ಮುಗಿತಪ್ಪಾ ಇಳಿಕೆ ಕಾಲ? 5 ದಿನದ ನಂತ್ರ ಏರಿಕೆಯಾಗಿರುವ ಚಿನ್ನದ ಬೆಲೆಯನ್ನೊಮ್ಮೆ ನೋಡಿ

Published : Feb 04, 2026, 10:01 AM IST

ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ. 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ದರಗಳ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ಗಣನೀಯ ಏರಿಕೆ ದಾಖಲಾಗಿದೆ.

PREV
17
ಚಿನ್ನ ಮತ್ತು ಬೆಳ್ಳಿ ಬೆಲೆ

ಕಳೆದ ಐದು ದಿನಗಳಿಂದ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿಂದು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಂದು ಎಲ್ಲಾ ವಿಧದ ಚಿನ್ನದ ದರದಲ್ಲಿ ವ್ಯತ್ಯಾಸವಾಗಿದೆ. ಐದು ದಿನಗಳ ನಂತರ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

27
ಬೆಳ್ಳಿ ದರದಲ್ಲಿಯೂ ಏರಿಕೆ

ಕಳೆದ ಐದು ದಿನದಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 25 ಸಾವಿರ ರೂ.ಗಳಷ್ಟು ಕಡಿಮೆಯಾಗಿತ್ತು. ಅದೇ ರೀತಿ ಬೆಳ್ಳಿ ದರದಲ್ಲಿಯೂ ಗಣನೀಯ ಕುಸಿತ ಕಂಡು ಬಂದಿತ್ತು. ಇಂದು ಚಿನ್ನದೊಂದಿಗೆ ಬೆಳ್ಳಿ ದರವೂ ಜಂಪ್ ಆಗಿದೆ.

37
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 16,053 ರೂಪಾಯಿ

8 ಗ್ರಾಂ: 1,28,424 ರೂಪಾಯಿ

10 ಗ್ರಾಂ: 1,60,530 ರೂಪಾಯಿ

100 ಗ್ರಾಂ: 16,05,300 ರೂಪಾಯಿ

47
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 14,715 ರೂಪಾಯಿ

8 ಗ್ರಾಂ: 1,17,720 ರೂಪಾಯಿ

10 ಗ್ರಾಂ: 1,47,150 ರೂಪಾಯಿ

100 ಗ್ರಾಂ: 14,71,500 ರೂಪಾಯಿ

57
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1.49,00 ರೂಪಾಯಿ, ಮುಂಬೈ: 1,47,150 ರೂಪಾಯಿ, ದೆಹಲಿ: 1,47,300 ರೂಪಾಯಿ, ಕೋಲ್ಕತ್ತಾ: 1,47,150 ರೂಪಾಯಿ, ಬೆಂಗಳೂರು: 1,47,150 ರೂಪಾಯಿ, ಹೈದರಾಬಾದ್: 1,47,150 ರೂಪಾಯಿ, ವಡೋದರ: 1,47,200 ರೂಪಾಯಿ, ಅಹಮದಬಾದ್: 1,47,200 ರೂಪಾಯಿ

67
ದೇಶದಲ್ಲಿಂದು ಬೆಳ್ಳಿ ಬೆಲೆ

ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 40,000 ರೂ.ಗಳಷ್ಟು ಏರಿಕೆಯಾಗಿದೆ. ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

10 ಗ್ರಾಂ: 3,200 ರೂಪಾಯಿ

100 ಗ್ರಾಂ: 32,000 ರೂಪಾಯಿ

1000 ಗ್ರಾಂ: 3,20,000 ರೂಪಾಯಿ

ಇದನ್ನೂ ಓದಿ: ಫಾದರ್ ಆಫ್‌ ಆಲ್‌ ಡೀಲ್ಸ್‌ : ಭಾರತ ಮತ್ತು ಅಮೆರಿಕ ಘೋಷಿಸಿದ ಒಪ್ಪಂದ

77
ಎಷ್ಟು ಏರಿಕೆ?

ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 6,600 ರೂ.ಗಳಷ್ಟು ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 6,050 ರೂ.ಗಳಷ್ಟು ಹೆಚ್ಚಳಗೊಂಡಿದೆ.

ಇದನ್ನೂ ಓದಿ: ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು!

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories