frooti Price in America : ಬೇಸಿಗೆ ಬರ್ತಿದ್ದಂತೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಾಗುತ್ತೆ. ಜನರು ಟೆಟ್ರಾ ಪ್ಯಾಕ್ ಜ್ಯೂಸ್ ಗಳನ್ನು ಹೆಚ್ಚು ಸೇವನೆ ಮಾಡ್ತಾರೆ. ಭಾರತದಲ್ಲಿ 10 ರೂಪಾಯಿಗೆ ಸಿಗುವ ಫ್ರೂಟಿಗೆ ಬೇಡಿಕೆ ಹೆಚ್ಚಿದೆ. ಅದೇ ಅಮೆರಿಕಾದಲ್ಲಿ ಇದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಭಾರತದಲ್ಲಿ ಜನರು ಅತಿ ಇಷ್ಟಪಡುವ ಪಾನೀಯಗಳಲ್ಲಿ ಫ್ರೂಟಿ ಕೂಡ ಒಂದು. ಐದು, ಹತ್ತು ರೂಪಾಯಿಗೆ ಈ ಪ್ರೂಟಿ ಟೆಟ್ರಾ ಪ್ಯಾಕ್ ಲಭ್ಯವಿದೆ. ದೊಡ್ಡ ಬಾಟಲಿಯಲ್ಲಿ ಲೀಟರ್ ಗಟ್ಟಲೆ ಫ್ರೂಟಿಯನ್ನೂ ನೀವು ಖರೀದಿ ಮಾಡ್ಬಹುದು. ಬೇಸಿಗೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಹತ್ತು ರೂಪಾಯಿಗೆ ಸಿಗುವ ಈ ಫ್ರೂಟಿಯನ್ನು ನೀವು ಹೋಲ್ಸೇಲ್ ನಲ್ಲಿ ಖರೀದಿ ಮಾಡಿದ್ರೆ ಅದ್ರಲ್ಲೂ ನಿಮಗೆ ಡಿಸ್ಕೌಂಟ್ ಲಭ್ಯವಿದೆ. ಅಷ್ಟೇ ಅಲ್ಲ 10 ಪ್ಯಾಕೆಟ್ ಗೆ ಶೇಕಡಾ 5 ರೂಪಾಯಿ ಡಿಸ್ಕೌಂಟ್ ನೀಡಿ ಆನ್ಲೈನ್ ಕಂಪನಿಗಳು ಮಾರಾಟ ಮಾಡ್ತವೆ.
26
ಅಮೆರಿಕಾದಲ್ಲಿ ಫ್ರೂಟಿ
ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರಿಗೂ ಫ್ರೂಟಿ ಇಷ್ಟವಾಗುತ್ತದೆ. ಸಭೆ, ಸಮಾರಂಭಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಫ್ರೂಟಿ ಲಭ್ಯವಿದೆ. ಅಮೆರಿಕಾದಲ್ಲೂ ನಿಮಗೆ ಫ್ರೂಟಿ ಸಿಗುತ್ತೆ. ಆದ್ರೆ ಅದ್ರ ಬೆಲೆ ಮಾತ್ರ ಭಾರತಕ್ಕಿಂತ 8 – 10 ಪಟ್ಟು ಹೆಚ್ಚಿದೆ.
36
ಅಮೆರಿಕಾದಲ್ಲಿ ಫ್ರೂಟಿ ಬೆಲೆ
ಅಮೆರಿಕಾದಲ್ಲಿ ಭಾರತ ಅಥವಾ ಏಷ್ಯಾ ಅಂಗಡಿಗಳಲ್ಲಿ ನಿಮಗೆ ಫ್ರೂಟಿ ಸಿಗುತ್ತೆ. ಅಲ್ಲಿ ನೀವು ಒಂದು ಫ್ರೂಟಿ ಪ್ಯಾಕ್ ಖರೀದಿ ಮಾಡೋಕೆ 80 ರಿಂದ 150 ರೂಪಾಯಿ ನೀಡ್ಬೇಕು. ಇದು ಸಾಮಾನ್ಯ ಸಂಗತಿ. ಭಾರತದಲ್ಲಿ ಅತಿ ಕಡಿಮೆಗೆ ಸಿಗುವ ಪದಾರ್ಥ, ವಸ್ತುಗಳು ವಿದೇಶದಲ್ಲಿ ದುಬಾರಿ.
ಭಾರತದಲ್ಲಿ 10 ರೂಪಾಯಿಗೆ ಸಿಗುವ ಜ್ಯೂಸ್ ಅಮೆರಿಕಾದಲ್ಲಿ 80 ರಿಂದ 150 ರೂಪಾಯಿಗೆ ಮಾರಾಟವಾಗಲು ಕಾರಣ ಏನು ಎನ್ನುವ ಪ್ರಶ್ನೆ ಕಾಡೋದು ಸಹಜ. ಇದಕ್ಕೆ ಬರೀ ಒಂದೇ ಕಾರಣವಿಲ್ಲ. ನಾನಾ ಕಾರಣಗಳಿಂದಾಗಿ ಜ್ಯೂಸ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಲಿಕೆ ಮಾಡಿದ್ರೆ ಭಿನ್ನವಾಗಿರುತ್ತದೆ.
56
ತೆರಿಗೆ ಸೇರಿದಂತೆ ಶುಲ್ಕ
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅದನ್ನು ರಫ್ತು ಮಾಡುವ ಖರ್ಚು ಹೆಚ್ಚಿರುತ್ತದೆ. ಇದ್ರ ಜೊತೆ ತೆರಿಗೆ ಕಟ್ಟಬೇಕು. ದೇಶ ಬದಲಾವಣೆಯಿಂದ ಇತರ ಖರ್ಚುಗಳು ಹೆಚ್ಚಿರುತ್ತವೆ. ಹಾಗಾಗಿ ತಯಾರಿಸಿದ ದೇಶಕ್ಕಿಂತ ಮಾರಾಟವಾಗ್ತಿರುವ ದೇಶದಲ್ಲಿ ವಸ್ತುವಿನ ಬೆಲೆ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ.
66
ಇದೂ ಒಂದು ಕಾರಣ
ಪ್ರತಿಯೊಂದ ದೇಶ ಅದರದೇ ಆದ ಬಾಡಿಗೆ ರೂಲ್ಸ್ ಹೊಂದಿರುತ್ತದೆ. ಅಂಗಡಿಗಳ ಬಾಡಿಗೆ ಹೆಚ್ಚಾದಂತೆ ಅಂಗಡಿ ಮಾಲೀಕರು ವಸ್ತುಗಳ ಬೆಲೆ ಏರಿಸ್ತಾರೆ. ಅಮೆರಿಕಾದಲ್ಲಿ ಅಂಗಡಿ ಬಾಡಿಗೆ, ಕರೆಂಟ್ ಬಿಲ್ ಹಾಗೂ ಕಾರ್ಮಿಕರಿಗೆ ನೀಡುವ ಖರ್ಚು ಹೆಚ್ಚು. ಈ ಎಲ್ಲ ಖರ್ಚನ್ನು ಸರಿದೂಗಿಸಲು ಅಂಗಡಿ ಮಾಲೀಕ ಬೆಲೆ ಏರಿಕೆ ಮಾಡೋದು ಅನಿರ್ವಾಯ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.