ಬಾಲಿವುಡ್ ನಟ ಸಂಜಯ್ ದತ್ 2023ರಲ್ಲಿ ಅಲ್ಕೋಹಾಲ್ ಉದ್ಯಮಕ್ಕೆ ಕಾಲಿಟ್ಟರು. ಸಂಜಯ್ ದತ್ ಒಡೆತನದ ಸ್ಕಾಚ್ ವಿಸ್ಕಿ ಗ್ಲೇನ್‌ವಾಕ್ ಸದ್ಯ ಭಾರತದಲ್ಲಿ ಮಾರಾಟವಾಗುತ್ತಿದೆ. ಭಾರತದಲ್ಲಿ ಒಂದು ಬಾಟಲ್ ಗ್ಲೇನ್‌ವಾಕ್ ಬೆಲೆ ಎಷ್ಟಿದೆ? (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಸಿನಿಮಾ ಲೋಕದಲ್ಲಿ ಸಂಜಯ ದತ್ ಅವರನ್ನು ಬಾಬಾ ಎಂದು ಕರೆಯಲಾಗುತ್ತದೆ. ಕೇವಲ ಸಿನಿಮಾ ಅಲ್ಲದೇ ವಿವಿಧ ವಲಯಗಳಿಂದಲೂ ಅಪಾರ ಪ್ರಮಾಣದ ಹಣವನ್ನು ಗಳಿಸುತ್ತಾರೆ. ಸಂಜಯ್ ದತ್ ತಮ್ಮದೇ ಸ್ವಂತ ವಿಸ್ಕಿ ಬ್ರಾಂಡ್ ಸಹ ಹೊಂದಿದ್ದಾರೆ. ವಿಸ್ಕಿ ಮಾರಾಟದಿಂದಲೂ ಸಂಜಯ್ ದತ್‌ಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಸಂಜಯ್ ದತ್ ಒಡೆತನದ ವಿಸ್ಕಿ ಹೆಸರು ಗ್ಲೇನ್‌ವಾಕ್. ಈ ಉತ್ಪನ್ನಕ್ಕೆ ಸಂಜಯ್ ದತ್ ಅವರೇ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡುತ್ತಾರೆ. ಈ ವಿಸ್ಕಿ ಜೊತೆಗಿನ ಸಂಜಯ್ ದತ್ ಫೋಟೋಗಳು ಸಹ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಭಾರತದಲ್ಲಿ ಗ್ಲೆನ್‌ವಾಕ್ ಮದ್ಯಕ್ಕೆ ಉತ್ತಮ ಮಾರುಕಟ್ಟೆಯಿದೆ. ಗ್ಲೆನ್‌ವಾಕ್ ಬ್ರಾಂಡ್‌ಗೆ ಅದರದ್ದೇ ಆದ ಗ್ರಾಹಕ ವರ್ಗವಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೊಂದಿರುತ್ತದೆ. ಈ ಗ್ಲೆನ್‌ವಾಕ್ ಒಂದು ಬಾಟಲ್ ಬೆಲೆ ಎಷ್ಟಿದೆ? ಇದನ್ನು ಎಲ್ಲಿ ತಯಾರಿಸಲಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಗ್ಲೆನ್‌ವಾಕ್ ಮದ್ಯವನ್ನು ಅತ್ಯಧಿಕ ಉತ್ಪಾದನೆ ಸ್ಕಾಟ್‌ಲ್ಯಾಂಡ್‌ನಲ್ಲಿ ಆಗುತ್ತದೆ. ನಂತರ ಇಲ್ಲಿಯೇ ಅಂತಿಮ ಪ್ಯಾಕಿಂಗ್ ಸಹ ಆಗುತ್ತದೆ. ಕಾರ್ಟಲ್ ಬ್ರದರ್ಸ್ ಎಂಬ ಕಂಪನಿ ಈ ಮದ್ಯವನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ. ಮೋಕ್ಷ್ ಸಾನಿ, ಜಿತಿನ್ ಮೆರನಿ, ರೋಹನ್ ನಿಹಲಾನಿ ಮತ್ತು ನೀರಜ್ ಸಿಂಗ್ ಕಾರ್ಟಲ್ ಬ್ರದರ್ಸ್ ಕಂಪನಿಯ ಸ್ಥಾಪಕರಾಗಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
2023ರಲ್ಲಿ ಗ್ಲೆನ್‌ವಾಕ್ ವಿಸ್ಕಿಯನ್ನು ಸಂಜಯ್ ದತ್ ಲಾಂಚ್ ಮಾಡಿದರು. ಆರಂಭದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಗ್ಲೆನ್‌ವಾಕ್ ವಿಸ್ಕಿಯ ಫೋಟೋಗಳನ್ನು ಹಂಚಿಕೊಳ್ಳಲಾಯ್ತು. ಇದಾದ ಬಳಿಕ ಇನ್‌ಸ್ಟಾಗ್ರಾಂ ಮೂಲಕ ಕೇವಲ 6 ತಿಂಗಳಲ್ಲಿ 6 ಲಕ್ಷ ಬಾಟಲ್‌ಗಳ ಮಾರಾಟವಾಯ್ತು. ಗ್ಲೆನ್‌ಬಾಕ್ ಮದ್ಯದ ದುಬೈ ಸೇರಿದಂತೆ 50 ದೇಶಗಳಲ್ಲಿ ಮಾರಾಟವಾಗುತ್ತದೆ. ಭಾರತದಲ್ಲಿ ಗ್ಲೆನ್‌ವಾಕ್ ಮದ್ಯದ ಬಾಟಲ್ 1,550 ರೂ.ಗಳಿಂದ 1,600 ರೂ.ವರೆಗೆ ಮಾರಾಟವಾಗುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)