ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ

Published : Jul 01, 2026, 07:08 AM IST

ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.

PREV
15
ಎಲ್‌ಪಿಜಿ ದರಗಳು

ತಿಂಗಳ ಮೊದಲ ದಿನ ತೈಲ ಕಂಪನಿಗಳು ತೈಲ ಮತ್ತು ಎಲ್‌ಪಿಜಿ ದರ ಪರಿಷ್ಕರಣೆ ಮಾಡುತ್ತವೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮದಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಎಲ್‌ಪಿಜಿ ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಇದೀಗ ಯುದ್ಧದ ತೀವ್ರತೆ ಬಹುತೇಕ ಕಡಿಮೆಯಾದ ಹಿನ್ನೆಲೆ ದರಗಳು ಇಳಿಮುಖವಾಗಿವೆ.

25
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ

ಜುಲೈ 1ರ ಪ್ರಕಾರ, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 183.50 ರೂ.ಗಳಷ್ಟು ಇಳಿಕೆಯಾಗಿದೆ. ಬೆಲೆ ಇಳಿಕೆಯ ನಂತ್ರ ವಾಣಿಜ್ಯ ಸಿಲಿಂಡರ್‌ಗಳು ಗ್ರಾಹಕರಿಗೆ 2930 ರೂಪಾಯಿ ಆಸುಪಾಸಿನಲ್ಲಿ ಸಿಗಲಿದೆ. ಈ ಹಿಂದೆ 19 ಕೆಜಿ ಸಿಲಿಂಡರ್ ಬೆಲೆ 3,113.50 ರೂ.ವರೆಗೆ ತಲುಪಿತ್ತು. ವರದಿಗಳ ಪ್ರಕಾರ, ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗಿದೆ.

35
ಗೃಹಬಳಕೆ ಸಿಲಿಂಡರ್ ಬೆಲೆಗಳು ಸ್ಥಿರ

ಗೃಹಬಳಕೆಯ 14 ಕೆಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬಂದಿಲ್ಲ. ಸದ್ಯ 14 ಕೆಜಿ ಸಿಲಿಂಡರ್ ಬೆಲೆ 942 ರೂಪಾಯಿ ಆಗಿದೆ. ಸಿಲಿಂಡರ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತವೆ ಎಂಬುದನ್ನು ಗಮನಿಸಬೇಕು.

45
ಮೊದಲ ಬಾರಿಗೆ ಇಳಿಕೆ

ಈ ವರ್ಷದಲ್ಲಿ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ. ದೆಹಲಿಯಲ್ಲಿ 2025 ಡಿಸೆಂಬರ್ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆ 1,1580.50 ರೂ. ಆಗಿತ್ತು. 2026ನೇ ಜನವರಿಯಲ್ಲಿ 1,691.50 ರೂಪಾಯಿ, ಫೆಬ್ರವರಿಯಲ್ಲಿ 1740.50 ರೂಪಾಯಿ, ಮಾರ್ಚ್‌ನಲ್ಲಿ 1768.50 ರೂಪಾಯಿ ಆಗಿತ್ತು. ಹಾಗೆಯೇ ಬೆಲೆಗಳು ಏರಿಕೆಯತ್ತ ಸಾಗಿದ್ದವು.

55
ಸತತ ಏರಿಕೆ

ಮಾರ್ಚ್‌ನಲ್ಲಿ ಮೊದಲ ಬಾರಿ 28 ರೂಪಾಯಿ ಮತ್ತು ಎರಡನೇ ಬಾರಿ 114.50 ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು. ಈ ಏರಿಕೆಯ ನಂತರ 19 ಕೆಜಿ ಸಿಲಿಂಡರ್ ಬೆಲೆ 2078 ರೂ.ಗಳಿಗೆ ತಲುಪಿತ್ತು. ಇನ್ನು ಮೇ ತಿಂಗಳಲ್ಲಿ ಒಂದೇ ಬಾರಿಗೆ 993 ರೂ. ಗಳಷ್ಟು ಏರಿಕೆ ಮಾಡಿದ್ದರಿಂದ ಸಿಲಿಂಡರ್ ಬೆಲೆ 3 ಸಾವಿರದ ಗಡಿಯನ್ನು ದಾಟಿತ್ತು. ಇದರಿಂದ ಹೋಟೆಲ್‌ಗಳು ಆಹಾರದ ಬೆಲೆಯನ್ನು ಹೆಚ್ಚಳ ಮಾಡಿಕೊಂಡಿದ್ದವು. ಜೂನ್ 1ರಂದು ಸಹ 42 ರೂಪಾಯಿ ಹೆಚ್ಚಳವಾಗಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories