ಅಮೇರಿಕಾ, ಚೀನಾ, ರಷ್ಯಾ ದೇಶಗಳಿಗೆ ಪೈಪೋಟಿ ನೀಡುವಂತೆ ಬೆಳೆಯುತ್ತಿರುವ ಭಾರತಕ್ಕೆ ಒಂದು ದೊಡ್ಡ ಲಾಭ ಸಿಕ್ಕಿದೆ. ಒಡಿಶಾದಲ್ಲಿ 10 ರಿಂದ 20 ಮೆಟ್ರಿಕ್ ಟನ್ ಬಂಗಾರ ಇರಬಹುದು ಅಂತ ಭಾರತೀಯ ಭೂವಿಜ್ಞಾನ ಸಮೀಕ್ಷೆ (GSI) ಹೇಳಿದೆ. ಈ ಚಿನ್ನದ ನಿಕ್ಷೇಪ ಭಾರತದ ಆರ್ಥಿಕತೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಂದಾಜಿಸಿದ್ದಾರೆ.
24
ಭಾರತದಲ್ಲಿ ಬಂಗಾರದ ನಿಕ್ಷೇಪ
ಒಡಿಶಾದ ಥಿಯೋಗರ್ (ಅಡಾಸಾ-ರಾಂಪಲ್ಲಿ), ಸುಂದರ್‌ಗಢ, ನಬರಂಗಪುರ, ಕಿಯೋಂಜಾರ್, ಅಂಗುಲ್ ಮತ್ತು ಕೋರಾಪುಟ್‌ನಲ್ಲಿ ಬಂಗಾರದ ನಿಕ್ಷೇಪಗಳು ಇರುವುದು ಖಚಿತವಾಗಿದೆ. ಮಯೂರ್‌ಭಂಜ್, ಮಲ್ಕಾನ್‌ಗಿರಿ, ಸಂಬಲ್‌ಪುರ ಮತ್ತು ಬೌದ್‌ನಲ್ಲೂ ಬಂಗಾರ ಇದೆಯಾ ಅಂತ ಸಮೀಕ್ಷೆ ನಡೆಯುತ್ತಿದೆ.
ಭಾರತದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದಲ್ಲಿ ಗಣಿಗಾರಿಕೆ ಆರಂಭಗೊಂಡರೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಸವಾಗುವ ಸಾಧ್ಯತೆ ಇಲ್ಲ. ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತದೆ. ಭಾರತವೇ ಚಿನ್ನವನ್ನು ಹಲವು ದೇಶಗಳಿಗೆ ರಫ್ತು ಮಾಡುವ ಹಾಗೂ ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಚಿನ್ನದ ಬೆಲೆಯಲ್ಲಿ ಕೆಲ ಬದಲಾವಣೆಯಾಗಬಹುದು.
34
10 ರಿಂದ 20 ಮೆಟ್ರಿಕ್ ಟನ್ ಬಂಗಾರ
ಒಡಿಶಾದಲ್ಲಿ ಎಷ್ಟು ಬಂಗಾರ ಇದೆ ಅಂತ ಇನ್ನೂ ಗೊತ್ತಾಗಿಲ್ಲ. ಆದರೆ 10 ರಿಂದ 20 ಮೆಟ್ರಿಕ್ ಟನ್ ಬಂಗಾರ ಇರಬಹುದು ಅಂತ ಅಂದಾಜಿಸಲಾಗಿದೆ. ಇದರಿಂದ ಭಾರತದ ಬಂಗಾರ ಉತ್ಪಾದನೆ ಹೆಚ್ಚಾಗುತ್ತದೆ. ಭಾರತ ಬಂಗಾರವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ 700 ರಿಂದ 800 ಮೆಟ್ರಿಕ್ ಟನ್ ಬಂಗಾರವನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಕೇವಲ 1.4 ಮೆಟ್ರಿಕ್ ಟನ್ ಬಂಗಾರ ಉತ್ಪಾದನೆಯಾಗುತ್ತದೆ.
44
ದೇಶದ ಬಂಗಾರ ಉತ್ಪಾದನೆ ಹೆಚ್ಚು
ಒಡಿಶಾದ ಬಂಗಾರದ ನಿಕ್ಷೇಪದಿಂದ ಭಾರತದ ಬಂಗಾರ ಆಮದು ಕಡಿಮೆಯಾಗದಿದ್ದರೂ, ದೇಶದ ಬಂಗಾರ ಉತ್ಪಾದನೆ ಹೆಚ್ಚಾಗುತ್ತದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಿ, ಜನರ ಜೀವನ ಮಟ್ಟ ಸುಧಾರಿಸುತ್ತದೆ. ಒಡಿಶಾದ ಆರ್ಥಿಕತೆಗೂ ಬಲ ಬರುತ್ತದೆ. ಭಾರತದ ಬಂಗಾರದ ಸಂಗ್ರಹವೂ ಹೆಚ್ಚಾಗುತ್ತದೆ.