ಡಿಮಾರ್ಟ್‌ನಲ್ಲಿ ಹೆಚ್ಚಾದ ಕಳ್ಳತನ; ಮ್ಯಾನೇಜ್ಮೆಂಟ್‌ನಿಂದ ಶಿಸ್ತು ಕ್ರಮ, ಗ್ರಾಹಕರೇ ಇದು ನಿಮ್ಮ ಗಮನದಲ್ಲಿಯೂ ಇರಲಿ

Published : Aug 23, 2025, 11:33 PM IST

ಡಿಮಾರ್ಟ್‌ನಲ್ಲಿ ಚಾಕೊಲೇಟ್, ಸ್ನ್ಯಾಕ್ಸ್, ಪರ್ಫ್ಯೂಮ್, ಕಾಸ್ಮೆಟಿಕ್ಸ್‌ ಮತ್ತು ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳನ್ನ ಪ್ರತ್ಯೇಕವಾಗಿ ಇಡಲಾಗುತ್ತದೆ. ಆದ್ರೂ ಗ್ರಾಹಕರು ಶಾಪಿಂಗ್ ಮಾಡುವಾಗ ಮುಂಜಾಗ್ರತ ಕ್ರಮವಾಗಿ  ತೆಗೆದುಕೊಳ್ಳಬೇಕು.

PREV
15
ಡಿ-ಮಾರ್ಟ್‌ನಲ್ಲಿ ಗ್ರಾಹಕರು ಗಮನಿಸಬೇಕಾದ ಅಂಶಗಳು

ಡಿಮಾರ್ಟ್ ಶಾಪಿಂಗ್ ಮಾಲ್ ಅಗ್ಗದ ಬೆಲೆಗೆ ಫೇಮಸ್. ಹಾಗಾಗಿಯೇ ಇಲ್ಲಿ ಗ್ರಾಹಕರ ಜನಸಂದಣಿ ಅತ್ಯಧಿಕವಾಗಿರುತ್ತದೆ. ಆದ್ರೆ ಇತ್ತೀಚೆಗೆ ಡಿಮಾರ್ಟ್‌ನಲ್ಲಿ ಸಣ್ಣಪುಟ್ಟ ಕಳ್ಳತನಗಳು ಜಾಸ್ತಿ ಆಗ್ತಿವೆ ಅಂತ ಗೊತ್ತಾಗಿದೆ. ಹಾಗಾಗಿ ಡಿ ಮಾರ್ಟ್ ಮ್ಯಾನೇಜ್ಮೆಂಟ್ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದೆ.

25
ಡಿ-ಮಾರ್ಟ್ ಶಾಪಿಂಗ್

ಡಿಮಾರ್ಟ್‌ನಲ್ಲಿ ಚಾಕೊಲೇಟ್, ಸ್ನ್ಯಾಕ್ಸ್, ಪರ್ಫ್ಯೂಮ್, ಕಾಸ್ಮೆಟಿಕ್ಸ್‌ ಮತ್ತು ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳನ್ನ ಪ್ರತ್ಯೇಕವಾಗಿ ಇಡಲಾಗುತ್ತದೆ. ಕೆಲವು ಗ್ರಾಹಕರು ತಿಂಡಿಯನ್ನು ಟ್ರಯಲ್ ರೂಮ್‌ನಲ್ಲಿ ತಿಂದು / ಉಪಯೋಗಿಸಿ ಬಿಡ್ತಾರೆ. ಟ್ರಯಲ್ ರೂಮ್‌ನಲ್ಲಿ ಸಿಸಿಟಿವಿ ಇಲ್ಲದ್ದರಿಂದ ಇದನ್ನ ತಡೆಯೋಕೆ ಆಗ್ತಿಲ್ಲ.

35
ಡಿ-ಮಾರ್ಟ್ ಸಮಸ್ಯೆ

ಕೆಲವರು ಬ್ಯಾಗ್/ಬಟ್ಟೆಯಲ್ಲಿ ವಸ್ತುಗಳನ್ನ ಮುಚ್ಚಿಟ್ಟು ಹೊರಗೆ ತೆಗೆದುಕೊಂಡು ಹೋಗ್ತಾರೆ. ಕೆಲವರು ಕೂಲ್‌ಡ್ರಿಂಕ್ಸ್‌ ಕುಡಿದು ಖಾಲಿ ಬಾಟಲಿ ಇಟ್ಟು ಹೋಗ್ತಾರೆ. ತಜ್ಞರ ಪ್ರಕಾರ, ಡಿಮಾರ್ಟ್‌ ಒಂದರಲ್ಲಿ ಪ್ರತಿದಿನ ₹5,000 - ₹10,000 ನಷ್ಟ ಆಗುತ್ತದೆ

45
ಗ್ರಾಹಕರ ರಕ್ಷಣೆ

ಕಳ್ಳತನ ತಡೆಯಲು ಡಿಮಾರ್ಟ್ ಬೆಲೆಬಾಳುವ ವಸ್ತುಗಳನ್ನ ಲಾಕ್ ಮಾಡಿಟ್ಟಿದ್ದಾರೆ. ಹಾಗೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಸ್ಟಾಫ್‌ಗೆ ಗ್ರಾಹಕರ ಮೇಲೆ ನಿಗಾ ಇಡಲು ಹೇಳಿದ್ದಾರೆ. ಸ್ಮಾರ್ಟ್ ಸೆನ್ಸರ್ ಉಪಯೋಗಿಸ್ತಿದ್ದಾರೆ. ಆದ್ರೂ ಸಮಸ್ಯೆ ಪೂರ್ತಿ ಬಗೆಹರಿದಿಲ್ಲ.

55
ಡಿ-ಮಾರ್ಟ್ ಕಳ್ಳತನ

ಕಳ್ಳತನ ಮಾಡುವವರು ಸಿಕ್ಕಿಬಿದ್ದಾಗ ಸ್ಟಾಫ್ ಜೊತೆ ಜಗಳ ಮಾಡ್ತಾರೆ. "ನಮ್ಮನ್ನ ಕಳ್ಳ ಅಂತ ಟ್ರೀಟ್ ಮಾಡ್ತಿದ್ದೀರಾ?" ಅಂತ ಗ್ರಾಹಕರು ಕೇಳ್ತಾರೆ. ತಜ್ಞರ ಪ್ರಕಾರ, ಗ್ರಾಹಕರಿಗೆ ಜಾಗೃತಿ ಮೂಡಿಸಿ, ಕಾನೂನು ಕ್ರಮ ಜಾರಿಗೊಳಿಸಿ, ಶಿಕ್ಷೆ ವಿಧಿಸಿದ್ರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ.

Read more Photos on
click me!

Recommended Stories