ಈ ಕಂಪನಿಗಳಿಗೆ ಮಲುಗುವವರು ಬೇಕಾಗಿದ್ದಾರೆ, ನಿದ್ರೆ ಮಾಡಿದ್ರೆ ಡಾಲರ್‌ ಲೆಕ್ಕದಲ್ಲಿ ಸಂಬಳ ಸಿಗುತ್ತೆ!

Published : Feb 03, 2025, 10:46 AM IST

ಕೆಲಸ ಅಂದ್ರೆ ಒಂದು ದೊಡ್ಡ ಟೆನ್ಷನ್. ಜಾಸ್ತಿ ಸಂಬಳ ಅಂದ್ರೆ ಜಾಸ್ತಿ ಕೆಲಸ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ ಏನೂ ಕೆಲಸ ಮಾಡದೆ, ಹಾಯಾಗಿ ಮಲಗಿದ್ರೆ ಸಂಬಳ ಕೊಡೋ ಕೆಲಸಗಳಿವೆ ಅಂತ ಗೊತ್ತಾ? ಈಗ ಅಂಥಾ ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ.   

PREV
16
ಈ ಕಂಪನಿಗಳಿಗೆ ಮಲುಗುವವರು ಬೇಕಾಗಿದ್ದಾರೆ, ನಿದ್ರೆ ಮಾಡಿದ್ರೆ ಡಾಲರ್‌ ಲೆಕ್ಕದಲ್ಲಿ ಸಂಬಳ ಸಿಗುತ್ತೆ!

ಹೋಟೆಲ್‌ ನಿದ್ರೆ ಪರೀಕ್ಷಕ: ದೊಡ್ಡ ದೊಡ್ಡ ಹೋಟೆಲ್‌ಗಳು ತಮ್ಮ ಹೋಟೆಲ್‌ಗಳಲ್ಲಿರೋ ಬೆಡ್‌ಗಳು ಆರಾಮದಾಯಕವಾಗಿದೆಯಾ ಅಂತ ತಿಳಿದುಕೊಳ್ಳಲು ಉದ್ಯೋಗಿಗಳನ್ನ ನೇಮಿಸಿಕೊಳ್ಳುತ್ತಾರೆ. ಅವರು ಮಲಗಿ ನಿದ್ರೆ ಮಾಡಬೇಕು.

26

ವೃತ್ತಿಪರ ನಿದ್ದೆಗಾರ: ಪ್ರಸಿದ್ಧ ಹಾಸಿಗೆ ತಯಾರಕ ಕಂಪನಿಗಳು ನಿದ್ರೆ ಮಾಡುವವರಿಗೆ ಸಂಬಳ ಕೊಡುತ್ತವೆ. ಹಾಸಿಗೆ ಮೇಲೆ ಮಲಗಿದಾಗ ನಿದ್ರೆ ಹೇಗಿರುತ್ತೆ ಅಂತ ತಿಳಿದುಕೊಳ್ಳುತ್ತಾರೆ.

36

ನಿದ್ರೆ ಅಧ್ಯಯನ ಭಾಗಿ: ಕೆಲವು ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ದುಡ್ಡು ಕೊಟ್ಟು ಮಲಗಿ ಅಂತ ಹೇಳುತ್ತವೆ. ಮನುಷ್ಯ ನಿದ್ರೆ ಮಾಡುವಾಗ ಮೆದುಳಿನ ಕಾರ್ಯ ಹೇಗಿರುತ್ತೆ ಅಂತ ಪರೀಕ್ಷಿಸುತ್ತಾರೆ.

46

ವಿಮಾನಯಾನ ಸಂಸ್ಥೆಗಳಲ್ಲಿ: ಕೆಲವು ವಿಮಾನಯಾನ ಸಂಸ್ಥೆಗಳು ಫಸ್ಟ್‌ ಕ್ಲಾಸ್‌ ನಿದ್ರೆಯ ವ್ಯವಸ್ಥೆ ಹೇಗಿದೆ ಅಂತ ತಿಳಿದುಕೊಳ್ಳಲು ಜನರನ್ನ ನೇಮಿಸಿಕೊಳ್ಳುತ್ತವೆ.

56

ನಿದ್ರೆಗೆ ಬೋನಸ್‌: ಅಮೆರಿಕದ ಆಟ್ನಾ ಎಂಬ ಆರೋಗ್ಯ ವಿಮಾ ಕಂಪನಿ ತನ್ನ ಉದ್ಯೋಗಿಗಳಿಗೆ ನಿದ್ರೆ ಮಾಡಿದ್ರೆ ಬೋನಸ್‌ ಕೊಡುತ್ತೆ. 7-8 ಗಂಟೆ ನಿದ್ರೆ ಮಾಡಿದ್ರೆ 300 ಡಾಲರ್‌ ಬೋನಸ್‌ ಸಿಗುತ್ತೆ.

66

ನಿದ್ರೆಯ ಮೇಲೆ ಪ್ರಯೋಗಗಳು: ನಾಸಾ, ಹಾರ್ವರ್ಡ್‌ ವೈದ್ಯಕೀಯ ಶಾಲೆಗಳು ನಿದ್ರೆಯ ಮೇಲೆ ಪ್ರಯೋಗ ಮಾಡುತ್ತವೆ. ಇದರಲ್ಲಿ ಭಾಗವಹಿಸುವವರಿಗೆ ಉತ್ತಮ ಬಹುಮಾನ ಸಿಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories