ಭಾರತದ ಪ್ರಮುಖ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾದ Zerodha ಸ್ಥಾಪಕರಾದ ನಿತಿನ್ ಕಾಮತ್ ಮತ್ತು ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಅವರ ಬಗ್ಗೆ ನಾವಿಲ್ಲಿ ವಿವರಿಸುತ್ತಿದ್ದೇವೆ. ಮೂಲತಃ ಶಿವಮೊಗ್ಗದವರಾದ ಕಾಮತ್ ಸಹೋದರಿಬ್ಬರೂ ಕೂಡ ಈ ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಣಕಾಸು ಮತ್ತು ಉದ್ಯಮಶೀಲತೆಯ ಕ್ಷೇತ್ರದಲ್ಲಿ, ನಿಖಿಲ್ ಮತ್ತು ನಿತಿನ್ ಕಾಮತ್ ನಾವೀನ್ಯತೆ ಮತ್ತು ಯಶಸ್ಸಿಗೆ ಸಮಾನಾರ್ಥಕರಾಗಿದ್ದಾರೆ. ಭಾರತದ ಪ್ರಮುಖ ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾದ Zerodha ಸ್ಥಾಪಕರಾಗಿದ್ದು, ಇವರ ಸಾಧನೆಗೆ ತಾಯಿ ರೇವತಿ ಬೆನ್ನೆಲುಬಂತೆ. ತಂದೆ-ತಾಯಿ ಇಬ್ಬರಿಗೂ ಶಿಕ್ಷಣದ ಜೊತೆಗೆ ಚೆಸ್ ಆಟವನ್ನು ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಇದು ಬುದ್ಧಿವಂತಿಕೆ, ಚುರುಕುತನದ ಆಟವಾಗಿದೆ.
44 ವರ್ಷದ ನಿತಿನ್ ಕಾಮತ್ ವಿಶ್ವದ ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ 648 ನೇ ಸ್ಥಾನದಲ್ಲಿದ್ದು, 470 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಶಿವಮೊಗ್ಗದಲ್ಲಿ ಜನಿಸಿದ ನಿತಿನ್ ಕಾಮತ್ ಅವರು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. 2000 ರ ದಶಕದ ಆರಂಭದಲ್ಲಿ ವ್ಯಾಪಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಿತಿನ್ ಕಿರಿಯ ಸಹೋದರ ನಿಖಿಲ್ ಜೊತೆಗೆ ಝೆರೋಧಾವನ್ನು 2010ರಲ್ಲಿ ಸ್ಥಾಪಸಿದರು. ಈಗ ಕಂಪೆನಿ 30,000 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದೆ.
ನಿತಿನ್ ಕಾಮತ್ ಅವರು 2008ರಲ್ಲಿ ಸೀಮಾ ಪಾಟೀಲ್ ಅವರನ್ನು ಪತ್ನಿಯಾಗಿ ಸ್ವೀಕರಿಸಿದರು, ದಂಪತಿಗೆ ಒಂದು ಮಗುವಿದೆ. 2021 ರಲ್ಲಿ ಸೀಮಾ ಪಾಟೀಲ್ ಗೆ ನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈಗ ಅದರಿಂದ ಚೇತರಿಸಿಕೊಂಡಿದ್ದಾರೆ. 2024ರ ಫೆಬ್ರವರಿಯಲ್ಲಿ ಸ್ಟ್ರೋಕ್ ಆಗಿರುವ ಬಗ್ಗೆ ನಿತಿನ್ ಕಾಮತ್ ಪೋಸ್ಟ್ ಹಂಚಿಕೊಂಡಿದ್ದರು. ಈಗ ಚೇತರಿಸಿಕೊಂಡಿದ್ದಾರೆ.
37 ವರ್ಷದ ನಿಖಿಲ್ ಕಾಮತ್ ವಿಶ್ವದ ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ 1062 ನೇ ಸ್ಥಾನದಲ್ಲಿದ್ದು, 310 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ತಮ್ಮ ಅಣ್ಣ ನಿತಿನ್ ಕಾಮತ್ ಗೆ ಬೆನ್ನೆಲುಬಾಗಿ ನಿಂತಿದ್ದು, 2020 ರಲ್ಲಿ ಟ್ರೂ ಬೀಕನ್ ಅನ್ನು ಅಣ್ಣನ ಜೊತೆಗೆ ಸ್ಥಾಪಿಸಿದ್ದಾರೆ. 2021 ರಲ್ಲಿ ಅಭಿಜೀತ್ ಪೈ ಜೊತೆಗೆ ರಿಯಲ್ ಎಸ್ಟೇಟ್ ಹೂಡಿಕೆಗಳು ಮತ್ತು ಪ್ರಾಪ್ ಟೆಕ್ ಕಂಪನಿಯಾದ ಗೃಹಸ್ ಸ್ಥಾಪಿಸಿದ್ದಾರೆ.
ನಿಖಿಲ್ ಕಾಮತ್ 2024ರ ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಅತೀ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಓದಿರುವುದು 10 ನೇ ತರಗತಿ ಅಷ್ಟೇ. ಆದರೆ ಅತೀ ಸಣ್ಣ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.
2019 ರಲ್ಲಿ ಅಮಂಡಾ ಪುರವಂಕರ ಅವರ ಜೊತೆ ವಿವಾಹವಾದ ನಿಖಿಲ್ ಕಾಮತ್ ಬಳಿಕ 2021ರಲ್ಲಿ ವಿಚ್ಚೇಧನ ಪಡೆದರು.