ಚಿನ್ನದ ಬೆಲೆ ಬರೋಬ್ಬರಿ 4,150 ರೂಪಾಯಿ ಇಳಿಕೆ, ಕಳೆದ 4 ದಿನದಲ್ಲಿ ಕೈಗೆಟುಕುವ ದರ

Published : Apr 09, 2025, 10:49 PM ISTUpdated : Apr 09, 2025, 10:54 PM IST

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಷೇರುಮಾರುಕಟ್ಟೆ ಕುಸಿದ ಬೆನ್ನಲ್ಲೂ ಚಿನ್ನದ ಬೆಲೆಯೂ ಕುಸಿತಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ವಿಶೇಷ ಅಂದರೆ ಬರೋಬ್ಬರಿ 4,150 ರೂಪಾಯಿ ಇಳಿಕೆಯಾಗಿದೆ.  

PREV
15
ಚಿನ್ನದ ಬೆಲೆ ಬರೋಬ್ಬರಿ 4,150 ರೂಪಾಯಿ ಇಳಿಕೆ, ಕಳೆದ 4 ದಿನದಲ್ಲಿ ಕೈಗೆಟುಕುವ ದರ

ಒಂದೆಡೆ ಷೇರುಮಾರುಕಟ್ಟೆ ಕುಸಿತ ಕಂಡು ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಪ್ರತಿ ದಿನ ಏರಿಕೆ ದಿಕ್ಕಿನಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಸಾಗಿದೆ. ವಿಶೇಷ ಅಂದರೆ ಇದೀಗ 10 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ನೂರು, ಇನ್ನೂರು ಅಲ್ಲ, ಕಳೆದ ನಾಲ್ಕು ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 4,150 ರೂಪಾಯಿ ಇಳಿಕೆಯಾಗಿದೆ. 
 

25

ಚಿನ್ನ ಅತೀ ದುಬಾರಿ. ಹಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನ ಖರೀದಿ, ಆಭರಣ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಪ್ರತಿ ದಿನ ಹೆಚ್ಚಾಗುತ್ತಲೇ ಹೋಗಿದೆ. ಇದರ ಪರಿಣಾಮ ಚಿನ್ನದ ಬೆಲೆಯೂ ದುಬಾರಿಯಾಗುತ್ತಾ ಸಾಗಿದೆ. ಪ್ರತಿ ದಿನ ಚಿನ್ನದ ಬೆಲೆಯಲ್ಲಿ ದಾಖಲೆ ನಿರ್ಮಾವಾಗುತ್ತಿತ್ತು. ಇದೀಗ ಬೆಲೆ ಇಳಿಕೆಯಲ್ಲೂ ದಾಖಲೆ ನಿರ್ಮಾಣವಾಗಿದೆ. 

ಇದನ್ನೂ ಓದಿ: ಚಿನ್ನದ ಬೆಲೆ ಬರೋಬ್ಬರಿ 34,000ರೂಗೆ ಇಳಿಕೆ ಸಾಧ್ಯತೆ, ಅಮೆರಿಕ ತಜ್ಞರ ಸೂಚನೆ

35

ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ 4,150 ರೂಪಾಯಿ ಇಳಿಕೆಯಾಗಿದೆ. ಷೇರುಮಾರುಕಟ್ಟೆಯಲ್ಲಿನ ಕುಸಿತು. ರಿಟೇಲ್ ಹೂಡಿಕೆದಾರರ ನಿರ್ಧಾರಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಭಾರತದಲ್ಲಿ ಸರಾಸರಿ 90,200 ರೂಪಾಯಿ ಆಗಿದೆ. ಇದು ಎಪ್ರಿಲ್ 3 ರಂದು ಇದೇ 10 ಗ್ರಾಂ ಚಿನ್ನದ ಬೆಲೆ ಭಾರತದಲ್ಲಿ ಸರಾಸರಿ 94,350 ರೂಪಾಯಿ ಆಗಿತ್ತು. ಇದು ಸಾರ್ವಕಾಲಿಕ ಗರಿಷ್ಠ ಬೆಲೆ ಅನ್ನೋ ದಾಖಲೆ ಬರೆದಿತ್ತು.

45

ಇಂದು ಬೆಂಗಳೂರಿನಲ್ಲಿ 19 ಕಾರಟ್ ಚಿನ್ನದ ಬೆಲೆ 6,783 ರೂಪಾಯಿ ಪ್ರತಿ ಗ್ರಾಂಗೆ ಆಗಿತ್ತು. ಏಪ್ರಿಲ್ 8 ರಂದು ಇದೇ 1 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 6,730 ರೂಪಾಯಿ ಇತ್ತು. ಇನ್ನು 22 ಕಾರಟ್ 1 ಗ್ರಾಂ ಚಿನ್ನಕ್ಕೆ 8,290 ರೂಪಾಯಿ ಆಗಿದೆ. ಇನ್ನು 24 ಕಾರೆಟ್ 1 ಗ್ರಾಂ ಚಿನ್ನಕ್ಕೆ 9,044 ರೂಪಾಯಿ ಆಗಿದೆ. ಇನ್ನು ಕಲೆ ದಿನಗಳ ಹಿಂದೆ ಇದೇ 24 ಕಾರಟ್ 1 ಗ್ರಾಂ ಚಿನ್ನದ ಬೆಲೆ 9,137 ರೂಪಾಯಿ ಆಗಿತ್ತು.  
 

55

ಚಿನ್ನದ ಬೆಲೆ ಸರಾಸರಿಯಲ್ಲಿ ಇಳಿಕೆಯಾಗಿದೆ. ಇದು ಹಲವರಿಗೆ ಸಮಾಧಾನ ತರಿಸಿದೆ. ಆದರೆ ಇತ್ತ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದು ಜನರನ್ನು ಹೈರಾಣಾಗುವಂತೆ ಮಾಡಿದೆ. ಇತ್ತ ಚಿನ್ನದ ಬೆಲೆ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ 90 ಸಾವಿರ ಗಡಿಯಲ್ಲಿದೆ. ತೀರಾ ಕಡಿಮೆಯಾಗುವ ಸಾಧ್ಯತೆಗಳು ಸದ್ಯಕ್ಕಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

Read more Photos on
click me!

Recommended Stories