ಡೊನಾಲ್ಡ್ ಟ್ರಂಪ್ ಆ ಒಂದು ಹೇಳಿಕೆ ಬೆನ್ನಲ್ಲೇ ದಿಢೀರ್ ಏರಿಕೆ ಕಂಡ ಚಿನ್ನದ ಬೆಲೆ! ಬಂಗಾರ ಖರೀದಿಸುವ ಮುನ್ನ ಈ ಸ್ಟೋರಿ ನೋಡಿ

Published : May 21, 2026, 01:42 PM IST

ಬೆಂಗಳೂರು: ಚಿನ್ನದ ಬೆಲೆ ಇಳಿಯಿತು ಅಂದುಕೊಳ್ಳುವಷ್ಟರಲ್ಲೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಡೊನಾಲ್ಡ್ ಟ್ರಂಪ್ ಅವರ ಒಂದು ಹೇಳಿಕೆ ಇಡೀ ಮಾರುಕಟ್ಟೆಯನ್ನೇ ಅಲುಗಾಡಿಸಿದೆ. ಚಿನ್ನದ ದರ ಮತ್ತೆ ಗಗನಕ್ಕೇರಿದ್ದು, ಖರೀದಿದಾರರು ಶಾಕ್ ಆಗಿದ್ದಾರೆ. 

PREV
16
ಚಿನ್ನ ಖರೀದಿಸುವವರಿಗೆ ಮತ್ತೆ ಶಾಕ್

ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆಗಳು, ಇಂದು ಮತ್ತೆ ಏರಿಕೆಯಾಗಿ ಖರೀದಿದಾರರಿಗೆ ಶಾಕ್ ನೀಡಿವೆ.

26
ಯುದ್ದದ ಪರಿಣಾಮ ಚಿನ್ನದ ಬೆಲೆ ಹೆಚ್ಚಲು ಕಾರಣ

ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತು ಡಾಲರ್ ಮೌಲ್ಯದಲ್ಲಿನ ಬದಲಾವಣೆಗಳು ಚಿನ್ನದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

36
ಆತಂಕ ಹೆಚ್ಚಿಸಿದ ಟ್ರಂಪ್ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ವಿಶ್ವ ಮಾರುಕಟ್ಟೆಯ ಗಮನ ಸೆಳೆದಿವೆ. ಇರಾನ್ ಜೊತೆಗಿನ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಅವರು ಘೋಷಿಸಿದ್ದಾರೆ. ಆದರೆ, ಒಪ್ಪಂದ ಆಗದಿದ್ದರೆ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಟೆನ್ಷನ್ ಹೆಚ್ಚಿಸಿದೆ. ಇದರಿಂದ ಹೂಡಿಕೆದಾರರು ಮತ್ತೆ ಚಿನ್ನದತ್ತ ಮುಖ ಮಾಡಿದ್ದಾರೆ.

46
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 490 ರುಪಾಯಿ ಏರಿಕೆ

ಬೆಂಗಳೂರಿನಲ್ಲಿಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 490 ರುಪಾಯಿ ಏರಿಕೆಯಾಗಿದೆ. ಈ ಮೂಲಕ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ ಬರೋಬ್ಬರಿ 15,993 ರುಪಾಯಿಗೆ ಬಂದು ತಲುಪಿದೆ.

56
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 450 ರುಪಾಯಿ ಏರಿಕೆ

ಇನ್ನೊಂದೆಡೆ ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 450 ರುಪಾಯಿ ಏರಿಕೆ ಕಂಡಿದೆ. ಇಂದು 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,660 ರುಪಾಯಿಗಳಾಗಿವೆ.

66
ಬೆಳ್ಳಿ ಬೆಲೆಯಲ್ಲೂ ಏರಿಕೆ

ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5 ಸಾವಿರ ರುಪಾಯಿ ಏರಿಕೆಯಾಗಿದೆ. ಮೇ 21ರಂದು ಒಂದು ಕೆಜಿ ಬೆಳ್ಳಿಯ ಬೆಲೆ 2,85,000 ರುಪಾಯಿಗಳಾಗಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories