ಆ್ಯಕ್ಟೀವ್ ಇಲ್ಲದ ಹಳೇ ಖಾತೆಯಲ್ಲಿ ಹಣ ಇದೆಯಾ, RBI ನೆರವಿನಿಂದ ಮರಳಿ ಪಡೆಯುವುದು ಹೇಗೆ? 10 ವರ್ಷದಿಂದ ಬ್ಯಾಂಕ್ ಖಾತೆ ಬಳಸುತ್ತಿಲ್ಲ. ಆದರೆ ಖಾತೆಯಲ್ಲಿರುವ ಹಣ ಏನಾಯ್ತು? ಈ ಹಣ ಮರಳಿ ಪಡೆಯುವುದು ಹೇಗೆ?
ನಿಷ್ಕ್ರೀಯಗೊಂಡಿರುವ ಹಳೇ ಖಾತೆಯಲ್ಲಿನ ಹಣ ಮರಳಿ ಪಡೆಯಲು ಸಾಧ್ಯವೆ?
ಬ್ಯಾಂಕ್ ಖಾತೆಯಲ್ಲಿ ಒಂದಿಷ್ಟು ಹಣ ಮರೆತು ಬಿಟ್ಟಿದ್ದೀರಾ? ಖಾತೆ ನಿಷ್ಕ್ರೀಯಗೊಂಡು 10 ವರ್ಷ ಆಗಿದೆ ಎಂದು ಅಂತಾ ಚಿಂತಿಸಬೇಕಿಲ್ಲ. ಅಥವಾ ಮೃತ ವ್ಯಕ್ತಿಗಳ ಖಾತೆ ಡಿಆ್ಯಕ್ಟಿವೇಟ್ ಆಗಿ ದಶಕಗಳೇ ಕಳೆದಿದೆ. ಖಾತೆಯಲ್ಲಿ ಹಣ ಇದೆ,ಈ ಹಣ ತೆಗೆಯಲು ಸಾಧ್ಯವೇ ಇಲ್ಲ ಎಂದು ಯೋಚಿಸಬೇಕಿಲ್ಲ. ಆರ್‌ಬಿಐ ನೆರವಿನಿಂದ ನಿಷ್ಕ್ರೀಯಗೊಂಡಿರುವ, ಸುದೀರ್ಘ ದಿನಗಳಿಂದ ಖಾತೆ ಬಳಸದೇ ಡಿಆಕ್ಯಿವೇಟ್ ಆಗಿರುವ, ಅಥವಾ ಬ್ಯಾಂಕ್ ಖಾತೆಗಳ ವಿವವರೂ ಸರಿಯಾಗಿ ನೆನಪಪಿಲ್ಲದಿದ್ದರೂ ಖಾತೆಯಲ್ಲಿರುವ ಹಣ ಮರಳಿ ಪಡೆಯಲು ಸಾಧ್ಯವಿದೆ.
25
10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಹಳೇ ಖಾತೆಯಿಂದಲೂ ಹಣ ಪಡೆಯಲು ಸಾಧ್ಯ
2 ವರ್ಷ ಖಾತೆಯಲ್ಲಿ ಯಾವುದೇ ಟ್ರಾನ್ಸಾಕ್ಷನ್ ಇಲ್ಲದಿದ್ದರೆ ಖಾತೆ ನಿಷ್ಕ್ರೀಯಗೊಳ್ಳಲಿದೆ. ಇತ್ತ 2 ರಿಂದ 10 ವರ್ಷವಾಗಿದ್ದರೆ, ಅಥವಾ 10 ವರ್ಷಕ್ಕಿಂತ ಮೇಲಟ್ಟಿದ್ದರೆ ಖಾತೆ ಆ್ಯಕ್ಟಿವೇಟ್ ಮಾಡಲು ಅಸಾಧ್ಯವಾಗುತ್ತದೆ. ಆದರೆ ಖಾತೆಯಲ್ಲಿ ಹಣವಿದ್ದರೆ ಈ ಹಣ ಮರಳಿ ಪಡೆಯಬಹುದು.
35
ನಿಮ್ಮ ಹಣವನ್ನು ಮರಳಿಪಡೆಯುವುದು ಹೇಗೆ?
1. ನಿಮ್ಮ ಬ್ಯಾಂಕ್ ನ ಯಾವುದೇ ಶಾಖೆಗೆ ಭೇಟಿ ಕೊಡಿ(ಅದು ನಿಮ್ಮ ಬ್ಯಾಂಕ್ ಖಾತೆ ಹೊಂದಿದ ಶಾಖೆ ಆಗಿರಬೇಕು ಎಂದಿಲ್ಲ)
2. ಕೆವೈಸಿ ದಾಖಲೆಗಳೊಂದಿಗೆ ಒಂದು ಫಾರಂ ಸಲ್ಲಿಸಿ (ಆಧಾರ್, ಪಾಸ್‌ಪೋರ್ಟ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್)
3. ಪರಿಶೀಲನೆಯ ನಂತರ ನಿಮ್ಮ ಹಣವನ್ನು ಬಡ್ಡಿಯೊಂದಿಗೆ ಪಡೆಯಿರಿ ( ಬಡ್ಡಿ ಅನ್ವವಾದರೆ ಸಿಗಲಿದೆ. ಬಡ್ಡಿದರಗಳು ವ್ಯತ್ಯಾಸವಾಗುತ್ತದೆ)
ಆರ್‌ಬಿಐ ರೀತಿ ಹಳೇ ಖಾತೆಗಳಲ್ಲಿ ಹಣ ಅದರ ಮಾಹಿತಿ ನೀಡಲು ವಿಶೇಷ ಪೋರ್ಟಲ್ ಸಹಾಯ ನೀಡುತ್ತದೆ. ಆರ್‌ಬಿಐನ ಅಧೀಕೃತ UDGAM portal (https://udgam.rbi.org.in) ಮೂಲಕ ಪರಿಶೀಲಿಸಬಹುದು. ಖಾತೆ, ಹಣದ ವಿಚಾರಗಳನ್ನು ಫಾರ್ವಡ್ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ, ಆರ್‌ಬಿಐ ಅಧಿಕೃತ ಪೋರ್ಟಲ್‌ಗೆ ಬೇಟಿ ನೀಡಿ.
ನಿಮ್ಮ ಹಳೇ ಖಾತೆಯಲ್ಲಿ ಹಣ ಇದೆಯಾ ಪರಿಶೀಲಿಸುವುದು ಹೇಗೆ?
55
ನಿಷ್ಕ್ರೀಯ ಖಾತೆಯ ಹಣ ಏನಾಗುತ್ತದೆ?
ನಿಮ್ಮ ಬ್ಯಾಂಕಿನ ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ಅಂದರೆ 2 ವರ್ಷದಿಂದ 10 ವರ್ಷದ ವರೆಗಿನ ಯಾವುದೇ ಚಲನೆ ಇಲ್ಲದ ಹಣ ಅಥವಾ ಕ್ಲೈಂ ಮಾಡದ ಡೆಪಾಸಿಟ್ ಹಣ (10 ವರ್ಷಕ್ಕಿಂತ ಮೇಲ್ಪಟ್ಟ) ಹಣಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪಾಸಿಟರ್ ಎಜುಕೇಶನ್ ಆ್ಯಂಡ್ ಅವಾರ್ನೆಸ್ ಫಂಜ್ (DEA) ವರ್ಗಾಯಿಸಲಾಗುತ್ತದೆ. ಈ ನಿಮ್ಮ ಹಣವನ್ನು ನೀವು ಅಥವಾ ಸೂಕ್ತ ವಾರಸುದಾರರು ಯಾವಾಗ ಬೇಕಾದರೂ ಮರಳಿ ಪಡೆಯಬಹುದು.