ಪೆಟ್ರೋಲ್ ಸ್ಕ್ಯಾಮ್
ಪೆಟ್ರೋಲ್ ಪಂಪ್‌ಗಳಲ್ಲಿ ಹಲವು ಬಾರಿ ಸರಿಯಾದ ಪ್ರಮಾಣದಲ್ಲಿ ಪೆಟ್ರೋಲ್ ಹಾಕುತ್ತಿಲ್ಲ, ದುಡ್ಡು ಪಡೆದು ಮೋಸ ಮಾಡುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತದೆ. ಬಹುತೇಕ ಕಡೆ ಪೆಟ್ರೋಲ್ ಹಾಕಿದ ಬಳಿಕ ಮೈಲೇಜ್, ಕ್ರಮಿಸಿದ ದೂರ ಲೆಕ್ಕಾಚಾರ ಹಾಕಿದಾಗ ಎಲ್ಲೋ ಮೋಸ ಹೋಗಿದ್ದೇವೆ ಅನ್ನೋದು ಅರಿವಾಗುತ್ತದೆ. ಇದನ್ನು ತಪ್ಪಿಸಲು ಸಾಧ್ಯವಿದೆ.
ಪೆಟ್ರೋಲ್ ಪಂಪ್ ಜಂಪ್ ಟ್ರಿಕ್ ಸ್ಕ್ಯಾಮ್: ಪೆಟ್ರೋಲ್, ಡೀಸೆಲ್ ಇಂದು ಅತ್ಯವಶ್ಯಕ. ಪ್ರತಿಯೊಬ್ಬರ ಬಳಿ ಸ್ವಂತ ವಾಹನಗಳಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆ. ನೀವು ಪಾವತಿಸುವ ಹಣಕ್ಕೆ ಸಮಾನವಾದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಪೆಟ್ರೋಲ್ ಬಂಕ್‌ಗಳಲ್ಲಿ ಮೋಸಗಳು ನಡೆಯುತ್ತವೆಯೇ? ಹೌದು ಎಂಬುದು ಉತ್ತರ. 'ಸರ್, ೦ ನೋಡಿ' ಎಂದು ಪೆಟ್ರೋಲ್ ಹಾಕುವ ಮುನ್ನ ಸಿಬ್ಬಂದಿ ಹೇಳುತ್ತಾರೆ. ಆದರೆ ಕೆಲವು ಬಂಕ್‌ಗಳಲ್ಲಿ ಈ ಮಾತಿನ ಹಿಂದೆಯ ಮೋಸ ಅಡಗಿರುತ್ತದೆ.
ಜಂಪ್ ಟ್ರಿಕ್ ಎಂದರೇನು?
ಜಂಪ್ ಟ್ರಿಕ್ ಎಂದರೆ ಕೆಲವು ಪೆಟ್ರೋಲ್ ಪಂಪ್‌ಗಳು ಗ್ರಾಹಕರಿಗೆ ಪಾವತಿಸಿದ್ದಕ್ಕಿಂತ ಕಡಿಮೆ ಇಂಧನವನ್ನು ನೀಡಲು ಬಳಸುವ ಟ್ರಿಕ್. ಇದರಿಂದ ಬಂಕ್ ಮಾಲೀಕರಿಗೆ ಲಾಭವಾಗುತ್ತದೆ, ಗ್ರಾಹಕರಿಗೆ ನಷ್ಟ. ಪಾವತಿಸಿದ ಬೆಲೆಗಿಂತ ಕಡಿಮೆ ಇಂಧನ ಸಿಗುತ್ತದೆ. ದುಬಾರಿ ಬೆಲೆ ನೀಡಿ ಕಡಿಮೆ ಇಂಧನ ತುಂಬಿಸಿಕೊಂಡು ಮೋಸ ಹೋಗುವುದು ಮಾತ್ರವಲ್ಲ, ಆರ್ಥಿಕವಾಗಿ ನಷ್ಟಕ್ಕೆ ಕಾರಣವಾಗುತ್ತದೆ.
ಇದು ಹೇಗೆ ನಡೆಯುತ್ತದೆ?
ಇಂಧನ ತುಂಬಿಸಿಕೊಳ್ಳುವಾಗ ಸಿಬ್ಬಂದಿ 0 ನೋಡಲು ಹೇಳುತ್ತಾರೆ. ಗ್ರಾಹಕರು ಶೂನ್ಯ ಸಂಖ್ಯೆ ನೋಡಿ ನಿರಾಳರಾಗುತ್ತಾರೆ. ಆದರೆ ಬಳಿಕ 0 ಯಿಂದ ನೇರವಾಗಿ 10, 30, 40 ಹೀಗೆ ನಂಬರ್ ಜಂಪ್ ಆಗುತ್ತದೆ. ಕೆಲವು ಬಂಕ್‌ಗಳಲ್ಲಿ ಏಕಾಏಕಿ 50ಕ್ಕೆ ಏರುತ್ತದೆ. ರೂ.100 ಪೆಟ್ರೋಲ್ ತುಂಬಿಸಿದರೆ ನಿಮಗೆ ಸಿಗುವುದು ರೂ.50ರಷ್ಟು ಮಾತ್ರ. ಉಳಿದ ರೂ 50 ನೀವು ಮೋಸ ಹೋದಂತೆ.
ವೇಗವಾಗಿ ಏರುವ ಮೀಟರ್
ಪೆಟ್ರೋಲ್ ಪಂಪ್‌ಗಳು ತಮ್ಮ ಯಂತ್ರಗಳನ್ನು ಹೆಚ್ಚಿನ ನಂಬರ್(ಮೀಟರ್) ತೋರಿಸುವಂತೆ ತಿರುಚುತ್ತವೆ. ಇದರಿಂದಾಗಿ ನಿಜವಾಗಿ ನೀಡಿದ್ದಕ್ಕಿಂತ ಹೆಚ್ಚು ಇಂಧನ ನೀಡಿದಂತೆ ಕಾಣುತ್ತದೆ. ಆದರೆ ಅಸಲಿಗೆ ಕಡಿಮೆ ಇಂಧನ ತುಂಬಿಸಲಾಗುತ್ತದೆ.
ಪೆಟ್ರೋಲ್ ಸ್ಕ್ಯಾಮ್
ಸಾಮಾನ್ಯವಾಗಿ, ಮೀಟರ್ ಜಂಪ್ ರೂ 4 ರಿಂದ 5ರ ಒಳಗೆ ಇರಬೇಕು. ಅದು ರೂ 10 ಅಥವಾ 20 ಅಥವಾ ಹೆಚ್ಚು ಏರಿದರೆ ಏನೋ ತಪ್ಪು ನಡೆಯುತ್ತಿದೆ ಎಂಬುದರ ಸಂಕೇತ. ಇಂಧನ ತುಂಬಿಸುವಾಗ ಮೀಟರ್ ಮೇಲೆ ಗಮನವಿರಲಿ. ವಾಚನ ಏಕಾಏಕಿ ಏರಿದರೆ ಸಿಬ್ಬಂದಿಯನ್ನು ಪ್ರಶ್ನಿಸಲು ಹಿಂಜರಿಯಬೇಡಿ. ಸ್ಪೀಡ್ ಮಾಡಲಾಗಿದೆ ಅನ್ನೋ ಉತ್ತರ ಸಿಬ್ಬಂದಿಗಳು ನೀಡಬಹುದು. ಏನೇ ಮಾಡಿದರೂ, ಅದೆಷ್ಟೇ ಸ್ಪೀಡ್ ಇದ್ದರೂ 4 ರಿಂದ 5ರ ಒಳಗಿನ ಸಂಖ್ಯೆಯಲ್ಲಿ ಜಂಪ್ ಇರಬೇಕು. 1,2,3,4 ಅಥವಾ 1,4,8 ಹೀಗಿರಬೇಕು. ಆದರೆ 10, 20, 50 ಎಂದಾದರೆ ಅದು ಮೋಸ.