ಚಿನ್ನದ ಬೆಲೆಯಲ್ಲಿ ಮಹಾ ಕುಸಿತ! ಇಂದು ಒಂದೇ ದಿನ 3000 ರುಪಾಯಿ ದಿಢೀರ್ ಇಳಿಕೆ! ಒಂದು ಗ್ರಾಮ್ ಗೋಲ್ಡ್ ರೇಟ್‌ ಎಷ್ಟು ಗೊತ್ತಾ?

Published : Jun 06, 2026, 11:39 AM IST

Gold Rate Today: ಕಳೆದ ಕೆಲದಿನಗಳಿಂದ ಸ್ವಲ್ಪ ಸ್ವಲ್ಪವೇ ಇಳಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡಿದೆ. ಅಂದ ಹಾಗೆ ಜೂನ್ 06ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ. 

PREV
16
ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ

ಜೂನ್ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಹಂತ ಹಂತವಾಗಿ ಸ್ವಲ್ಪಮಟ್ಟಿಗಿನ ಇಳಿಕೆ ಕಂಡು ಬಂದಿತ್ತು. ಇದೀಗ ಜೂನ್ 06ರಂದು ಒಂದೇ ದಿನ ಗೋಲ್ಡ್‌ ರೇಟ್‌ನಲ್ಲಿ ಭಾರೀ ಇಳಿಕೆ ಕಂಡಿದ್ದು, ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

26
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 3000 ರುಪಾಯಿ ಕುಸಿತ

ಹೌದು, ಕಳೆದ ಮೇ 30ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 15784 ರುಪಾಯಿ ಇತ್ತು. ಇದೀಗ ಇಂದು 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3000 ರುಪಾಯಿ ಇಳಿಕೆ ಕಂಡಿದೆ. ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,273 ರುಪಾಯಿಗೆ ಇಳಿಕೆ ಕಂಡಿದೆ.

36
14 ಸಾವಿರ ರುಪಾಯಿ ತಲುಪಿದ 22 ಕ್ಯಾರಟ್ ಗೋಲ್ಡ್ ರೇಟ್

ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಸಹಾ ಭಾರೀ ಇಳಿಕೆ ಕಂಡಿದೆ. ಇದೀಗ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2750 ರುಪಾಯಿ ಇಳಿಕೆ ಕಂಡಿದ್ದು, ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,000 ರುಪಾಯಿಗಳಾಗಿದೆ.

46
ಕಳೆದ ಎಂಟು ದಿನಗಳಲ್ಲಿ 4910 ರುಪಾಯಿ ಕುಸಿತ

ಕಳೆದ ಎಂಟು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 4,910 ರುಪಾಯಿ ಇಳಿಕೆಯಾಗಿದೆ. ಇನ್ನೊಂದೆಡೆ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ 4500 ರುಪಾಯಿ ಇಳಿಕೆ ಕಂಡಂತೆ ಆಗಿದೆ.

56
ಬೆಳ್ಳಿ ಬೆಲೆಯಲ್ಲೂ ಭಾರೀ ಕುಸಿತ

ಇನ್ನು ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದೆ.

66
ಆಭರಣ ಗ್ರಾಹಕರ ಮುಖದಲ್ಲಿ ಮಂದಹಾಸ

ಒಟ್ಟಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡಿರುವುದು ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಈ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಾಣಲಿದೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories