ಈ ಬ್ಯುಸಿನೆಸ್‌ಗಳನ್ನುಮಾಡಿ... IAS, IPS ಅಧಿಕಾರಿಗಳಿಗಿಂತ ಹೆಚ್ಚು ಸಂಪಾದಿಸಬಹುದು!

Published : May 07, 2026, 01:17 PM IST

High Income Street Businesses ದೊಡ್ಡ ಓದು, ಆಫೀಸ್ ಕೆಲಸ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಇಲ್ಲದೆಯೂ ಕೆಲವು ಬೀದಿ ಬದಿಯ ವ್ಯಾಪಾರಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತವೆ. ಅತಿ ಹೆಚ್ಚು ಲಾಭ ತರುವ ಆ ವ್ಯಾಪಾರಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.

PREV
14
ಆಹಾರ ಮಾರಾಟ ಉದ್ಯಮ

ಬೀದಿ ಬದಿಯ ಫುಡ್ ಸ್ಟಾಲ್‌ಗಳು ಇಂದು ಅತಿ ಹೆಚ್ಚು ಆದಾಯ ತರುವ ಉದ್ಯಮಗಳಲ್ಲಿ ಒಂದಾಗಿವೆ. ಇಡ್ಲಿ, ದೋಸೆ, ಪರೋಟ, ಚಿಕನ್ ರೈಸ್, ಶವರ್ಮಾ, ಜ್ಯೂಸ್‌ನಂತಹ ತಿನಿಸುಗಳನ್ನು ಮಾರುವ ಅಂಗಡಿಗಳಿಗೆ ಪ್ರತಿದಿನ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲೂ ರಾತ್ರಿ  ಫುಡ್‌  ಸ್ಟಾಲ್ ಯುವಜನರ ಭಾರಿ ಬೇಡಿಕೆಯಿದೆ. ಕೆಲವು ಪ್ರಸಿದ್ಧ ಸ್ಟ್ರೀಟ್ ಫುಡ್ ಅಂಗಡಿಗಳು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುತ್ತವೆ.

24
ಟೀ ಮತ್ತು ಕಾಫಿ ಸ್ಟಾಲ್‌ಗಳು
ಒಂದು ಸಣ್ಣ ಟೀ ಅಂಗಡಿ ಕೂಡ, ಸರಿಯಾದ ಜಾಗದಲ್ಲಿದ್ದರೆ ಚಿನ್ನದ ಗಣಿಯಂತೆ ಆಗಬಲ್ಲದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕಾಲೇಜು ಬಳಿಯಿರುವ ಟೀ ಸ್ಟಾಲ್‌ಗಳಿಗೆ ಯಾವಾಗಲೂ ಜನಜಂಗುಳಿ ಇರುತ್ತದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಲ್ಲಿ ಪ್ರತಿದಿನದ ಹಣದ ಹರಿವು ಹೆಚ್ಚಾಗಿರುತ್ತದೆ. ಕೆಲವರು ಟೀ ಅಂಗಡಿಯನ್ನೇ ಬ್ರ್ಯಾಂಡ್ ಮಾಡಿ, ಹಲವು ಶಾಖೆಗಳನ್ನು ತೆರೆದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ.
34
ಮೊಬೈಲ್ ಮತ್ತು ಪಾರ್ಟ್ ಮಾರಾಟ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಸದಾ ಬೇಡಿಕೆ ಇರುತ್ತದೆ. ಬೀದಿ ಬದಿಯಲ್ಲಿ ಚಾರ್ಜರ್, ಹೆಡ್‌ಫೋನ್, ಮೊಬೈಲ್ ಕವರ್, ಟೆಂಪರ್ಡ್ ಗ್ಲಾಸ್‌ನಂತಹ ವಸ್ತುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಈ ವ್ಯಾಪಾರ ವೇಗವಾಗಿ ಬೆಳೆಯುತ್ತದೆ.
44
ಹಣ್ಣು ಮತ್ತು ಜ್ಯೂಸ್ ವ್ಯಾಪಾರ

ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ, ಹಣ್ಣಿನ ರಸ ಮತ್ತು ಹಣ್ಣುಗಳ ಮಾರಾಟದ ಉದ್ಯಮಕ್ಕೂ ಉತ್ತಮ ಬೇಡಿಕೆ ಬಂದಿದೆ. ಫ್ರೆಶ್ ಜ್ಯೂಸ್, ಫ್ರೂಟ್ ಸಲಾಡ್, ಕಬ್ಬಿನ ಹಾಲನ್ನುನೀಡಿದರೆ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ. ಬೇಸಿಗೆ ಕಾಲದಲ್ಲಿ ಈ ವ್ಯಾಪಾರದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories