Home Loan Transfer: ಮನೆ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸುವುದು ಹೇಗೆ? ಲಾಭಗಳೇನು?

Published : Jun 11, 2025, 09:50 AM ISTUpdated : Jun 11, 2025, 11:51 AM IST

ಮನೆ ಸಾಲವನ್ನು ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್‌ಗೆ ವರ್ಗಾವಣೆ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಬ್ಯಾಂಕುಗಳ ಬಡ್ಡಿ ದರಗಳನ್ನು ಹೋಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಸೂಕ್ತ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಬೇಕು. ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಸಾಲ ಬೇಗ ಮಂಜೂರಾಗುತ್ತೆ.

PREV
19
ಮನೆ ಸಾಲ ಬೇರೆ ಬ್ಯಾಂಕಿಗೆ ವರ್ಗಾಯಿಸುವ ವಿಧಾನಗಳು

ಮನೆ ಸಾಲ ವರ್ಗಾವಣೆ ಅಂದ್ರೆ ಇರೋ ಬ್ಯಾಂಕಿನ ಸಾಲನ ಕಡಿಮೆ ಬಡ್ಡಿ ಇರುವ ಬೇರೆ ಬ್ಯಾಂಕಿಗೆ ವರ್ಗಾಯಿಸೋದು. ಆರ್‌ಬಿಐ ರೆಪೊ ದರ ಕಡಿಮೆ ಮಾಡಿದಾಗ ಬ್ಯಾಂಕುಗಳು ಬಡ್ಡಿ ಕಡಿಮೆ ಮಾಡ್ತವೆ. ಆಗ ಇದು ಉಪಯುಕ್ತ. ನಿಮ್ಮ ಬ್ಯಾಂಕ್ ಸಾಲಕ್ಕೆ ಜಾಸ್ತಿ ಬಡ್ಡಿ ಹಾಕುತ್ತಿದೆ ಎಂದಾದ್ರೆ ನೀವು ನಿಮ್ಮ ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸೋದರ ಬಗ್ಗೆ ತಿಳಿದು ಈ ಬಗ್ಗೆ ಚಿಂತನೆ ನಡೆಸಬಹುದು.

29
ಮನೆ ಸಾಲ ವರ್ಗಾವಣೆ ಯಾಕೆ?

ಇರೋ ಬ್ಯಾಂಕಿನಲ್ಲಿ ಬಡ್ಡಿ ಜಾಸ್ತಿ ಇದ್ರೆ ಅಥವಾ ಬೇರೆ ಬ್ಯಾಂಕಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಕ್ಕಿದ್ರೆ ಮನೆ ಸಾಲನ ಬೇರೆ ಬ್ಯಾಂಕಿಗೆ ವರ್ಗಾಯಿಸಬಹುದು. ಹೀಗೆ ಮಾಡಿದ್ರೆ ಇಎಂಐ ಕಡಿಮೆ ಆಗುತ್ತೆ.

39
ಬ್ಯಾಂಕಿನಿಂದ ಬೇರೆ ಬ್ಯಾಂಕಿಗೆ ವರ್ಗಾಯಿಸಲು ಹೀಗೆ ಮಾಡಿ

ಬೇರೆ ಬೇರೆ ಬ್ಯಾಂಕುಗಳ ವೆಬ್‌ಸೈಟ್ ಅಥವಾ ಲೋನ್ ಅಗ್ರಿಗೇಟರ್ ಪೋರ್ಟಲ್‌ಗಳಲ್ಲಿ ಇರೋ ಮನೆ ಸಾಲದ ಬಡ್ಡಿ ದರಗಳನ್ನ ಹೋಲಿಸಿ ನೋಡಿ. ಕಡಿಮೆ ಬಡ್ಡಿ ಇರೋ ಬ್ಯಾಂಕನ್ನು ಆರಿಸಿ ಅರ್ಜಿ ಹಾಕಿ. ಎಲ್ಲಾ ಬ್ಯಾಂಕುಗಳಲ್ಲೂ ಆನ್‌ಲೈನ್‌ನಲ್ಲಿ ಈ ಸೌಲಭ್ಯ ಇದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಮನೆ ಸಾಲ ವರ್ಗಾವಣೆ ಅರ್ಜಿಗಳನ್ನ ಬೇಗನೆ ಪರಿಶೀಲಿಸ್ತವೆ.

49
ಪ್ರೊಸೆಸಿಂಗ್ ಶುಲ್ಕ

ಮನೆ ಸಾಲ ವರ್ಗಾವಣೆಗೆ ಕೆಲವು ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕ ವಿಧಿಸ್ತವೆ. ಆದ್ರೆ ಮಾತುಕತೆ ಮೂಲಕ ಕಡಿಮೆ ಮಾಡ್ಕೊಬಹುದು, ಕೆಲವು ಬ್ಯಾಂಕುಗಳು ಸ್ಪೆಷಲ್ ಆಫರ್‌ನಲ್ಲಿ ಶುಲ್ಕ ಮನ್ನಾ ಮಾಡ್ತವೆ. ಎರಡು ಮೂರು ಬ್ಯಾಂಕುಗಳಲ್ಲಿ ವಿಚಾರಿಸಿ ಸೂಕ್ತ ಬ್ಯಾಂಕನ್ನ ಆರಿಸಿಕೊಳ್ಳಿ. ಸರ್ಕಾರಿ ಬ್ಯಾಂಕುಗಳಲ್ಲಿ ಶುಲ್ಕ ಕಡಿಮೆ ಇರುತ್ತೆ ಅನ್ನೋದು ನೆನಪಿನಲ್ಲಿರಲಿ.

59
ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೋಟೋ, ವಿಳಾಸದ ಪ್ರಮಾಣ ಪತ್ರ ಕಡ್ಡಾಯ. ಸಂಬಳದ ಸ್ಲಿಪ್, ಬ್ಯಾಂಕ್ ಸ್ಟೇಟ್‌ಮೆಂಟ್, ಫಾರ್ಮ್ 16, ಆಸ್ತಿ ದಾಖಲೆಗಳನ್ನೂ ನೀವು ಇದಕ್ಕಾಗಿ ಬ್ಯಾಂಕ್‌ಗೆ ಕೊಡಬೇಕಾಗುತ್ತದೆ.

69
ಸಾಲ ಇರೋ ಬ್ಯಾಂಕಿನಿಂದ ಪಡೆಯ ಬೇಕಾದ ದಾಖಲೆಗಳು

ಸಾಲ ಮಂಜೂರಾತಿ ಪತ್ರ

ಸಾಲ ಖಾತೆ ವಿವರಗಳು

ಆಸ್ತಿ ದಾಖಲೆ ಪಟ್ಟಿ

ಸಾಲ ಮುಕ್ತಾಯ ಪತ್ರ

79
ಮುಂಚಿತವಾಗಿ ಕೋರಿಕೆ ಸಲ್ಲಿಸಿ

ನಿಮ್ಮ ಬ್ಯಾಂಕ್ ಮನೆ ಸಾಲನ ಬೇರೆ ಸಾಲಕ್ಕೆ 'ಷರತ್ತು' ಆಧಾರದ ಮೇಲೆ ಸೇರಿಸಿದ್ರೆ, ಮುಂಚಿತವಾಗಿ ಪೂರ್ತಿ ಹಣ ಕಟ್ಟಿದ್ರೂ ಸಾಲ ಮುಕ್ತಾಯವಾಗಿರುವುದಿಲ್ಲ. ಹಾಗಾಗಿ ನೀವು ಸಾಲದ ಮುಕ್ತಾಯಕ್ಕೆ ಅರ್ಜಿ ಹಾಕಬೇಕು.

89
ಚೆಕ್‌ಬುಕ್ ತಗೊಂಡು ಹೋಗಿ

ಬ್ಯಾಂಕಿನಲ್ಲಿ ಕಟ್ಟಬೇಕಾದ ಹಣ ಏನಾದ್ರೂ ಬಾಕಿ ಇದ್ರೆ, ಮಾಹಿತಿ ಪಡೆದು ಹಣ ಕಟ್ಟೋಕೆ ರೆಡಿ ಇರಿ. ಸಾಲ ಮುಗಿಸ್ಲಿಕ್ಕೆ ಹೋಗುವಾಗ ಚೆಕ್‌ಬುಕ್ ತಗೊಂಡು ಹೋದ್ರೆ ಒಳ್ಳೇದು. ಮತ್ತೆ ಮತ್ತೆ ಬ್ಯಾಂಕಿಗೆ ಹೋಗೋ ಅಗತ್ಯ ಇರಲ್ಲ.

99
ಸಿಬಿಲ್ ಸ್ಕೋರ್ ಸಹಾಯ ಮಾಡುತ್ತೆ

ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಬ್ಯಾಂಕುಗಳು ಬೇಗ ಸಾಲನ ಪರಿಶೀಲಿಸಿ ಮಂಜೂರು ಮಾಡ್ತವೆ. ಮನೆ ಸಾಲ ವರ್ಗಾವಣೆ ಬಡ್ಡಿ ಕಡಿಮೆ ಮಾಡೋ ಒಳ್ಳೆ ದಾರಿ ಇದು. ಆದ್ರೆ, ಎಲ್ಲಾ ಖರ್ಚು, ದಾಖಲೆಗಳ ಬಗ್ಗೆ ತಿಳ್ಕೊಂಡು ಮುಂದುವರಿಯೋದು ಮುಖ್ಯ. ಒಳ್ಳೆ ಬ್ಯಾಂಕ್, ಕಡಿಮೆ ಬಡ್ಡಿ, ಆಫರ್ ಇರೋ ಕಡೆಗೆ ಸಾಲ ವರ್ಗಾವಣೆ ಮಾಡಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories