ಐದು ದಿನದ ಬಳಿಕ ಚಿನ್ನದ ದರದಲ್ಲಿ ದಾಖಲೆಯ ಇಳಿಕೆ, ಹೀಗಿದೆ ಇಂದಿನ ರೇಟ್‌!

First Published Apr 20, 2021, 5:03 PM IST

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಏಪ್ರಿಲ್ 20ರ ಗೋಲ್ಡ್ ರೇಟ್]

ಚಿನ್ನ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಪ್ರತಿಯೊಬ್ಬ ಹೆಣ್ಮಗಳಿಗೂ ಚಿನ್ನ ಧರಿಸುವುದೆಂದರೆ ಅದೇನೋ ಖುಷಿ.
undefined
ಆದರೆ ಹೆಣ್ಮಕ್ಕಳ ಈ ಚಿನ್ನದ ಪ್ರೀತಿಗೆ ಕೊರೋನಾ ಎಂಬ ಕರಿ ನೆರಳು ಬಿದ್ದಾಗಿನಿಂದ ಬೆಲೆ ಏರಿಳಿತದ ಆಟಟವಾಡುತ್ತಲೇ ಇದೆ.
undefined
ಹೌದು ಕೊರೋನಾ ಮೊದಲ ಅಲೆ ವೇಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಬಳಿಕ ಕೊಂಚ ಇಳಿಕೆ ಕಂಡಿತ್ತು.
undefined
ಇನ್ನು ಈ ವರ್ಷದ ಆರಂಭದಲ್ಲಿ ಚಿನ್ನ ದಾಖಲೆಯ ಕುಸಿತ ಕಂಡಿತ್ತು. ಇದು ಚಿನ್ನ ಪ್ರಿಯರನ್ನು ಬಹಳ ಸಂತಸಕ್ಕೀಡು ಮಾಡಿತ್ತು.
undefined
ಆದರೀಗ ಎರಡನೇ ಅಲೆ ಕೊರೋನಾ ಹಾವಳಿ ಆರಂಭವಾದ ಬೆನ್ನಲ್ಲೇ ಮತ್ತೆ ಚಿನ್ನ ದುಬಾರಿಯಾಗಲಾರಂಭಿಸಿದೆ.
undefined
ಇನ್ನು ಮದುವೆ, ನಿಶ್ಚಿತಾರ್ಥ ಇಂತಹ ಶುಭ ಕಾರ್ಯಗಳೂ ನಡೆಯುವ ಸೀಜನ್‌ ಆಗಿರುವುದರಿಂದ ಚಿನ್ನ ಮತ್ತಷ್ಟು ದುಬಾರಿಯಾಗಿದೆ.
undefined
ಆದರೀಗ ನಾಲ್ಕು ದಿನ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಕೊಂಚ ಇಳಿಕೆಯಾಗಿದೆ.
undefined
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 100 ರೂ. ಇಳಿಕೆಯಾಗಿ ದರ 44,150 ರೂಪಾಯಿ ಆಗಿದೆ.
undefined
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 110ರೂ. ಇಳಿಕೆಯಾಗಿ 48,160ರೂಪಾಯಿ ಆಗಿದೆ.
undefined
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 68,600ರೂ ಆಗಿದೆ.
undefined
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
undefined
click me!