ಮೂರು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ದರ! ಕರ್ನಾಟಕದಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?

Published : Apr 06, 2026, 11:24 AM IST

ಬೆಂಗಳೂರು: ಮದುವೆ ಶುಭ ಸಮಾರಂಭಗಳು ಭರ್ಜರಿಯಾಗಿ ಸಾಗುತ್ತಿವೆ. ಹೀಗಿರುವಾಗಲೇ ಬರೋಬ್ಬರಿ ಮೂರು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಸಾಮಾನ್ಯ ವರ್ಗದ ಆಭರಣ ಗ್ರಾಹಕರ ಮುಖದಲ್ಲಿ ಕೊಂಚ ಸಮಾಧಾನ ತರಿಸಿದೆ. ಏಪ್ರಿಲ್ 6ರಂದು ಕರ್ನಾಟಕದಲ್ಲಿ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ ನೋಡೋಣ ಬನ್ನಿ.

PREV
16
ಏಪ್ರಿಲ್ ಒಂದರಂದು ಭಾರೀ ಏರಿಕೆಯಾಗಿದ್ದ ಚಿನ್ನದ ಬೆಲೆ

ಏಪ್ರಿಲ್‌ ಒಂದರಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 15,295 ಹಾಗೂ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,020 ರುಪಾಯಿ ತಲುಪಿತ್ತು. ಆದರೆ ಇದಾದ ಬಳಿಕ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಿದ್ದವು.

26
ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರ

ಇನ್ನು ಏಪ್ರಿಲ್ 03ರಂದು 24 ಕ್ಯಾರಟ್ ಒಂದು ಚಿನ್ನದ ಬೆಲೆ 15,093 ರುಪಾಯಿಗಳಾಗಿತ್ತು. ಅದೇ ರೀತಿ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 13,835 ರುಪಾಯಿಗೆ ಬಂದು ನಿಂತಿತ್ತು. ಇದಾದ ಬಳಿಕ ಕಳೆದ ಮೂರು ದಿನವೂ ಚಿನ್ನದ ಬೆಲೆಯು ಸ್ಥಿರವಾಗಿತ್ತು. ಚಿನ್ನದ ಬೆಲೆಯಲ್ಲಿ ಯಾವುದೇ ಇಳಿಕೆಯಾಗಿರಲಿಲ್ಲ.

36
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1800 ರುಪಾಯಿ ಕುಸಿತ

ಇದೀಗ ಏಪ್ರಿಲ್ 06ರ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,800 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,913 ರುಪಾಯಿಗಳಾಗಿವೆ.

46
22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 1650 ರುಪಾಯಿ ಕುಸಿತ

ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1650 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,670 ರುಪಾಯಿಗಳಾಗಿವೆ.

56
ವಾರದ ಮೊದಲ ದಿನವೇ ಕುಸಿದ ಚಿನ್ನದ ಬೆಲೆ

ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿರುವುದು ಆಭರಣ ಖರೀದಿಸುವವರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಾಣುತ್ತದೆಯೋ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

66
ಬೆಳ್ಳಿ ಬೆಲೆಯಲ್ಲಿ ಸ್ಥಿರ

ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆಯಾಗಲಿ ಅಥವಾ ಏರಿಕೆಯಾಗಲಿ ಕಂಡಿಲ್ಲ. ಕಳೆದ ಐದು ದಿನಗಳಿಂದಲೂ ಒಂದು ಕೆಜಿ ಬೆಳ್ಳಿಯ ಬೆಲೆ 2,50,000 ರುಪಾಯಿನಲ್ಲಿಯೇ ಮುಂದುವರೆದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories