ಮಾಯಾ ಟಾಟಾ: ನೋಯಲ್ ಟಾಟಾ ಮತ್ತು ಆಲು ಮಿಸ್ತ್ರಿ ದಂಪತಿಯ ಪುತ್ರಿ. ಮಾಯಾ ಟಾಟಾ ಅವರ ತಂದೆ ರತನ್ ಟಾಟಾ ಅವರ ಸೋದರ ಸಂಬಂಧಿ. ಅದೇ ರೀತಿ, ಅವರ ತಾಯಿ ದಿವಂಗತ ಸೈರಸ್ ಮಿಸ್ತ್ರಿ ಅವರ ಸಹೋದರಿ. ಹೀಗಾಗಿ, ಅವರು ಟಾಟಾ ಸಮೂಹದೊಂದಿಗೆ ಸಂಬಂಧ ಹೊಂದಿದ್ದಾರೆ. ಟಾಟಾ ಸಮೂಹದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೇಸ್ ಬ್ಯುಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಟಾಟಾ ಅಪಾರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ಗೆ ಮಾಯಾ ಟಾಟಾ ಕೊಡುಗೆ ನೀಡಿದ್ದಾರೆ. ಇದಲ್ಲದೆ, ಟಾಟಾ ನ್ಯೂ ಆ್ಯಪ್ ಅನ್ನು ಪರಿಚಯಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬುದು ಗಮನಾರ್ಹ.