ದೇಶ, ರಾಜ್ಯಾದ್ಯಂತ ಆವರಿಸಿರುವ ಕೊರೋನಾ ಅಲೆ ಜನ ಸಾಮಾನ್ಯರನ್ನು ಕಂಗಾಲುಗೊಳಿಸಿದೆ.
ಸದ್ಯ ಕೊರೋನಾ ಎರಡನೇ ಅಲೆಯಿಂದ ನಿರ್ಮಾಣವಾದ ಪರಿಸ್ಥಿತಿ ತಿಳಿಗೊಳಿಸಲು, ಸೋಂಕು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ಜಾರಿಗೊಳಿಸಿದೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಈ ವೇಳೆ ಕೇವಲ ಅಗತ್ಯ ಸೇವೆಯಷ್ಟೇ ಲಭ್ಯವಿರಲಿದೆ.
ಹೀಗಿರುವಾಗಲೇ ಸದ್ಯ ಚಿನ್ನದ ಬೆಲೆ ದಾಖಲೆಯ ಇಳಿಕೆ ಕಂಡಿದೆ.
ಹೌದು ಮೊದಲ ಅಲೆ ಕಡಿಮೆಯಾಗುತ್ತಿದ್ದಂತೆಯೇ ಇಳಿಕೆಯಾಗಿದ್ದ ಚಿನ್ನ ಮತ್ತೆ ನಿಧಾನವಾಗಿ ಏರಿತ್ತು.
ಆದರೀಗ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮತ್ತೆ ಇಳಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 10 ರೂ. ಇಳಿಕೆಯಾಗಿ ದರ 44,590 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 10ರೂ. ಇಳಿಕೆಯಾಗಿ 48,650ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 68,800ರೂ ಆಗಿದೆ.
ಸದ್ಯ ಮೊದಲ ಅಲೆಗಿಂತಲೂ ಗಂಭೀರ ಸ್ಥಿತಿ ನಿರ್ಮಾಣ ಮಾಡಿರುವ ಎರಡನೇ ಅಲೆ ಜನರ ಜೀವ ಹಿಂಡುತ್ತಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಹದಗೆಡುವ ಸಂಶಯ ವ್ಯಕ್ತವಾಗಿದೆ. ಹೀಗಿರುವಾಗ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂಬುವುದು ತಜ್ಞರ ಅಭಿಪ್ರಾಯ.