2020ರ ಕೊನೆಯ ದಿನ ಚಿನ್ನದ ಓಟಕ್ಕೆ ಬ್ರೇಕ್. ಕಳೆದೆರಡು ದಿನದ ಹಿಂದೆ ಇಳಿಕೆ ಕಂಡಿದ್ದ ಚಿನ್ನದ ದರ ಸ್ತಬ್ಧ
ವರ್ಷದಾರಂಭದಿಂದಲೂ ಏರಿಳಿತ ಆಟವಾಡುತ್ತಿದ್ದ ಚಿನ್ನ, ಕೊರೋನಾ ಅಟ್ಟಹಾಸದ ನಡುವೆ ಭಾರೀ ಏರಿಕೆ ಕಂಡಿತ್ತು. ಅಲ್ಲದೇ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು.
ಲಾಕ್‌ಡೌನ್ ಹೇರಿಕೆಯಾಗಿ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಚಚಿನ್ನದಲ್ಲಿ ಹೂಡಿಕೆಎ ಮಾಡಿದ್ದರು. ಹೀಗಾಗಿ ಚಿನ್ನದ ದರ ಏರಿಕೆಯಾಗಿತ್ತು.
ಆದರೆ ಲಾಕ್‌ಡೌನ್ ಅಂತ್ಯವಾಗಿ, ಕೊರೋನಾ ಅಟ್ಟಹಾಸ ಕಡಿಮೆಯಾಗುತ್ತಿದ್ದಂತೆಯೇ ಚಿನ್ನದ ದರ ನಿಧಾನವಾಗಿ ಇಳಿಯಲಾರಂಭಿಸಿತ್ತು.
ಹೀಗಿದ್ದರೂ ಏರಿಳಿತ ಆಟ ಮುಂದುವರೆದು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿತ್ತು.
ಆದರೀಗ ವರ್ಷದ ಕೊನೆಯ ಹಂತದಲ್ಲಿ ಚಿನ್ನದ ದರ ಏರಿಕೆಯೂ ಆಗದೆ, ಇಳಿಕೆಯೂ ಆಗದೆ ಸ್ತಬ್ಧಗೊಂಡಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 46,700 ರೂಪಾಯಿ ಇದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದವೂ 50,950 ರೂಪಾಯಿ ಇದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ 1,00ರೂ ಏರಿಕೆಯಾಗಿ, ಒಂದು ಕೆ. ಜಿ. ಬೆಳ್ಳಿ ದರ 68,400ರೂ ಆಗಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.