ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಸೋಮವಾರ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಸತತವಾಗಿ ಇಳಿಕೆ ಹಾದಿ ಕಂಡಿರುವ ಚಿನ್ನದ ಬೆಲೆ ಇಂದು ಮಧ್ಯಾಹ್ನದ ವೇಳೆಗೆ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಇಂದು ಬೆಳಗ್ಗೆಯಿಂದಲೇ ಚಿನ್ನದ ಬೆಲೆ ಇಳಿಮುಖ ಮಾಡಿತ್ತು. ಇದೀಗ ಮಧ್ಯಾಹ್ನದ ವೇಳೆಗೆ ಮತ್ತಷ್ಟು ಇಳಿಕೆ ಕಂಡಿದೆ.
26
24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಮೇಲೆ 1032 ರುಪಾಯಿ ಕುಸಿತ
ಹೌದು, ಮಾರ್ಚ್ 23ರ ಮಧ್ಯಾಹ್ನ 2.30ರ ವೇಳೆಗೆ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 1032 ರುಪಾಯಿ ಇಳಿಕೆ ಕಂಡಿದೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡುವವರು ಆಲೋಚನೆ ಮಾಡಿ ಹೂಡಿಕೆ ಮಾಡುವಂತೆ ಮಾಡಿದೆ.
36
24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 10,320 ರುಪಾಯಿ ಕುಸಿತ
ಇದರರ್ಥ ಸೋಮವಾರ 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 10,320 ರುಪಾಯಿ ಇಳಿಕೆಯಾದಂತೆ ಆಗಿದೆ. ಇನ್ನು 100 ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ 1,03,200 ರುಪಾಯಿ ಇಳಿಕೆಯಾದಂತೆ ಆಗಿದೆ.
ಇನ್ನು ಇದೇ ವೇಳೆ 22 ಕ್ಯಾರಟ್ ಅಭರಣ ಚಿನ್ನದ ಬೆಲೆಯಲ್ಲೂ ಇಂದು ಭಾರೀ ಇಳಿಕೆ ಕಂಡಿದೆ. ಇಂದು ಬೆಳಗ್ಗೆ ಪ್ರತಿ ಗ್ರಾಮ್ ಮೇಲೆ 545 ರುಪಾಯಿ ಇಳಿಕೆಯಾಗಿತ್ತು. ಇದೀಗ ಮಧ್ಯಾಹ್ನದ ವೇಳೆಗೆ ಪ್ರತಿ ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 945 ರುಪಾಯಿ ಇಳಿಕೆಯಾಗಿದೆ.
56
22 ಕ್ಯಾರಟ್ 10 ಗ್ರಾಮ್ ಮೇಲೆ 9450 ರುಪಾಯಿ ಕುಸಿತ
ಇದರರ್ಥ 10 ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ ಸುಮಾರು 9450 ರುಪಾಯಿ ಇಳಿಕೆ ಹಾಗೆಯೇ 100 ಗ್ರಾಮ್ 22 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 94500 ರುಪಾಯಿ ಇಂದು ಒಂದೇ ದಿನ ಇಳಿಕೆಯಾಗಿದೆ.
66
ಬೆಳ್ಳಿ ಬೆಲೆಯಲ್ಲಿ 15,000 ರುಪಾಯಿ ಕುಸಿತ
ಇನ್ನು ಬೆಳ್ಳಿಯ ಬೆಲೆಯೂ ಇಂದು ಒಂದೇ ದಿನ 15,000 ರುಪಾಯಿ ಇಳಿಕೆಯಾಗಿತ್ತು. ಮಧ್ಯಾಹ್ನದ ವೇಳೆಗೂ ಅದೇ ಬೆಲೆ ಸ್ಥಿರವಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,30,000 ರುಪಾಯಿಗಳಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.