ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಹೀಗಿದೆ ಇಂದಿನ ದರ!

First Published Jan 27, 2021, 4:58 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ, ಬೆಳ್ಳಿಯೂ ಅಗ್ಗ| ಹೀಗಿದೆ ನೋಡಿ ಜನವರಿ 27ರ ಗೋಲ್ಡ್ ರೇಟ್ 

ದಿನೇ ದಿನೇ ಏರುತ್ತಿದ್ದ ಚಿನ್ನದ ದರ ಗ್ರಾಹಕರ ಚಿಂತೆಗೆ ಕಾರಣವಾಗಿತ್ತು
undefined
ಆದರೀಗ ಬಂಗಾರ ದರ ಕುಸಿಯಲಾರಂಭಿಸಿದೆ.
undefined
ಲಾಕ್‌ಡೌನ್ ಹೇರಿದಾಗಿನಿಂದಲೂ ಏರಿಳಿತ ಆಟವಾಡುತ್ತಿದ್ದ ಚಿನ್ನದ ದರದಿಂದ ಬೇಸತ್ತಿದ್ದ ಗ್ರಾಹಕರಿಗೆ ಈಗ ಕೊಂಚ ನೆಮ್ಮದಿಯಾಗಿದೆ
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 300 ರೂ. ಇಳಿಕೆಯಾಗಿ ದರ 45,750 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 330 ರೂ. ಇಳಿಕೆಯಾಗಿ 49,900 ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ 67,400ರೂ ಆಗಿದೆ.
undefined
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಜೊತೆಗೆ ಕೊರೋನಾ ವೈರಸ್ ರೂಪಾಂತರವೂ ಆಗುತ್ತಿದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
undefined
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ
undefined
click me!