2020 ಅಂತ್ಯದಲ್ಲಿ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಹೀಗಿದೆ ಇಂದಿನ ದರ!

First Published | Dec 29, 2020, 4:15 PM IST

ಏರಿಳಿತವಾಡುತ್ತಿದ್ದ ಚಿನ್ನದ ದರದಲ್ಲಿ ದಾಖಲೆಯ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ, ಬೆಳ್ಳಿಯೂ ಅಗ್ಗ| ಹೀಗಿದೆ ನೋಡಿ ಡಿಸೆಂಬರ್ 29ರ ಗೋಲ್ಡ್ ರೇಟ್

ಏರಿಳಿತ ಆಟವಾಡುತ್ತಿದ್ದ ಚಿನ್ನ 2020ರ ಅಂತಿಮ ಹಹಂತದಲ್ಲಿ ಭಾರೀ ಇಳಿಕೆ ಕಂಡಿದೆ.
ಏರಿಳಿತವಾಡುತ್ತಿದ್ದ ಚಿನ್ನ ಗ್ರಾಹಕರನ್ನು ಖರೀದಿಸಬೇಕೋ? ಬೇಡವೋ ಎಂಬ ಗೊಂದಲಕ್ಕೆ ದೂಡಿತ್ತು.
Tap to resize

ಆದರೀಗ ಮೂರ್ನಾಲ್ಕು ದಿನಗಳ ಬಳಿಕ ಚಿನ್ನದ ದರದಲ್ಲಿ ದಾಖಲೆಯ ಕುಸಿತವಾಗಿದ್ದು, ಖರೀದಿದಾರರನ್ನು ನಿರಾಳರನ್ನಾಗಿಸಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 400ರೂ. ಕುಸಿದು 46,700 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 350 ರೂ. ಇಳಿಕೆಯಾಗಿ 50,950 ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರದಲ್ಲೂ 1,000ರೂ ಕುಸಿತವಾಗಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ. ಜಿ. ಬೆಳ್ಳಿ ದರ 68,300ರೂ ಆಗಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

Latest Videos

click me!