ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್; ಕಾರಣವೇನು?

First Published | Dec 25, 2020, 6:33 PM IST

ಉದ್ಯಮಿ, ರಿಲಾಯನ್ಸ್ ಗ್ರೂಫ್ ಚೇರ್ಮೆನ್ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದಾರೆ. 2020ರ ಆರಂಭದಲ್ಲಿ ಅಂಬಾನಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಆದರೆ ಇದೀಗ ಬಿಡುಗಡೆಯಾಗಿರುವ ಶ್ರೀಮಂತ ವ್ಯಕ್ತಿಗಳ ಟಾಪ್ 10 ಪಟ್ಟಿಯಲ್ಲಿ ಅಂಬಾನಿ ಹೆಸರಿಲ್ಲ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ಆಯಿಲ್, ರಿಟೇಲ್ ಬ್ಯುಸಿನೆಸ್, ಟೆಲಿಕಾಂ ಸೇರಿದಂತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ರಿಲಾಯನ್ಸ್ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯ.
ಈ ವರ್ಷದ ಆರಂಭದಲ್ಲಿ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ ಈ ವರ್ಷದ ಅಂತ್ಯಕ್ಕೆ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಹೊರಬಿದ್ದಿದ್ದಾರೆ.
Tap to resize

2020 ಆರಂಭದಲ್ಲಿ ವಿಶ್ವದ 4ನೇ ಶ್ರೀಮಂತರಾಗಿದ್ದಾಗ ಅಂಬಾನಿ ನೆಟ್‌ ವರ್ದ್ 6.62 ಲಕ್ಷ ಕೋಟಿ ರೂಪಾಯಿ ಇತ್ತು. ಇದೀಗ 5.63 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.
ಸದ್ಯ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ಹಾಗೂ ಒರೆಕಾಲ್ ಕಾರ್ಪೋರೇಶನ್‌ನಲ್ಲಿ ಲ್ಯಾರಿ ಎಲಿಸನ್ ನಂತರದ ಸ್ಥಾನ ಪಡೆದಿದ್ದಾರೆ.
ಅಂಬಾನಿ ಶ್ರೀಮಂತರ ಟಾಪ್ 10 ಪಟ್ಟಿಯಿಂದ ಹೊರಬೀಳಲು ಪ್ರಮುಖ ಕಾರಣ ರಿಲಾಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಷೇರುಗಳು ಶೇಕಡಾ 16 ರಷ್ಟು ಕುಸಿತ ಕಂಡಿದೆ.
ಗರಿಷ್ಠ ದಾಖಲೆಯ 2,369.35 ರೂಪಾಯಿಗೆ ತಲುಪಿದ್ದ RIL ಷೇರುಗಳು ಇದೀಗ 1,994.15 ರೂಪಾಯಿಗೆ ಕುಸಿದಿದೆ. ಈ ಕುಸಿತದ ನಡುವೆಯೂ RIL ಷೇರು ಮೌಲ್ಯ 33% ಏರಿಕೆಯಾಗಿದೆ.
ಯುಎಸ್ ಇಕಾಮರ್ಸ್ ದೈತ್ಯ ಅಮೆಜಾನ್, ಫ್ಯೂಚರ್ ಗ್ರೂಪ್‌ನೊಂದಿಗಿನ ಒಪ್ಪಂದವನ್ನು ಪ್ರಶ್ನಿಸಿದ ನಂತರ ಕಳೆದ ಎರಡು ತಿಂಗಳುಗಳಲ್ಲಿ RIL ಷೇರುಗಳು ಲಾಭದ ಬುಕಿಂಗ್ ಕಂಡಿವೆ.
ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಆದರೆ ಈ ಪಟ್ಟಿ ಶಾಶ್ವತವಲ್ಲ. ಮುಕೇಶ್ ಅಂಬಾನಿಗಿರುವ ಚಾಕಚಕತ್ಯೆ, ಉದ್ಯಮ ವಿಸ್ತರಿಸುವ ಶಕ್ತಿಯಿಂದ ಅಗ್ರಸ್ಥಾನ ಪಡೆದರೂ ಆಶ್ಚರ್ಯವಿಲ್ಲ.

Latest Videos

click me!