Money Mistakes ಶ್ರೀಮಂತರು ಸಾಮಾನ್ಯವಾಗಿ ಈ 5 ಹಣಕಾಸಿನ ತಪ್ಪುಗಳನ್ನು ಮಾಡುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೋಟ್ಯಾಧಿಪತಿಯಾಗಲು, ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಶ್ರೀಮಂತರು ಮತ್ತಷ್ಟು ಸಂಪತ್ತು ಗಳಿಸಲು ಅನುಸರಿಸುವ ರಹಸ್ಯ ಮಾರ್ಗವೂ ಇದೇ ಆಗಿದೆ.
ಮಧ್ಯಮ ವರ್ಗದವರು ತಾವು ಶ್ರೀಮಂತರು ಎಂದು ತೋರಿಸಿಕೊಳ್ಳಲು ದುಬಾರಿ ಕಾರು, ಬ್ರಾಂಡೆಡ್ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ, ನಿಜವಾದ ಶ್ರೀಮಂತರು 'ಕಣ್ಣಿಗೆ ಕಾಣದ ಸಂಪತ್ತನ್ನು' (Invisible Wealth) ಹೆಚ್ಚಿಸುವುದರ ಮೇಲೆ ಗಮನ ಹರಿಸುತ್ತಾರೆ. ಅವರು ಹಳೆಯ ಕಾರು ಓಡಿಸಿದರೂ, ಅವರ ಬ್ಯಾಂಕ್ ಖಾತೆ ಬೆಳೆಯುತ್ತಲೇ ಇರುತ್ತದೆ. ಅವರಿಗೆ ಆಡಂಬರಕ್ಕಿಂತ 'ಸ್ವಾತಂತ್ರ್ಯ' ಮುಖ್ಯ.
25
ವಿವಿಧ ಆದಾಯದ ಮೂಲ
ಅನೇಕರು ತಮ್ಮ ತಿಂಗಳ ಸಂಬಳವನ್ನೇ ಸಂಪೂರ್ಣವಾಗಿ ನಂಬಿಕೊಂಡಿರುತ್ತಾರೆ. ಆದರೆ, ಕೋಟ್ಯಾಧಿಪತಿಗಳು ಸರಾಸರಿ 7 ವಿವಿಧ ಆದಾಯದ ಮೂಲಗಳನ್ನು (Passive Income) ಹೊಂದಿರುತ್ತಾರೆ. ಒಂದು ದಾರಿ ಮುಚ್ಚಿದರೂ, ಉಳಿದ ಮೂಲಗಳು ಅವರನ್ನು ಕಾಪಾಡುತ್ತವೆ. ಶೇರು ಮಾರುಕಟ್ಟೆ ಲಾಭ, ಬಾಡಿಗೆ ಆದಾಯ, ವ್ಯಾಪಾರದಲ್ಲಿನ ಹೂಡಿಕೆಗಳು ಇದರಲ್ಲಿ ಸೇರಿವೆ.
35
ಹಣವನ್ನು ಹೂಡಿಕೆ
ಹಣವನ್ನು ಬ್ಯಾಂಕಿನಲ್ಲಿ ಹಾಗೆಯೇ ಇಟ್ಟರೆ ಹಣದುಬ್ಬರದಿಂದ (Inflation) ಅದರ ಮೌಲ್ಯ ಕಡಿಮೆಯಾಗುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಸಾಮಾನ್ಯ ಜನರು ಹಣವನ್ನು ಉಳಿತಾಯ (Saving) ಮಾಡುತ್ತಾರೆ. ಆದರೆ ಶ್ರೀಮಂತರು ಹಣವನ್ನು ಹೂಡಿಕೆ (Invest) ಮಾಡುತ್ತಾರೆ. ನೀವು ಹಣಕ್ಕಾಗಿ ದುಡಿಯುವಂತೆ, ಹಣವೂ ನಿಮಗಾಗಿ 24 ಗಂಟೆಗಳ ಕಾಲ ದುಡಿಯಬೇಕು ಎನ್ನುವುದೇ ಅವರ ತತ್ವ.
45
ಅನಗತ್ಯ ಸಾಲ ಮಾಡಿ ಆಸ್ತಿಗಳನ್ನು ಖರೀದಿಸುವುದಿಲ್ಲ
ಶ್ರೀಮಂತರಿಗೆ ಮಾನಸಿಕ ಒತ್ತಡ ಅಥವಾ ಅತಿಯಾದ ಸಂತೋಷದ ಸಮಯದಲ್ಲಿ ವಸ್ತುಗಳನ್ನು ಖರೀದಿಸುವ ಅಭ್ಯಾಸವಿರುವುದಿಲ್ಲ. ಏನನ್ನಾದರೂ ಖರೀದಿಸುವ ಮೊದಲು, 'ಇದು ನನ್ನ ಅಗತ್ಯವೇ ಅಥವಾ ಕೇವಲ ಆಸೆಯೇ?' ಎಂದು ಯೋಚಿಸುತ್ತಾರೆ. ವಿಶೇಷವಾಗಿ, ಅನಗತ್ಯ ಸಾಲ ಮಾಡಿ ಆಸ್ತಿಗಳನ್ನು ಖರೀದಿಸುವುದಿಲ್ಲ. ಉದಾಹರಣೆಗೆ, ಸಾಲದಲ್ಲಿ ಫೋನ್ ಖರೀದಿಸುವುದು ಅವರಿಗೆ ಇಷ್ಟವಾಗದ ವಿಚಾರ.
55
ಹೊಸ ಹೂಡಿಕೆ ವಿಧಾನ
'ನನಗೆ ಎಲ್ಲವೂ ತಿಳಿದಿದೆ' ಎಂದು ಭಾವಿಸುವುದೇ ಅತಿದೊಡ್ಡ ಹಣಕಾಸಿನ ತಪ್ಪು. ಶ್ರೀಮಂತರು ಯಾವಾಗಲೂ ಹಣದ ಬಗ್ಗೆ ಪುಸ್ತಕಗಳನ್ನು ಓದುವುದು ಮತ್ತು ಹೊಸ ಹೂಡಿಕೆ ವಿಧಾನಗಳನ್ನು ಕಲಿಯುವುದರಲ್ಲಿ ಸಮಯ ಕಳೆಯುತ್ತಾರೆ. ಅವರು ಹಣಕಾಸು ಸಲಹೆಗಾರರ ಸಲಹೆ ಪಡೆಯಲು ಎಂದಿಗೂ ಹಿಂಜರಿಯುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.