ವಿವಾಹಪೂರ್ವ ಸಮಾರಂಭದಲ್ಲಿ (Pre Wedding Celebration) ಕ್ರಿಶಾ ಷಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮೆಹಂದಿ, ಹಳದಿ ಸಮಾರಂಭದಲ್ಲಿ ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆದ ಕ್ರಿಶಾ ಮದುವೆಯಲ್ಲೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಮದುವೆಯ ಮುಂಚಿನ ಕಾರ್ಯಕ್ರಮಗಳಿಂದ ಮದುವೆಯವರೆಗೂ ಎಲ್ಲಾ ಸಮಾರಂಭಗಳಲ್ಲಿ ಕ್ರಿಶಾ ಷಾ ಅವರ ಸ್ನೇಹಿತರು ಸಹ ಹಾಜರಿದ್ದರು. ಕ್ರಿಶಾ ತನ್ನ ಸ್ನೇಹಿತರೊಂದಿಗೆ ತಮ್ಮ ಮದುವೆಯ ಸೆಲೆಬ್ರೆಷನ್‌ಗಳನ್ನು ತುಂಬಾ ಎಂಜಾಯ್ ಮಾಡಿದ್ದರು.
ಕ್ರಿಶಾ ಶಾ ಕೂಡ ಉದ್ಯಮಿ. ಅವರು ಡಿಸ್ಕೋ ಎಂಬ ಹೆಸರಿನ ಇದು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯನ್ನು (Digiral Marketing Company) ನಡೆಸುತ್ತಿದ್ದಾರೆ. ಜೈ ಅನ್ಮೋಲ್ (Jai Anmol) ಕೂಡ ಕೆಲವು ಸಂದರ್ಭಗಳಲ್ಲಿ ಅವರ ಕಂಪನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಶಾ ಶಾ ಯಂಗ್ ಹಾಗೂ ಎನರ್ಜಿಟಿಕ್ ಉದ್ಯಮಿ. ಅವರ ಟೀಮ್‌ನಲ್ಲಿ ಕೆಲಸ ಮಾಡುವವರು ಸಹ ಯಂಗ್ ಆಗಿದ್ದಾರೆ. ಅವಳು ತನ್ನ ವರ್ಕ್ ಫ್ರಂಟ್‌ನಲ್ಲಿ ಸಹ ಸ್ಟೈಲ್ ಮತ್ತು ಫ್ಯಾಷನ್‌ಗೆ (Fashion) ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಕ್ರಿಶಾ ಷಾ ಉದ್ಯಮಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತೆಯೂ ಹೌದು. ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಅದದಲ್ಲಿಯೂ ವಿಸೇಷವಾಗಿ ಕೋವಿಡ್ (Covid) ಸಮಯದಲ್ಲಿ ಜನರ ಹೃದಯ ಮತ್ತು ಮನಸ್ಸಿನ ಮೇಲೆ ಎಷ್ಟು ನಕಾರಾತ್ಮಕ ಪರಿಣಾಮ ಕಂಡುಬಂದಿದೆ ಎಂಬುದರ ಕುರಿತು ಅವರು ಕೆಲಸ ಮಾಡುತ್ತಿದ್ದಾರೆ.
ಅನಿಲ್ ಅಂಬಾನಿ, ಟೀನಾ ಮತ್ತು ಜೈ ಅನ್ಮೋಲ್ ಅವರ ಜೊತೆ ಕ್ರಿಶಾ ಷಾ ಅವರ ಫೋಟೋ ಮೊದಲು ಕಾಣಿಸಿಕೊಂಡಾಗಿನಿಂದ, ಅವರ ಬಗ್ಗೆ ಇಂಟರ್ನೆಟ್ (Internet) ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸರ್ಚ್ ಮಾಡಿದ್ದಾರೆ. ಕ್ರಿಶಾ ಮತ್ತು ಅನ್ಮೋಲ್ ಅವರ ಫೋಟೋಗಳು ವೈರಲ್ ಆಗಿವೆ
ಕ್ರಿಶಾ ಶಾ ಕೂಡ ತಮ್ಮ ಬಿಡುವಿನ ವೇಳೆಯನ್ನು ತನ್ನ ಫ್ರೆಂಡ್ಸ್ ಜೊತೆ ಕಳೆಯಲು ಇಷ್ಟ ಪಡುತ್ತಾರೆ. ಅವರ ಹೆಚ್ಚಿನ ಸ್ನೇಹಿತರು ಅವರ ಟೀಮ್ ಮೆಂಬರ್ ಆಗಿದ್ದಾರೆ. ಲಂಡನ್‌ನಲ್ಲಿರುವ ಯುಕೆ ಮೂಲದ ಐಟಿ ಕಂಪನಿ ಆಕ್ಸೆಂಚರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು.
ಕ್ರಿಶಾ ಶಾ ಮತ್ತು ಅನ್ಮೋಲ್ ಇಬ್ಬರೂ ತಮ್ಮ ಜೀವನವನ್ನು ತುಂಬಾ ವೈಯಕ್ತಿಕವಾಗಿರಿಸಿಕೊಳ್ಳುತ್ತಾರೆ. ಮಾಧ್ಯಮದಿಂದ ದೂರವಿದ್ದ ಕ್ರಿಶಾ ಮತ್ತು ಅನ್ಮೋಲ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಇಬ್ಬರೂ ಪರಸ್ಪರ ಡೇಟ್ ಮಾಡಿದ್ದಾರೆ.