ಫಿಕ್ಸಡ್ ಡೆಪಾಸಿಟ್ ಮೇಲಿನ ಬಡ್ಡಿದರ ಹೆಚ್ಚಿಸಿದ ಪ್ರಮುಖ ಬ್ಯಾಂಕ್‌ಗಳು

FD Interest Rates: RBI ಹಣಕಾಸು ನೀತಿ ಸಭೆಗೂ ಮುನ್ನವೇ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಠೇವಣಿದಾರರಿಗೆ ಒಳ್ಳೆಯ ಸುದ್ದಿ ನೀಡಿವೆ. FDಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.

Fixed Deposit Interest Rates Hike by Indian Banks mrq
ಹಣಕಾಸು ನೀತಿ ಸಭೆ

ಫೆಬ್ರವರಿ 7 ರಂದು RBI ಹಣಕಾಸು ನೀತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರೆಪೊ ದರ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

Fixed Deposit Interest Rates Hike by Indian Banks mrq
FDಗಳು

ಹಣಕಾಸು ನೀತಿ ಸಭೆಗೂ ಮುನ್ನವೇ, ಹಲವು ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು FDಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.


ಬ್ಯಾಂಕುಗಳ ಪಟ್ಟಿ

FD ಬಡ್ಡಿ ದರ ಹೆಚ್ಚಿಸಿರುವ ಬ್ಯಾಂಕುಗಳು - ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಶಿವಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಫೆಡರಲ್ ಬ್ಯಾಂಕ್.

PNB

PNB ಯಲ್ಲಿ 303 ದಿನಗಳಿಗೆ 7% ಬಡ್ಡಿ ದರ, 506 ದಿನಗಳಿಗೆ 6.7% ಬಡ್ಡಿ ದರ ನೀಡಲಾಗುತ್ತಿದೆ. ಜನವರಿ 1 ರಿಂದ ಈ ಹೊಸ ಬಡ್ಡಿ ದರಗಳು ಜಾರಿಗೆ ಬಂದಿವೆ

ಬಡ್ಡಿ ಜಾರಿ

ಜನವರಿ 1 ರಿಂದ ಈ ಹೊಸ ಬಡ್ಡಿ ದರಗಳು ಜಾರಿಗೆ ಬಂದಿವೆ. PNB 7 ದಿನಗಳಿಂದ 10 ವರ್ಷಗಳವರೆಗೆ 3.50% ರಿಂದ 7.25% ಬಡ್ಡಿಯನ್ನು ನೀಡುತ್ತಿದೆ. 400 ದಿನಗಳಿಗೆ 7.25% ಬಡ್ಡಿ.

ಕರ್ನಾಟಕ ಬ್ಯಾಂಕ್

7 ದಿನಗಳಿಂದ 10 ವರ್ಷಗಳವರೆಗೆ 3.5% ರಿಂದ 7.50% ಬಡ್ಡಿ ದರಗಳಿವೆ. 375 ದಿನಗಳಿಗೆ 7.50% ಬಡ್ಡಿ ಸಿಗುತ್ತಿದೆ. ದೀರ್ಘಃ ಸಮಯದ ಹೂಡಿಕೆಗೆ ಅಧಿಕ ಬಡ್ಡಿ ಲಭ್ಯವಾಗುತ್ತದೆ.

ಯೂನಿಯನ್ ಬ್ಯಾಂಕ್  ನಲ್ಲಿ 7 ರಿಂದ 10 ದಿನಗಳವರೆಗೆ ಗರಿಷ್ಠ 7.30% ಬಡ್ಡಿ ನೀಡಲಾಗುತ್ತಿದೆ. ಜನವರಿ 1 ರಿಂದ ಹೊಸ ಬಡ್ಡಿ ಜಾರಿಗೆ ಬರುತ್ತದೆ.

ಆಕ್ಸಿಸ್ ಬ್ಯಾಂಕ್

3 ಕೋಟಿ ರೂ. ಒಳಗಿನ ಠೇವಣಿಗಳಿಗೆ 3% ರಿಂದ 7.25% ವರೆಗೆ ಬಡ್ಡಿ ಸಿಗುತ್ತದೆ. 7 ದಿನಗಳಿಂದ 10 ವರ್ಷಗಳವರೆಗೆ ಈ ಬಡ್ಡಿ ದರಗಳು ಅನ್ವಯಿಸುತ್ತವೆ. ಜನವರಿ 27 ರಿಂದ ಹೊಸ ದರಗಳು ಜಾರಿಗೆ ಬಂದಿವೆ.

ಫೆಡರಲ್ ಬ್ಯಾಂಕ್

ಫೆಡರಲ್ ಬ್ಯಾಂಕ್ 7 ದಿನಗಳಿಂದ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ 3% ರಿಂದ 7.5% ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ 3.5% ರಿಂದ 8% ಬಡ್ಡಿ.

Latest Videos

click me!