ಸತತ 2 ದಿನ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಇವತ್ತಿನ ರೇಟ್ ಏನಿದೆ? ಬೆಳ್ಳಿ ಬೆಲೆಯಲ್ಲಿ ಮತ್ತೆ ಕುಸಿತ!

Published : Feb 18, 2026, 11:29 AM IST

ಬೆಂಗಳೂರು: ಮದುವೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೆ ಕಳೆದೆರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರವಾದ ಇಳಿಕೆ ಕಂಡಿತ್ತು. ಆದರೆ ಫೆಬ್ರವರಿ 18ರಂದು ಚಿನ್ನದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆಯಲ್ಲಿ ಎಷ್ಟು ಕುಸಿತ ಕಂಡಿದೆ ಎನ್ನುವುದನ್ನು ನೋಡೋಣ ಬನ್ನಿ. 

PREV
16
ಸತತ ಎರಡು ದಿನ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ

ಹತ್ತು ಗ್ರಾಮ್ ಚಿನ್ನಕ್ಕೆ ಒಂದೂವರೆ ಲಕ್ಷ ಗಡಿದಾಟಿದ ಬೆನ್ನಲ್ಲೇ ಸಾಮಾನ್ಯ ಜನರು 'ಚಿನ್ನ ಎನ್ನುವ ಮುನ್ನ' ಎಂದು ಚಿಂತಿಸುವಂತಾಗಿತ್ತು. ಆದರೆ ಕಳೆದೆರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡಿದ್ದು, ಚಿನ್ನ ಖರೀದಿಸುವವರ ಮನದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿತ್ತು.

26
ಚಿನ್ನ ಖರೀದಿಸುವವರಿಗೆ ಇಂದಿನ ಗೋಲ್ಡ್ ರೇಟ್ ಮಾಹಿತಿ

ಕಳೆದ ಎರಡು ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ ಬರೋಬ್ಬರಿ 3,000 ಸಾವಿರ ರುಪಾಯಿ ಕುಸಿತ ಕಂಡಿತ್ತು. ಹೀಗಾಗಿ ಇಂದೂ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ನಿರಾಸೆ ಎದುರಾಗಿದೆ.

36
24 ಕ್ಯಾರಟ್ ಚಿನ್ನದ ಇಂದಿನ ರೇಟ್ ಎಷ್ಟು?

ಹೌದು, ಇಂದು 24 ಕ್ಯಾರಟ್ ಹಾಗೂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಫೆಬ್ರವರಿ 18ರಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,420 ರುಪಾಯಿಗಳಾಗಿದ್ದು, ನಿನ್ನೆಯ ರೇಟ್ ಇಂದೂ ಮುಂದುವರೆದಿದೆ.

46
22 ಕ್ಯಾರಟ್ ಚಿನ್ನದ ಬೆಲೆಯ ರೇಟ್ ಎಷ್ಟು?

ಇನ್ನೊಂದೆಡೆ ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಮ್‌ 22 ಕ್ಯಾರಟ್ ಚಿನ್ನದ ಬೆಲೆ 14,135 ರುಪಾಯಿಗಳಾಗಿದೆ.

56
ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್

ಇನ್ನೊಂದಡೆ ಚಿನ್ನದ ಬೆಲೆಯು ಇಂದು ಸ್ಥಿರವಾಗಿದ್ದರೂ, ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿರುವುದು ಖರೀದಿಸುವವರ ಮುಖದಲ್ಲಿ ಒಂದಷ್ಟು ಮಂದಹಾಸ ಮೂಡುವಂತೆ ಮಾಡಿದೆ.

66
ಬೆಳ್ಳಿ ಬೆಲೆಯಲ್ಲಿ ₹5000 ಕುಸಿತ

ಫೆಬ್ರವರಿ 17ರಂದು ಪ್ರತಿ ಕೆಜಿ 2,60,000 ರುಪಾಯಿಯಾಗಿತ್ತು. ಆದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5 ಸಾವಿರ ರುಪಾಯಿ ಇಳಿಕೆ ಕಂಡಿದ್ದು, ಫೆಬ್ರವರಿ 18ರ ಬೆಳಗ್ಗೆ ಒಂದು ಕೆಜಿ ಬೆಳ್ಳಿಯು 2,55,000 ರುಪಾಯಿಗೆ ಮಾರಾಟವಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories