಯುಪಿಐ ಅಪ್ಲಿಕೇಶನ್‌ಗಳು ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಸೇರಿಸಲು ಮತ್ತು ಯುಪಿಐ ಪಾವತಿಗಳನ್ನು ಮಾಡಲು ಅದನ್ನು ಬಳಸಲು ಅವಕಾಶ ಮಾಡಿಕೊಡುತ್ತವೆ.

ಬೆಂಬಲಿತ ಕ್ರೆಡಿಟ್ ಕಾರ್ಡ್‌ಗಳು ಮತ್ತು ಬ್ಯಾಂಕ್‌ಗಳು
ಪ್ರಸ್ತುತ, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಯುಪಿಐ ಬಳಸಿಕೊಂಡು ಪೇಮೆಂಟ್‌ ಮಾಡಲು ರುಪೇ ಕಾರ್ಡ್‌ ಮಾತ್ರ ಅವಕಾಶ ನೀಡುತ್ತದೆ. ಅಲ್ಲದೆ, ಎಲ್ಲಾ ಬ್ಯಾಂಕ್‌ಗಳು ಪ್ರಸ್ತುತ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿಲ್ಲ. ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಎಲ್ಲಾ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.

ಬೆಂಬಲಿತ ಬ್ಯಾಂಕುಗಳು
- ಆಕ್ಸಿಸ್ ಬ್ಯಾಂಕ್
- ಬ್ಯಾಂಕ್ ಆಫ್ ಬರೋಡಾ
- ಕೆನರಾ ಬ್ಯಾಂಕ್
- ಎಚ್‌ಡಿಎಫ್‌ಸಿ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಕೋಟಕ್ ಮಹೀಂದ್ರ
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಯೂನಿಯನ್ ಬ್ಯಾಂಕ್
- ಎಸ್‌ಬಿಐ (ಶೀಘ್ರದಲ್ಲೇ ಬರಲಿದೆ)

Tap to resize

ಇನ್ನು, ಈ ಕೆಳಗಿನ ಯುಪಿಐ ಅಪ್ಲಿಕೇಶನ್‌ಗಳಲ್ಲಿ ನಿಮ್ಮ RuPay ಕ್ರೆಡಿಟ್ ಕಾರ್ಡ್‌ಗಳನ್ನು  ಬಳಸಿಕೊಂಡು  ಪಾವತಿಗಳನ್ನು ಮಾಡುವುದು ಹೇಗೆ ಎಂದು ನಾವು ನಿಮಗೆ ತಿಳಿಸುತ್ತೇವೆ.

ನಿಮಗೆ ಬೇಕಾಗಿರುವುದು
- GPay, Paytm, ಇತ್ಯಾದಿ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯ UPI ಖಾತೆ
- ಸಕ್ರಿಯ RuPay ಕ್ರೆಡಿಟ್ ಕಾರ್ಡ್
 - ಕಾರ್ಡ್‌ನೊಂದಿಗೆ ನೋಂದಾಯಿಸಲಾದ ಸಕ್ರಿಯ ಮೊಬೈಲ್ ಸಂಖ್ಯೆ
- ಇಂಟರ್ನೆಟ್ ಆಕ್ಸೆಸ್‌
 

UPI ನಲ್ಲಿ RuPay ಕ್ರೆಡಿಟ್ ಕಾರ್ಡ್‌ನೊಂದಿಗೆ ಪ್ರಾರಂಭಿಸುವುದು ಹೇಗೆ
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಆಯ್ಕೆಯ UPI ಅಪ್ಲಿಕೇಶನ್ ತೆರೆಯಿರಿ
- ಈಗ, ವಿಭಿನ್ನ UPI ಅಪ್ಲಿಕೇಶನ್‌ಗಳಲ್ಲಿ ಈ ಹಂತಗಳನ್ನು ಅನುಸರಿಸಿ

GPay: ಓಪನ್‌ ಮಾಡಿ → ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ → RuPay ಕ್ರೆಡಿಟ್ ಕಾರ್ಡ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ → ಬ್ಯಾಂಕ್ ಆಯ್ಕೆಮಾಡಿ → ಕಾರ್ಡ್ ಹುಡುಕಿ ಮತ್ತು ಪರಿಶೀಲಿಸಿ

Paytm: ಓಪನ್ ಮಾಡಿ → UPI ಮತ್ತು ಪಾವತಿ ಸೆಟ್ಟಿಂಗ್‌ಗಳು → ಕೆಳಗೆ ಸ್ಕ್ರಾಲ್ ಮಾಡಿ → Paytm UPI ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ → ಬ್ಯಾಂಕ್ ಆಯ್ಕೆಮಾಡಿ → ಕಾರ್ಡ್ ಹುಡುಕಿ ಮತ್ತು ಪರಿಶೀಲಿಸಿ

PhonePe: ಓಪನ್ ಮಾಡಿ → ಪ್ರೊಫೈಲ್ ಐಕಾನ್ → UPI ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ → ಬ್ಯಾಂಕ್ ಆಯ್ಕೆಮಾಡಿ → ಕಾರ್ಡ್ ಹುಡುಕಿ ಮತ್ತು ಪರಿಶೀಲಿಸಿ

Bhim: ಓಪನ್ ಮಾಡಿ → ಮೇಲ್ಭಾಗದಲ್ಲಿ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ → ಕೆಳಗಿನ ಬಲಭಾಗದಲ್ಲಿರುವ ‘+’ ಐಕಾನ್ ಟ್ಯಾಪ್ ಮಾಡಿ → ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಆಯ್ಕೆಮಾಡಿ → ಬ್ಯಾಂಕ್ ಆಯ್ಕೆಮಾಡಿ → ಕಾರ್ಡ್ ಹುಡುಕಿ ಮತ್ತು ಪರಿಶೀಲಿಸಿ

UPI ಬಳಸಿಕೊಂಡು RuPay ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಗಳನ್ನು ಮಾಡುವುದು ಹೇಗೆ
ನೀವು ಬಳಸುತ್ತಿರುವ UPI ಅಪ್ಲಿಕೇಶನ್ ಯಾವುದಾದರೂ ಸರಿಯೇ, ನೀವು ಮಾಡಬೇಕಾಗಿರುವುದು ನಿಮ್ಮ ಕಾರ್ಡ್ ಅನ್ನು ಮೊದಲು ನೋಂದಾಯಿಸಿ ಮತ್ತು ನಂತರ ಸಾಮಾನ್ಯ UPI ಪಾವತಿಗಳಿಗೆ (ಬ್ಯಾಂಕ್ ಖಾತೆಗಳ ಮೂಲಕ) ನೀವು ಅನುಸರಿಸುವ ಸಾಮಾನ್ಯ ಹಂತಗಳನ್ನು ಅನುಸರಿಸಿ. 
 

UPI

ಹಂತಗಳು ಇಲ್ಲಿವೆ:

- QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಫೋನ್ ಸಂಖ್ಯೆ ಅಥವಾ UPI ಸಂಖ್ಯೆಯನ್ನು ನಮೂದಿಸಿ
- ನೀವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ
- ಪಾವತಿ ಆಯ್ಕೆಗಳಿಂದ RuPay ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆಮಾಡಿ
- ಪಾವತಿ ಮಾಡಲು ಪಿನ್ ಎಂಟರ್‌ ಮಾಡಿ.. 

Latest Videos

click me!