₹175450000000 ಕೋಟಿ ಸಂಪತ್ತಿನಿಂದ ಶೂನ್ಯಕ್ಕೆ ಕುಸಿದ ಕಂಪನಿ! ಸ್ಟಾರ್ಟ್ಅಪ್‌ ಹೀರೋ Byju Raveendran ಗೆ ಏನಾಯ್ತು?

Published : May 27, 2026, 11:27 AM IST

ಒಂದು ಕಾಲದಲ್ಲಿ ಭಾರತದ ಅತಿ ದೊಡ್ಡ ಎಡ್ಟೆಕ್ ಕಂಪನಿಯಾಗಿದ್ದ BYJU’S ಇಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಶಾರುಖ್ ಖಾನ್, ಲಿಯೋನೆಲ್ ಮೆಸ್ಸಿ ಜೊತೆ ಜಾಗತಿಕ ಗುರುತು ಪಡೆದ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್‌ಗೆ ಇದೀಗ ಜೈಲು ಶಿಕ್ಷೆ ಸುದ್ದಿ ಶಾಕ್ ನೀಡಿದೆ. ಏನಾಯ್ತು?

PREV
14
ಸ್ಟಾರ್ಟ್ಅಪ್‌ ಹೀರೋ Byju Raveendran ಗೆ ಏನಾಯ್ತು?

ಒಂದು ಕಾಲದಲ್ಲಿ ಭಾರತದ ಸ್ಟಾರ್ಟ್ಅಪ್‌ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಬೈಜು ರವೀಂದ್ರನ್ (Byju Raveendran) ಅವರಿಗೆ ಇದೀಗ ಸಿಂಗಾಪುರ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. 2024ರಲ್ಲಿ ನ್ಯಾಯಾಲಯ ನೀಡಿದ್ದ ಹಲವು ಕಾನೂನು ಆದೇಶಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಕಂಪನಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಕಾನೂನು ವೆಚ್ಚಗಳನ್ನು ನೀಡಲು ಕೂಡ ಅವರಿಗೆ ಸೂಚನೆ ನೀಡಲಾಗಿತ್ತು.

24
BYJU'S: ಸಣ್ಣ ಆರಂಭದಿಂದ ವಿಶ್ವ ಮಟ್ಟದ ಕಂಪನಿ ಕಟ್ಟಿದ್ದ ರವೀಂದ್ರನ್

2011ರಲ್ಲಿ ಆರಂಭವಾದ BYJU'S ಕೆಲವೇ ವರ್ಷಗಳಲ್ಲಿ ಭಾರತದ ಅತ್ಯಂತ ಮೌಲ್ಯಯುತ ಎಡ್ಟೆಕ್ ಕಂಪನಿಯಾಗಿ ಬೆಳೆದಿತ್ತು. ಸುಮಾರು 22 ಬಿಲಿಯನ್ ಡಾಲರ್ ಮೌಲ್ಯ ತಲುಪಿದ್ದ ಕಂಪನಿ, ಆನ್‌ಲೈನ್ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಮಾಡಿತು. ಭಾರತ ಮಾತ್ರವಲ್ಲ, ವಿದೇಶಗಳಲ್ಲಿಯೂ ಕಂಪನಿ ವೇಗವಾಗಿ ಅಕ್ರಮಣಕಾರಿಯಾಗಿ ಬೆಳೆದು ನಿಂತಿತು

34
ಶಾರುಖ್‌, ಮೆಸ್ಸಿ ಜೊತೆ ಬೈಜುಸ್‌ ಜಾಗತಿಕ ಪ್ರಚಾರ

ಕಂಪನಿಯ ಪ್ರಚಾರಕ್ಕಾಗಿ ದೊಡ್ಡ ಸ್ಟಾರ್‌ಗಳಾದ ಶಾರುಖ್ ಖಾನ್ (Shah Rukh Khan)ಲಿಯೊನೆಲ್ ಮೆಸ್ಸಿ (Lionel Messi) ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್‌ಗಳಾಗಿ ನೇಮಿಸಲಾಗಿತ್ತು. ಭಾರತದಲ್ಲಿ ಶಾರುಖ್‌ ಖಾನ್ ಹಲವು ವರ್ಷಗಳ ಕಾಲ ಬೈಜುಸ್‌ ಪ್ರಚಾರ ಮಾಡಿದ್ದರು. ನಂತರ 'Education for All' ಅಭಿಯಾನಕ್ಕಾಗಿ ಮೆಸ್ಸಿಯನ್ನು ಜಾಗತಿಕ ರಾಯಭಾರಿಯಾಗಿ ಘೋಷಿಸಲಾಗಿತ್ತು. ಈ ಒಪ್ಪಂದಕ್ಕೆ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು ಎನ್ನಲಾಗಿದೆ.

44
₹175450000000 ಕೋಟಿ ಸಂಪತ್ತಿನಿಂದ ಶೂನ್ಯಕ್ಕೆ ಕುಸಿದ Byjus

ಒಮ್ಮೆ ಬೈಜು ರವೀಂದ್ರನ್ ಅವರ ಆಸ್ತಿ ಮೌಲ್ಯ ಸುಮಾರು ₹17,545 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ನಂತರ ಕಂಪನಿಗೆ ಆರ್ಥಿಕ ಸಮಸ್ಯೆಗಳು ಶುರುವಾದವು. ಸಾಲದ ಒತ್ತಡ, ಉದ್ಯೋಗ ಕಡಿತ, ಹೂಡಿಕೆದಾರರ ಜಗಳ ಮತ್ತು ಕಾನೂನು ಸಮಸ್ಯೆಗಳು ಒಂದರ ಹಿಂದೆ ಒಂದಾಗಿ ಎದುರಾದವು. ಕೊನೆಗೆ ಕಂಪನಿಯ ಮೌಲ್ಯ ಕುಸಿದು, ಬೈಜು ಅವರ ಸಂಪತ್ತೂ ಶೂನ್ಯಕ್ಕೆ ಇಳಿದಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದ ಸ್ಟಾರ್ಟ್ಅಪ್‌ ಇತಿಹಾಸದಲ್ಲೇ ಇದು ದೊಡ್ಡ ಕುಸಿತಗಳಲ್ಲಿ ಒಂದಾಗಿ ಕಾಣಲಾಗುತ್ತಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories