ಪೆಟ್ರೋಲ್-ಡೀಸೆಲ್‌ನ ಹೆಚ್ಚುವರಿ ಸೆಸ್ ಕಡಿತ; ಪ್ರತಿ ಲೀಟರ್‌ ಮೇಲೆ 5 ರೂಪಾಯಿ ಇಳಿಕೆ!

First Published Feb 12, 2021, 7:04 PM IST

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶತಕದತ್ತ ದಾಪುಗಾಲಿಟ್ಟಿದೆ. ಕೆಲ ರಾಜ್ಯಗಳಲ್ಲಿ ಈಗಾಗಲೇ 100 ರೂಪಾಯಿ ದಾಟಿದೆ. ಕೇಂದ್ರ ಬಜೆಟ್ ಬಳಿಕವೂ ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆ ಬಿಸಿ ತಗ್ಗಿಲ್ಲ.  ಇದೀಗ ಅಸ್ಸಾಂ ಸರ್ಕಾರ ಪೆಟ್ರೋಲ್-ಡೀಸೆಲ್ ಪ್ರತಿ ಲೀಟರ್ ಮೇಲೆ 5 ರೂಪಾಯಿ ಕಡಿತಗೊಳಿಸಿದೆ. ಈ ಕುರಿತ ವಿವರ ಇಲ್ಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇತ್ತ ಜನಸಾಮಾನ್ಯರ ಬದುಕು ದುಸ್ತರವಾಗಿದೆ.
undefined
ಒಂದಂಡೆ ಇಂಧನ ಬೆಲೆ ಏರಿಕೆಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಕುರಿತು ಗಂಭೀರವಾಗಿ ಆಲೋಚಿಸಿದ ಕುರಿತು ಕಾಣುತ್ತಿಲ್ಲ. ಆದರೆ ಅಸ್ಸಾಂ ಸರ್ಕಾರ ಬೆಲೆ ಇಳಿಕೆ ಮಾಡಿ ಬಂಪರ್ ಗಿಫ್ಟ್ ನೀಡಿದೆ.
undefined
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಸ್ಸಾಂ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ತೆಗೆದುಹಾಕಲಾಗಿದೆ. ಇದರಿಂದ ಇಂಧನ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 5 ರೂಪಾಯಿ ಇಳಿಕೆಯಾಗಲಿದೆ.
undefined
ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಕೊರೋನಾ ಕಾಲದಲ್ಲಿ ಹಾಕಲಾಗಿದ್ದ ಹೆಚ್ಚುವರಿ ಸೆಸ್ ತೆಗೆದು ಹಾಕುವುದಾಗಿ ಸ್ಪಷ್ಟಪಡಿಸಿದ್ದಾರೆ.
undefined
ಕೊರೋನಾ ವೈರಸ್ ಸಂದರ್ಭದಲ್ಲಿ ಅಸ್ಸಾಂ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಮದ್ಯದ ಮೇಲೆ ಹೆಚ್ಚುವರಿ ಸೆಸ್ ಹಾಕಲಾಗಿತ್ತು. ಇದೀಗ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಜನಜೀವನ ಸಹಸಸ್ಥಿತಿಗೆ ಬಂದಿದೆ. ಹೀಗಾಗಿ ಹೆಚ್ಚುವರಿ ಸೆಸ್ ತೆಗೆದುಹಾಕಲಾಗಿದೆ ಎಂದರು.
undefined
ಈ ನಿರ್ಧಾರದಿಂದ ಅಸ್ಸಾಂನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 5 ರೂಪಾಯಿ ಕಡಿತಗೊಳ್ಳಲಿದೆ. ಫೆ.12ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ
undefined
ಅಸ್ಸಾಂ ನಿರ್ಧಾರದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ನಿರೀಕ್ಷೆಗಳು ಗರಿಗೆದರಿದೆ. ಕಾರಣ ಮಾರ್ಚ್ ಮೊದಲ ವಾರದಲ್ಲಿ ಕರ್ನಾಟಕ ಬಜೆಟ್ ಮಂಡಣೆಯಾಗಲಿದೆ.
undefined
ದೇಶಾದ್ಯಂತ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 91.09 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ 83.09 ರೂಪಾಯಿ ಆಗಿದೆ.
undefined
click me!